ಬೆಂಗಳೂರು: ರಾಜ್ಯದ ಆರೋಗ್ಯ ಸಿಬ್ಬಂದಿ(Health Workers) ಇಂದು ಕ್ರಿಕೆಟ್ ಆಡುವ ಮೂಲಕ ಕ್ಷಯರೋಗದ(Tuberculosis) ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ. ಮಹಾಮಾರಿ ಕೊರೊನಾದಿಂದಾಗಿ ಬಿಜಿಯಾಗಿದ್ದ ಆರೋಗ್ಯ ಇಲಾಖೆಯ ಕ್ಷಯರೋಗ ವಿಭಾಗದ ಸಿಬ್ಬಂದಿ ಇಂದು ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿ ಕ್ರಿಕೆಟ್ ಆಡಿ ಅರಿವು ಮೂಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಡಾಕ್ಟರ್ ಸುದರ್ಶನ್ ಬಲ್ಲಾಳ್ ಸೇರಿದಂತೆ ಹಲವು ಹಿರಿಯ ವೈದ್ಯರು ಭಾಗಿಯಾಗಿದ್ದಾರೆ.
ರಾಜ್ಯದಲ್ಲಿ ಕ್ಷಯರೋಗ ಪತ್ತೆಯಾಗುವ ಸಾಧ್ಯತೆ ಇದೆ. ಏಕೆಂದರೆ ಜನರಿಗೆ ಕೋವಿಡ್ ಬಂದು ಹೋದ ಮೇಲೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಅವರಿಗೆ ಕ್ಷಯರೋಗ ಹರಡುವ ಸಾಧ್ಯತೆ ಇದೆ. ಆದ್ದರಿಂದಾಗಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಕ್ಷಯರೋಗ ವಿಭಾಗದಿಂದ ಅರಿವು ಮೂಡಿಸುವ ಕಾರ್ಯಕ್ರಮ ನಡೆದಿದೆ. ರಾಜ್ಯದ 16 ಜಿಲ್ಲೆಗಳಿಂದ ಬಂದ ಆರೋಗ್ಯ ಸಿಬ್ಬಂದಿ ಕ್ರಿಕೆಟ್ ಆಡಿ ಅರಿವು ಮೂಡಿಸಿ ತಾವೂ ಕೂಡ ಎಂಜಾಯ್ ಮಾಡಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ನ ಗ್ರೌಂಡ್ ಒಂದರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿ ಬಂದು ಹದಿನಾರು ತಂಡಗಳಲ್ಲಿ ಕ್ರಿಕೆಟ್ ಆಡುವ ಮೂಲಕ ಕ್ಷಯರೋಗವನ್ನು ನಿಯಂತ್ರಣ ಮಾಡಲು ಹೊರಟಿದ್ದಾರೆ
ಕೊರೊನ ವೈರಸ್ ಕ್ಕಿಂತ ಕ್ಷಯರೋಗ ತುಂಬಾ ಅಪಾಯಕಾರಿ. ಒಂದು ವೈರಸ್ ಆಗಿ ಗಾಳಿಯಲ್ಲಿ ಕಡಿಮೆ ದೂರ ಸಂಚಾರ ಮಾಡಿದ್ರೇ ಕ್ಷಯರೋಗ ಬ್ಯಾಕ್ಟೀರಿಯ ಆಗಿ ಗಾಳಿಯಲ್ಲಿ ಜಾಸ್ತಿ ಕಾಲ ಸಂಚಾರ ಮಾಡುತ್ತೇ. ಇನ್ನೂ ಇದು ಬ್ಯಾಕ್ಟೀರಿಯಾ ಆಗಿರುವುದರಿಂದ ಇದು ನಿಮ್ಮ ದೇಹಕ್ಕೆ ಎಂಟ್ರಿ ಕೊಟ್ರೆ ನಿಮ್ಮ ದೇಹ ವೀಕ್ ಆಗುತ್ತದೆ. ಈ ರೀತಿ ವೀಕ್ ಆದಾಗಾ ಕ್ಷಯರೋಗ ಅಟ್ಯಾಕ್ ಮಾಡುತ್ತದೆ ಹಾಗೆ ನಿಮ್ಮ ಕೂದಲು ಮತ್ತು ಉಗುರು ಬಿಟ್ಟು ದೇಹದಲ್ಲಿ ಇರುವ ಯಾವುದೇ ಪಾರ್ಟ್ ಮೇಲೆ ಕ್ಷಯರೋಗ ಅಟ್ಯಾಕ್ ಮಾಡುವ ಸಾಧ್ಯತೆ ಇದ್ದು ಒಬ್ಬ ಕ್ಷಯರೋಗ ವ್ಯಕ್ತಿ ಹದಿನೈದು ಜನರ ಜೊತೆಗೆ ಸಂಪರ್ಕ ಮಾಡಿದ್ರೇ ಹದಿನೈದು ಜನರಿಗೆ ಕ್ಷಯರೋಗ ಬರುವ ಸಾಧ್ಯೆತೆ ಇದೆ. ಹೀಗಾಗಿ ವಾತಾವರಣ ತಂಪಾಗಿರುವ ಹಿನ್ನೆಲೆಯಲ್ಲಿ ಕೊರೊನ ಇರುವಾಗ ಜನರು ಹೇಗೆ ಮಾಸ್ಕ್ ಸಾಮಾಜಿಕ ಅಂತರ ಪಾಲನೆ ಮಾಡ್ತಿದ್ರೋ ಹಾಗೆಯೇ ಕ್ಷಯರೋಗ ವಿಚಾರದಲ್ಲಿ ಕೂಡ ಅದನ್ನು ಪಾಲನೆ ಮಾಡಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಡಾಕ್ಟರ್ ಸುದರ್ಶನ್ ಬಲ್ಲಾಳ್. ಮಣಿಪಾಲ್ ಹಾಸ್ಪಿಟಲ್
ಇನ್ನೂ ಕ್ಷಯರೋಗ ಕಂಟ್ರೋಲ್ ವಿಚಾರದಲ್ಲಿ ಸರ್ಕಾರದ ಆರೋಗ್ಯ ಸಿಬ್ಬಂದಿ ಏನೇ ಮಾಡಬೇಕಾದರು ಜನರ ಸಪೋರ್ಟ್ ಬೇಕು ಹಾಗೆಯೇ ಖಾಸಗಿ ವಲಯದ ಸಪೋರ್ಟ್ ಕೂಡ ಬೇಕು. ನಿಮ್ಮ ಎಲ್ಲಾ ಸಪೋರ್ಟ್ ಇದ್ದರೆ ನಾವು ಕರ್ನಾಟಕದಿಂದ ಕ್ಷಯರೋಗವನ್ನು ಕಂಟ್ರೋಲ್ ಮಾಡಲು ಸಾದ್ಯ. ಹೀಗಾಗಿ ಎಂಡ್ ಟಿಬಿ ಹೆಸರಲ್ಲಿ ಕ್ರಿಕೆಟ್ ಆಡುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ ಎಂದು ಸರ್ಕಾರದ ವೈದ್ಯರ ಮಾತು.
ಡಾಕ್ಟರ್. ಶಿವೇಗೌಡ. BBMP ಮೆಡಿಕಲ್ ಆಫೀಸರ್ CV ರಾಮನ್ ಹಾಸ್ಪಿಟಲ್
ಒಟ್ಟಿನಲ್ಲಿ ಕೊರೊನಾಕ್ಕಿಂತ ಕ್ಷಯರೋಗದ ಬ್ಯಾಕ್ಟೀರಿಯಾ ತುಂಬಾ ಡೇಂಜರ್ ಆದರೆ ಎರಡಕ್ಕೂ ಒಂದೇ ರಾಮಬಾಣ ಅದು ಮಾಸ್ಕ್ ಮತ್ತು ಸಾಮಾಜಿಕ ಅಂತರ ಜನರು ಇವುಗಳನ್ನು ಪಾಲನೆ ಮಾಡಿದ್ರೇ ಸಾಕು ಬ್ಯಾಕ್ಟೀರಿಯಾ ಮತ್ತು ವೈರಸ್ ನಿಂದ ದೂರ ಇರಲು ಸಾಧ್ಯವಾಗುತ್ತೆ. ಹೀಗಾಗಿ ಜನರೇ ನಗರದಲ್ಲಿ ವಾತಾವರಣ ತಂಪಾಗಿದೆ ಎಂಜಾಯ್ ಮಾಡುವ ಎಂದು ಹೊರಗೆ ಹೋಗಬೇಡಿ ಹೊರಗೆ ಹೋಗುವ ಮುನ್ನ ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡಿದ್ರೇ ನಿಮ್ಮ ಜೊತೆಗೆ ನಮ್ಮ ಅಕ್ಕ ಪಕ್ಕ ಜನರು ಕೂಡ ಸೇಫ್.
ವರದಿ: ಬಾಲಾಜಿ, ಟಿವಿ 9 ಬೆಂಗಳೂರು.
ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ