ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವಿವರ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿ ನ. 11ರಂದು ರಾಜ್ಯಕ್ಕೆ ಆಗಮಿಸಲಿದ್ದು, ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮಾಡಲಿದ್ದಾರೆ. ಈ ಕುರಿತಾದ ಕಾರ್ಯಕ್ರಮದ ಸಂಪೂರ್ಣ ವಿವರ ಹೀಗಿದೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಇದೇ ನ. 11ರಂದು ರಾಜ್ಯಕ್ಕೆ ಆಗಮಿಸಲಿದ್ದು, ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಕೆಂಪೇಗೌಡರ ಪ್ರತಿಮೆ (Kempegowda statue) ಯನ್ನು ಉದ್ಘಾಟನೆ ಮಾಡಲಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲೆ ಎತ್ತಿರೂ 64 ಕೋಟಿ ರೂ ವೆಚ್ಚದ 108 ಅಡಿಯ ಬೃಹತ್ ಕಂಚಿನ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಇನ್ನು ಪ್ರತಿಮೆಯ ಮುಂಭಾಗದಲ್ಲಿ 3 ಎಕರೆ ಜಾಗದಲ್ಲಿ 20 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ಸಹ ತಲೆ ಎತ್ತಲಿದ್ದು, ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ ಆಡಳಿತದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಸರ್ಕಾರ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ ವಿವರ ಹೀಗಿದೆ:
ಬೆಳಗ್ಗೆ 9ಗಂಟೆಗೆ ಹೆಚ್ಎಎಲ್ ಏರ್ ಪೋರ್ಟ್ಗೆ ಪ್ರಧಾನಿ ಮೋದಿ ಆಗಮನ.
9.45ಕ್ಕೆ ಹೆಚ್ಎಎಲ್ ಏರ್ ಪೋರ್ಟ್ನಿಂದ ಹೆಲಿಕಾಪ್ಟರ್ ಮೂಲಕ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.
9.45 ರಿಂದ 9.55 ರವರೆಗೆ ಶಾಸಕರ ಭವನದಲ್ಲಿ ಕನಕದಾಸ ಮತ್ತು ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ.
10 ಗಂಟೆಗೆ ವಿಧಾನಸೌಧದಿಂದ ರಸ್ತೆ ಮಾರ್ಗವಾಗಿ ಕೆಎಸ್ಆರ್ ರೈಲ್ವೇ ನಿಲ್ದಾಣಕ್ಕೆ ಪ್ರಯಾಣ.
10.20ಕ್ಕೆ ರೈಲ್ವೇ ನಿಲ್ದಾಣ ತಲುಪಲಿರುವ ಮೋದಿ,
10.20 ರಿಂದ 10.40 ವಂದೇ ಭಾರತ್, ಭಾರತ್ ಗೌರವ್ ಕಾಶಿ ದರ್ಶನ್ ರೈಲುಗಳಿಗೆ ಹಸಿರು ನಿಶಾನೆ.
10.45ಕ್ಕೆ ರೈಲ್ವೇ ನಿಲ್ದಾಣದಿಂದ ಹೆಬ್ಬಾಳ ಎಎಫ್ ಟಿಟಿಸಿ ಹೆಲಿಪ್ಯಾಡ್ಗೆ ರಸ್ತೆ ಮಾರ್ಗವಾಗಿ ಪ್ರಯಾಣ.
10.55ಕ್ಕೆ ಎಎಫ್ ಟಿಟಿಸಿ ಹೆಲಿಪ್ಯಾಡ್ಗೆ ಆಗಮನ.
11 ಗಂಟೆಗೆ ಎಎಫ್ ಟಿಟಿಸಿ ಹೆಲಿಪ್ಯಾಡ್ನಿಂದ ಕೆಂಪೇಗೌಡ ಏರ್ ಪೋರ್ಟ್ಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ.
11.20ಕ್ಕೆ ಕೆಂಪೇಗೌಡ ಏರ್ ಪೋರ್ಟ್ಗೆ ಆಗಮನ.
11.30 ರಿಂದ 11.50 ಏರ್ ಪೋರ್ಟ್ ಟರ್ಮಿನಲ್-2 ಉದ್ಘಾಟನೆ.
12 ಗಂಟೆಗೆ ಕೆಂಪೇಗೌಡ ಪ್ರತಿಮೆ ಸ್ಥಳಕ್ಕೆ ಆಗಮನ.
12.00 ರಿಂದ 12.20 ಪ್ರತಿಮೆ ಲೋಕಾರ್ಪಣೆ.
12.20ಕ್ಕೆ ರಸ್ತೆ ಮಾರ್ಗವಾಗಿ ಪ್ರತಿಮೆ ಸ್ಥಳದಿಂದ ಸಮಾವೇಶ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ಪ್ರಯಾಣ.
12.30ಕ್ಕೆ ಸಾರ್ವಜನಿಕ ಸಮಾವೇಶ ಸ್ಥಳಕ್ಕೆ ಆಗಮನ.
12.30 ರಿಂದ 01.30 ಸಾರ್ವಜನಿಕ ಸಮಾವೇಶ.
01.30ಕ್ಕೆ ರಸ್ತೆ ಮಾರ್ಗವಾಗಿ ಕೆಂಪೇಗೌಡ ಏರ್ ಪೋರ್ಟ್ಗೆ ಪ್ರಯಾಣ.
01.40ಕ್ಕೆ ಏರ್ ಪೋರ್ಟ್ಗೆ ತಲುಪಲಿರುವ ಪ್ರಧಾನಿ ಮೋದಿ,
01.45ಕ್ಕೆ ಕೆಂಪೇಗೌಡ ಏರ್ ಪೋರ್ಟ್ನಿಂದ ತಮಿಳುನಾಡಿನ ಮಧುರೈಗೆ ನಿರ್ಗಮನ.
ಪ್ರಧಾನಿ ನರೇಂದ್ರ ಮೋದಿಗೆ ಕೆಪಿಸಿಸಿ 15 ಪ್ರಶ್ನೆ
ಪ್ರಧಾನಿ ನರೇಂದ್ರ ಮೋದಿ ಅವರು ನ. 11 ರಾಜ್ಯಕ್ಕೆ ಆಗಮಿಸಲಿದ್ದು, ಕೆಪಿಸಿಸಿ ಪ್ರಧಾನಿಗೆ 15 ಪ್ರಶ್ನೆಗಳನ್ನು ಕೇಳಲು ಸಿದ್ದವಾಗಿದೆ. ಅವು, 4 ವರ್ಷಗಳಿಂದ ರಾಜ್ಯ ನಿರಂತರವಾಗಿ ಪ್ರವಾಹಕ್ಕೆ ಸಿಲುಕಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ತಕ್ಷಣ ರಾಜ್ಯ ನೆನಪಾಯಿತೆ? ಕಳೆದ 5 ವರ್ಷಗಳಲ್ಲಿ ನೆರೆಯಿಂದಾಗಿ 2.62 ಲಕ್ಷ ಮನೆಗಳು, 1.5 ಲಕ್ಷ ಕಿ.ಮೀ. ರಸ್ತೆಗಳು, 30 ಸಾವಿರ ಸೇತುವೆಗಳು ಹಾನಿಯಾಗಿವೆ, 54.32 ಲಕ್ಷ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ರಾಜ್ಯದಲ್ಲಿ 93,648 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬಂದಿರುವ ಪರಿಹಾರ ಎಷ್ಟು? ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳಾದ ಸ್ಮಾರ್ಟ್ ಸಿಟಿ, ಜಲ್ ಜೀವನ ಮಿಷನ್, 2 ಕೋಟಿ ಉದ್ಯೋಗ ಸೇರಿದಂತೆ 2022ರೊಳಗೆ ಎಲ್ಲರಿಗೂ ಸ್ವಂತ ಸೂರು ಸಂಪೂರ್ಣವಾಗಿದ್ಯಾ? ರಸ್ತೆ ಗುಂಡಿಗೆ 20ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಪ್ರಶ್ನೆಗಳ ಸುರಿಮಳೆ ಗೈದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.