ಬೆಂಗಳೂರಿನಲ್ಲಿ ಮಳೆ ಅವಾಂತರ: ಜಲಾವೃತಗೊಂಡ ರಸ್ತೆಗಳು, ಮರ ಬಿದ್ದು ಅನೇಕ ಕಡೆ ಸಂಚಾರ ವ್ಯತ್ಯಯ

|

Updated on: Jun 02, 2024 | 11:20 AM

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಬಿಟಿಎಂ ಲೇಔಟ್‌ನಲ್ಲಿ ಮರ ಬಿದ್ದ ಕಾರಣ ಅರವಿಂದ ಜಂಕ್ಷನ್ ಕಡೆಗೆ ಕೂಡ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಯಲಚೇನಹಳ್ಳಿಯ ಕನಕನಗರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ.

ಬೆಂಗಳೂರಿನಲ್ಲಿ ಮಳೆ ಅವಾಂತರ: ಜಲಾವೃತಗೊಂಡ ರಸ್ತೆಗಳು, ಮರ ಬಿದ್ದು ಅನೇಕ ಕಡೆ ಸಂಚಾರ ವ್ಯತ್ಯಯ
ಬೆಂಗಳೂರು ಮಳೆ
Follow us on

ಬೆಂಗಳೂರು, ಜೂನ್.02: ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ 4 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ (Karnataka Rain). ಈಗಾಗಲೇ ಮುಂಗಾರು ಮಾರುತ ಕೇರಳ ರಾಜ್ಯ ಪ್ರವೇಶಿಸಿದೆ. ಕೇರಳ ನಂತರ ಕರ್ನಾಟಕಕ್ಕೆ ಪ್ರವೇಶಿಸಲಿದೆ. ಕಳೆದ ವರ್ಷ ಜೂನ್ 15ರಂದು ಮುಂಗಾರು ಮಾರುತ ಪ್ರವೇಶಿಸಿತ್ತು. ಆದರೆ ಈ ಬಾರಿ ಅವಧಿಗೆ ಮೊದಲೇ ರಾಜ್ಯಕ್ಕೆ ಮುಂಗಾರು ಮಾರುತ ಪ್ರವೇಶ ಮಾಡಲಿದೆ. ಹೀಗಾಗಿ ಹವಾಮಾನ ಇಲಾಖೆ ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (Bengaluru Rain) 5 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಈಗಾಗಲೇ ಮಳೆಗೆ ನಗರದ ಅನೇಕ ಕಡೆ ಭಾರಿ ಅವಾಂತರಗಳು ಸಂಭವಿಸಿವೆ. ಇದರ ವಿವರ ಇಲ್ಲಿದೆ.

ಬೆಂಗಳೂರು ನಗರದಲ್ಲಿ ನಿನ್ನೆ ತಡರಾತ್ರಿವರೆಗೂ ಭಾರಿ ಮಳೆ ಸುರಿದಿದ್ದು 29.6 ಸೆಂ.ಮೀ ಮಳೆ ದಾಖಲಾಗಿದೆ. ಬೆಂಗಳೂರಿನ ಹೆಚ್​ಎಲ್​ನಲ್ಲಿ ನಿನ್ನೆ 50.5 ಸೆಂ.ಮೀ. ಮಳೆಯಾಗಿದ್ದು ಇಂದು ಸಹ ಬೆಂಗಳೂರಿನ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ.

ಮನೆಗಳಿಗೆ ನುಗ್ಗಿದ ಮಳೆ ನೀರು

ಇನ್ನು ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಯಲಚೇನಹಳ್ಳಿಯ ಕನಕನಗರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಬಿಬಿಎಂಪಿ ನಿರ್ಲಕ್ಷ್ಯಕ್ಕೆ 15 ವರ್ಷಗಳಿಂದ ನಿವಾಸಿಗಳು ಪರದಾಡುತ್ತಿದ್ದಾರೆ. ಹೀಗಾಗಿ ನಿವಾಸಿಗಳು ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೊಳಚೆ ನೀರು, ಮಳೆ ನೀರು, ಚರಂಡಿ ನೀರು ಬಡಾವಣೆಗೆ ಎಂಟ್ರಿ ಕೊಡ್ತಿದೆ. ಮಳೆಯಿಂದ ಏರಿಯಾದ ಗಲ್ಲಿ ಗಲ್ಲಿಯಲ್ಲೂ ರಸ್ತೆ ಕುಸಿದಿದೆ. ನಿನ್ನೆ ರಾತ್ರಿ ರಸ್ತೆಗುಂಡಿಗೆ ಬಿದ್ದಿದ್ದ ಬಾಲಕನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮಳೆಯ ಆರ್ಭಟಕ್ಕೆ ರಸ್ತೆಯಲ್ಲಿ 3 ಅಡಿಗಿಂತ ಹೆಚ್ಚು ನೀರು ತುಂಬಿದೆ. ಸಮಸ್ಯೆ ಬಗ್ಗೆ ಹಲವು ಬಾರಿ ಗಮನಕ್ಕೆ ತಂದಿದ್ದರೂ ಸರಿಪಡಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕನಕನಗರ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಮಳೆಯಿಂದ ಭಾರೀ ಅವಾಂತರ: 2 ಸಾವಿರ ಬಾಳೆ ಗಿಡಗಳು ನಾಶ

ಜೆ.ಪಿ.ನಗರದ ಬಳಿ ಮರ ಬಿದ್ದ ಕಾರಣ ಶಾಲಿನಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ, ದಯವಿಟ್ಟು ಸಹಕರಿಸಿ ಎಂದು ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಬಿಟಿಎಂ ಲೇಔಟ್‌ನಲ್ಲಿ ಮರ ಬಿದ್ದ ಕಾರಣ ಅರವಿಂದ ಜಂಕ್ಷನ್ ಕಡೆಗೆ ಕೂಡ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಕಸ್ತೂರಿ ನಗರ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಕಸ್ತೂರಿ ನಗರದಿಂದ ಹೆಬ್ಬಾಳ ಕಡಗೂ ಸಂಚಾರದಲ್ಲಿ ಸಮಸ್ಯೆಯಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ