ಬೆಂಗಳೂರಿನಲ್ಲಿ ಮಳೆ: ಧರೆಗುರುಳಿದ ಮರ, ವಿದ್ಯುತ್ ಸಂಪರ್ಕ ಕಡಿತ
ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಮರಗಳು ಉರುಳಿಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜನಜೀವನ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ
ಬೆಂಗಳೂರು: ನಗರದಲ್ಲಿ ನಿನ್ನೆ (ಏಪ್ರಿಲ್ 16) ಭಾರಿ ಮಳೆಯಾಗಿದ್ದು, ವಿವಿಧ ಬಡಾವಣೆಗಳಲ್ಲಿ ಮರಗಳು ಉರುಳಿಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜನಜೀವನ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಇನ್ನೂ ಐದು ದಿನ ವ್ಯಾಪಕವಾಗಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಾಮರಾಜನಗರ, ಬೆಂಗಳೂರು ಮತ್ತು ಪಶ್ಚಿಮಘಟ್ಟಗಳ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ನಾಳೆ ಮತ್ತು ನಾಳಿದ್ದು ಕೆಲ ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ನಗರದ ಹಲವೆಡೆ ಮರಗಳು ಧರೆಗೆ ಉರುಳಿವೆ. ರಾಜರಾಜೇಶ್ವರಿ ನಗರದಲ್ಲಿ 7 ಕಡೆ, ಮಹದೇವಪುರ, ಭಾರತಿ ನರ್ಸಿಂಗ್ ಹೋಮ್, ಅತ್ತಿಗುಪ್ಪೆ, ಕೆ.ಆರ್.ರಸ್ತೆ, ತ್ಯಾಗರಾಜನಗರಗಳಲ್ಲಿ ತಲಾ ಒಂದು ಮರಗಳು ಉರುಳಿವೆ.
Next 24 hours: Generally cloudy sky. Rain/thundershowers very likely. Mist very likely during early morning hours in some areas. Maximum and Minimum temperatures very likely to be around 33 and 21 Degree Celsius respectively.
— Met centre Bengaluru (@metcentre_bng) April 16, 2022
ಮಳೆ ವಿವರ (ಮಿಮೀ ಗಳಲ್ಲಿ) ಬೆಂಗಳೂರಿನ ಬಸವೇಶ್ವರ ನಗರ 92, ಕೊಟ್ಟಿಗೆಪಾಳ್ಯ 87.5, ಶಿವನಗರ 70, ನಾಗಪುರ 69.5, ಗುಟ್ಟಹಳ್ಳಿ 69, ರಾಜಾಜಿನಗರ 67, ಕಾಟನ್‌ಪೇಟೆ 61, ಮಾರುತಿ ಮಂದಿರ ವಾರ್ಡ್ 60, ಎಚ್.ಗೊಲ್ಲಹಳ್ಳಿ 59.5, ಚಾಮರಾಜಪೇಟೆ 51, ಅಗ್ರಹಾರ ದಾಸರಹಳ್ಳಿಯಲ್ಲಿ 52, ಕಗ್ಗಲಿಪುರ 51, ಕೆ.ಜೆ.ಹಳ್ಳಿ 48, ಹೆಗ್ಗನಹಳ್ಳಿ, ಕೊಡಿಗೆಹಳ್ಳಿಯಲ್ಲಿ ತಲಾ 41, ನಾಯಂಡಹಳ್ಳಿ 39.5, ಹೆಮ್ಮಿಗೆಪುರ 39, ಆರ್.ಆರ್.ನಗರ 34.5, ವಿದ್ಯಾಪೀಠ 17.
#WATCH | Karnataka: Vehicles submerge due to waterlogging after heavy rain in Bengaluru
Visuals from Mahalakshmi Layout pic.twitter.com/a2gxAbe22z
— ANI (@ANI) April 16, 2022
ಮರಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಕಡಿತ ಭಾರಿ ಮಳೆಯಿಂದಾಗಿ ಶಂಕರಮಠ, ಕಿರ್ಲೋಸ್ಕರ್ ಕಾಲೋನಿ, ಕಾವೇರಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ. ಗಾಳಿಸಹಿತ ಮಳೆಗೆ ಹಲವೆಡೆ ಮರಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು.
ಮೈಸೂರು: ಅಕಾಲಿಕ ಮಳೆ, ಬೆಳೆಹಾನಿ ಮೈಸೂರು: ಕೆ.ಆರ್.ನಗರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಅಕಾಲಿಕ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಗ್ರಾಮದ ರೀತಮ್ಮ ಎಂಬುವವರಿಗೆ ಸೇರಿದ ಬಾಳೆ ಬೆಳೆ, ತೆಂಗಿನ ಸಸಿಗಳು ಹಾಳಾಗಿವೆ. ಇದರಿಂದ ಸುಮಾರು ₹ 10 ಲಕ್ಷ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ₹ 4.5 ಲಕ್ಷ ಸಾಲ ಮಾಡಿ ರೀತಮ್ಮ ಬಾಳೆ ಬೆಳೆದಿದ್ದರು. ಬೆಳೆ ನಾಶ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಮಾವಿನ ಬೆಳೆಗೆ ಧಕ್ಕೆ ಕೋಲಾರ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು ಮಾವಿನಮರಗಳು ಮುರಿದಿವೆ. ತಾಲ್ಲೂಕಿ ಕದಿರಂಪಲ್ಲಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನಕಾಯಿ ನಷ್ಟವಾಗಿದೆ. ಸರ್ಕಾರ ನಷ್ಟಪರಿಹಾರ ನೀಡಬೇಕೆಂದು ರೈತರು ಮನವಿ ಮಾಡಿದ್ದಾರೆ.