AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ ಬಸ್​ನಲ್ಲಿ ಕಿತ್ತಾಟ: ಚಾಲಕನನ್ನು ಫುಟ್​ ಬೋರ್ಡ್​ಗೆ ಎಳೆದು ತಂದ ಪ್ರಯಾಣಿಕ

ಬಿಎಂಟಿಸಿ ಬಸ್​ನಲ್ಲಿ ಕಿತ್ತಾಟ: ಚಾಲಕನನ್ನು ಫುಟ್​ ಬೋರ್ಡ್​ಗೆ ಎಳೆದು ತಂದ ಪ್ರಯಾಣಿಕ

ಜಗದೀಶ ಬಿ.
| Edited By: ವಿವೇಕ ಬಿರಾದಾರ|

Updated on: Jun 02, 2024 | 10:21 AM

Share

ಬಿಎಂಟಿಸಿ ಬಸ್​ನಲ್ಲಿ ಆಗಾಗ ಚಾಲಕ ಅಥವಾ ನಿರ್ವಾಹಕ ಮತ್ತು ಪ್ರಯಾಣಿಕನ ನಡುವೆ ಗಲಾಟೆಗಳು ನಡೆಯುತ್ತಿರುತ್ತವೆ. ಹಾಗೆ, ಚಾಲಕ ಮತ್ತು ಪ್ರಯಾಣಿಕ ಕಿತ್ತಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೆಂಗಳೂರು, ಜೂನ್​. 02: ಬೃಹತ್​ ಬೆಂಗಳೂರು ಮಹಾನಗರ ಸಾರಿಗೆ (BMTC) ಚಾಲಕ ಹಾಗೂ ಪ್ರಯಾಣಿಕನ ನಡುವೆ ಗಲಾಟೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ಗಿದೆ. ವಿಡಿಯೋದಲ್ಲಿ ಪ್ರಯಾಣಿಕ ಕ್ಷಮೆ ಕೇಳುವಂತೆ ಹೇಳುತ್ತಾನೆ. ಬಳಿಕ ಇಬ್ಬರೂ ಕೈ ಕೈ ಮಿಲಾಯಿಸುತ್ತಾರೆ. ಈ ವೇಳೆ ನಿರ್ವಾಹಕ ತಡೆಯಲು ಯತ್ನಿಸುತ್ತಾನೆ. ಆದರೆ ಪ್ರಯಾಣಿಕ ಬಸ್​ ಚಾಲಕನನ್ನು ಎಳೆದು ಫುಟ್​ಬೋರ್ಡ್​ಗೆ ಹಾಕುತ್ತಾನೆ.

ಈ ವಿಡಿಯೋವನ್ನು ಚೇತನ್​ ಸೂರ್ಯ ಎಸ್​ ಎಂಬುವರು ಜೂ.01 ರಂದು ಎಕ್ಸ್​ (ಟ್ವಿಟರ್)ನಲ್ಲಿ ಟ್ವೀಟ್​ ಮಾಡಿದ್ದು, ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಈ ವಿಡಿಯೋವನ್ನು ಮೇ 30 ರಂದು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾಗಿದೆ. ಸಲಿಯತ್ತಾಗಿ ಈ ಘಟನೆ ನಡೆದಿದ್ದು ಯಾವಾಗ ಎಂಬುವುದು ತನಿಖೆ ನಂತರ ತಿಳಿದು ಬರಲಿದೆ.

ಇನ್ನು ಚೇತನ್​ ಸೂರ್ಯ ಎಸ್​ ಅವರ ಪೋಸ್ಟ್​ಗೆ ಬೆಂಗಳೂರಯ ಸಂಚಾರಿ ಪೊಲೀಸರು ಪ್ರತಿಕ್ರಿಯಿಸಿದ್ದು, ಘಟನೆ ನಡೆದ ಸ್ಥಳವನ್ನು ತಿಳಿಸಿ ಎಂದು ಕಾಮೆಂಟ್​ ಮಾಡಿದ್ದಾರೆ. ಹಾಗೆ ಕೆಎಸ್​ಆರ್​ಟಿಸಿ ಸಂಸ್ಥೆ ಕೂಡ ಪ್ರತಿಕ್ರಿಯಿಸಿದ್ದು, ಬಿಎಂಟಿಸಿಗೆ ದೂರು ನೀಡಿ ಎಂದು ಕಾಮೆಂಟ್​ ಮಾಡಿದೆ.

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More