ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಫ್ರಿಕಾ ಪ್ರಜೆಗಳಿಂದ ಪುಂಡಾಟ ಅತಿಯಾದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ‘ಹಲೋ ಆಫ್ರಿಕಾ’ ಎಂಬ ಹೊಸ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ. ಈ ಕಾರ್ಯಕ್ರಮದಡಿ ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿರುವ ಆಫ್ರಿಕಾದ ವಿವಿಧ ಪ್ರಜೆಗಳೊಂದಿಗೆ ಸಂವಾದ ನಡೆಸಲಾಗುತ್ತೆ.
ನೈಜೀರಿಯಾ, ಉಗಾಂಡ, ಐವರಿ ಕೊಸ್ಟ್, ಸುಡಾನ್ ಸೇರಿದಂತೆ ವಿವಿಧ ಪ್ರಜೆಗಳು ಜೊತೆ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಸಂವಾದ ನಡೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಪಾಸ್‌ಪೋರ್ಟ್, ವೀಸಾ ಸರಿಯಾಗಿದ್ದರೆ ಯಾವುದೇ ತೊಂದರೆ ನೀಡುವುದಿಲ್ಲ. ನಿಮ್ಮ ನಿಮ್ಮ ಉದ್ಯಮ, ಶಿಕ್ಷಣಕ್ಕೆ ಇಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ ಅನಧಿಕೃತ ವಾಸ, ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಶಿಕ್ಷಾರ್ಹ. ಈ ನೆಲದ ಕಾನೂನಿನಂತೆ ನಡೆದುಕೊಳ್ಳಲು ಸೂಚನೆ ನೀಡಿದ್ದಾರೆ.
ಈ ವೇಳೆ ಆಫ್ರಿಕನ್ ಪ್ರಜೆಗಳು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳಾಯಿತು. ಅನೇಕರು ನಮ್ಮದೇ ಸಮುದಾಯದ ಮುಖಂಡರ ಮಾತು ಕೇಳದೆ ಅಡ್ಡದಾರಿ ಹಿಡಿದರು ಎಂದು ಆಫ್ರಿಕನ್ಸ್ ದುಃಖ ಹೇಳಿಕೊಂಡಿದ್ದಾರೆ.
ಇನ್ನು ಈ ಹಿಂದೆ ಅನಧಿಕೃತ ವಾಸಿಗಳ ಮನೆ ಮೇಲೆ ಪೂರ್ವ ವಿಭಾಗ ಹಾಗೂ ಸಿಸಿಬಿ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದರು. ಸುಮಾರು 60 ಜನ ಆಫ್ರಿಕನ್ಸ್ ಮನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ 13 ಜನ ಅನಧಿಕೃತವಾಗಿ ನೆಲೆಸಿದ್ದವರನ್ನು ಬಂಧಿಸಲಾಗಿತ್ತು. ಸದ್ಯ ಎಫ್.ಆರ್.ಆರ್.ಓ (ಫಾರಿನರ್ಸ್ ರೀಜನಲ್ ರಿಜಿಸ್ಟ್ರೇಷನ್ ಆಫಿಸ್ ) ವಶದಲ್ಲಿರುವ ಬಂಧಿತರು. ಕಾನೂನು ಪ್ರಕ್ರಿಯೆ ಬಳಿಕ ಬಂಧಿತರನ್ನ ಆಯಾ ದೇಶಕ್ಕೆ ಕಳಿಸಲು ತಯಾರಿ ನಡೆಸಲಾಗುತ್ತಿದೆ.
ಇದನ್ನೂ ಓದಿ: Allu Arjun: ರಾಕ್ಷಸನಾಗಿ ಅಬ್ಬರಿಸಿದ ನಟ ಅಲ್ಲು ಅರ್ಜುನ್; ಈ ರೀತಿ ಕೋಪ ತೋರಿಸಿದ್ದು ಯಾರ ಮೇಲೆ?