ಕಾರಂಜಿ ಆಂಜನೇಯ ದೇಗುಲದ ಬಳಿ ಕಲ್ಯಾಣ ಮಂಟಪ; ಇಸ್ಕಾನ್‌ಗೆ ಜಾಗ ನೀಡಲು ಅನುಮೋದನೆ ಸಿಗಲಿಲ್ಲ -ಸಚಿವ ಸಂಪುಟ ಸಭೆ ನಿರ್ಧಾರ
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಸ್ಕಾನ್‌ಗೆ ಜಾಗ ನೀಡಲು ಅನುಮೋದನೆ ಸಿಗಲಿಲ್ಲ ಎಂದು ಸಂಪುಟ ಸಭೆಯ ಬಳಿಕ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ವಿಚಾರಗಳು ಸೇರಿದಂತೆ ಗುರುವಾರ ಸಂಪುಟ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಕುರಿತಾಗಿ ಚರ್ಚೆ ನಡೆದಿದೆ. ಸದ್ಯ ಸಂಪುಟ ಸಭೆಯಲ್ಲಿ ಕಾರಂಜಿ ಆಂಜನೇಯ ದೇಗುಲದ ಬಳಿ ಅಪೂರ್ಣಗೊಂಡ ಕಲ್ಯಾಣ ಮಂಟಪ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ. ಶೃಂಗೇರಿ ಶಂಕರಪೀಠಕ್ಕೆ ಇದರ ಹೊಣೆ ನೀಡಲಾಗಿದೆ. ಬರುವ ಆದಾಯ 50/50 ಮಾಡಿಕೊಳ್ಳುವ ಒಪ್ಪಂದವಾಗಿದೆ.
ಇನ್ನು ಕುಡಿಯುವ ನೀರು ಪೂರೈಕೆಗೆ ಸಂಪುಟ ಸಮ್ಮತಿ ನೀಡಿದೆ. ಅಪ್ಪರ್ ಭದ್ರಾದಿಂದ ಪೈಪ್ ಲೈನ್ ಮೂಲಕ ನೀರು ಬಿಡುವ ಯೋಜನೆಗೆ 1300 ಕೋಟಿ ರೂ ಅನುದಾನಕ್ಕೆ ಒಪ್ಪಿಗೆ ನೀಡಿದೆ. ಚಿಕ್ಕಮಗಳೂರಿನ 146 ಹಳ್ಳಿಗಳು, ತರಿಕೇರಿಯ 156 ಹಳ್ಳಿಗಳು, ಅಜ್ಜಂಪುರ, ಹೊಸದುರ್ಗ 346 ಹಳ್ಳಿಗಳಿಗೆ ಭದ್ರಾಮೇಲ್ದಂಡೆ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಇಂದಿನ ಸಂಪುಟ ಸಭೆಯಲ್ಲಿ ಸಮ್ಮತಿ ನೀಡಲಾಗಿದೆ.
ಬಳ್ಳಾರಿಯಲ್ಲಿ 198 ಎಕರೆ ಜಮೀನಿನಲ್ಲಿ ಲೇಔಟ್ಗೆ ಅನುಮತಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಳ್ಳಾರಿಯಲ್ಲಿ 198 ಎಕರೆ ಜಮೀನಿನಲ್ಲಿ ಲೇಔಟ್ಗೆ ಅನುಮತಿ ನೀಡಲಾಗಿದೆ. ಬಳ್ಳಾರಿಯ ಗೋನಾಳ್ ಬಳಿ ಲೇಔಟ್ ನಿರ್ಮಾಣಕ್ಕೆ ಸಮ್ಮತಿ ಸಿಕ್ಕಿದ್ದು ಅಟಲ್ ನಗರ ಪುನರುತ್ಥಾನದಡಿ ನಗರಗಳ ಅಭಿವೃದ್ಧಿ ಮಾಡಲಾಗುತ್ತಿದೆ. 1 ಲಕ್ಷ ಮೇಲ್ಪಟ್ಟ ಜನಸಂಖ್ಯೆವುಳ್ಳ ನಗರಗಳಲ್ಲಿ ಯುಜಿಡಿ ಕೆಲಸ. ಸುಮಾರು 287 ನಗರಗಳು ಇದಕ್ಕೆ ಸೇರಲಿವೆ. ಕೇಂದ್ರ & ರಾಜ್ಯದ ಅನುದಾನದಲ್ಲಿ ಕೆಲಸಗಳು ನಡೆಯಲಿವೆ. ಪ್ರಸ್ತುತ 927 ಕೋಟಿ ಮೀಸಲಿಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ದೇವದುರ್ಗದ 28 ಕೆರೆಗಳಿಗೂ ನೀರು ತುಂಬಿಸಲಾಗುತ್ತದೆ. ಇದಕ್ಕಾಗಿ 339 ಕೋಟಿ ಹಣವನ್ನ ಮೀಸಲಿಡಲಾಗಿದೆ. ಸುಮಾರು 150.05 ಕೋಟಿ ವೆಚ್ಚದಲ್ಲಿ ಬೆಂಗಳೂರು ಹೊರವಲಯದ ವರ್ತೂರು ಕೋಡಿ ಪ್ಲೈಓವರ್ ರಸ್ತೆ ನಿರ್ಮಾಣ ಮಾಡುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ರು.
ಇಸ್ಕಾನ್‌ಗೆ ಜಾಗ ನೀಡಲು ಅನುಮೋದನೆ ಸಿಗಲಿಲ್ಲ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಸ್ಕಾನ್‌ಗೆ ಜಾಗ ನೀಡಲು ಅನುಮೋದನೆ ಸಿಗಲಿಲ್ಲ ಎಂದು ಸಂಪುಟ ಸಭೆಯ ಬಳಿಕ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:59 pm, Thu, 12 May 22