ಚುನಾವಣಾ ಕರ್ತವ್ಯದಿಂದ ಫಾರ್ಮಸಿ ಅಧಿಕಾರಿಗಳಿಗೆ ವಿನಾಯಿತಿ: ಬಿಬಿಎಂಪಿ ಆದೇಶಕ್ಕೆ ಹೈಕೋರ್ಟ್ ತಡೆ

ಲೋಕಸಭಾ ಚುನಾವಣಾ ಕರ್ತವ್ಯದಿಂದ ಫಾರ್ಮಸಿ ಅಧಿಕಾರಿಗಳಿಗೆ ವಿನಾಯಿತಿ ನೀಡಿ ಹೈಕೋರ್ಟ್(High Court) ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ. ಈ ಮೂಲಕ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಬಿಬಿಎಂಪಿ ನೀಡಿದ್ದ ಆದೇಶವನ್ನ ತಡೆಹಿಡಿದಿದೆ.

ಚುನಾವಣಾ ಕರ್ತವ್ಯದಿಂದ ಫಾರ್ಮಸಿ ಅಧಿಕಾರಿಗಳಿಗೆ ವಿನಾಯಿತಿ: ಬಿಬಿಎಂಪಿ ಆದೇಶಕ್ಕೆ ಹೈಕೋರ್ಟ್ ತಡೆ
ಹೈಕೋರ್ಟ್​
Edited By:

Updated on: Apr 06, 2024 | 7:36 PM

ಬೆಂಗಳೂರು, ಏ.06: ಚುನಾವಣಾ ಕರ್ತವ್ಯದಿಂದ ಫಾರ್ಮಸಿ ಅಧಿಕಾರಿಗಳಿಗೆ ವಿನಾಯಿತಿ ನೀಡಿ ಹೈಕೋರ್ಟ್(High Court) ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ. ಈ ಮೂಲಕ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಬಿಬಿಎಂಪಿ ನೀಡಿದ್ದ ಆದೇಶವನ್ನ ತಡೆಹಿಡಿದಿದೆ. ಚುನಾವಣೆ ನಿಯಮದಲ್ಲಿ ವೈದ್ಯರು,‌ ನರ್ಸ್, ಫಾರ್ಮಸಿ ಅಧಿಕಾರಿಗಳಿಗೆ ವಿನಾಯಿತಿಯಿದೆ. ಆದರೂ ಬಿಬಿಎಂಪಿಯಿಂದ ಕಾನೂನುಬಾಹಿರ ಸೂಚನೆ ಎಂದು ಅರ್ಜಿದಾರರ ಪರ ವಕೀಲ ಬಿ.ಎಂ.ಸಂತೋಷ್ ವಾದಿಸಿದ್ದರು. ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸುವಾಗ ಕಾನೂನು ಪಾಲಿಸಿ ಎಂದು ಬಿಬಿಎಂಪಿ ಹಾಗೂ ಚುನಾವಣಾ ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಪಂಪ್ ಸೆಟ್​ಗೆ ಅಳವಡಿಸಿದ ಕೇಬಲ್‌ ಕಳವಿಗೆ ಯತ್ನಿಸಿ ಸಿಕ್ಕಿಬಿದ್ದ ಕಳ್ಳ

ಬೆಂಗಳೂರು ಗ್ರಾಮಾಂತರ: ಪಂಪ್ ಸೆಟ್​ಗೆ ಅಳವಡಿಸಿದ ಕೇಬಲ್‌ ಕಳವಿಗೆ ಯತ್ನಿಸಿ ಕಳ್ಳನೊಬ್ಬ ಸ್ಥಳದಲ್ಲೇ ಸಿಕ್ಕಿಬಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವೀರನಂಜೀಪುರ ಗ್ರಾಮದಲ್ಲಿ ನಡೆದಿದೆ. ಮಾದನಾಯಕನಹಳ್ಳಿ ಫಿರೋಜ್ ಪಾಷ (53) ಬಂಧಿತ ಆರೋಪಿ.  ಇತ ರೈತರ ತೋಟಗಳಲ್ಲಿ ವಿದ್ಯುತ್ ಕೇಬಲ್ ಕಳವು ಮಾಡಿ ಗುಜರಿಗೆ ಹಾಕಿ ಹಣ ಪಡೆಯುತ್ತಿದ್ದ. ಇದೀಗ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯಲೋಪ ಆರೋಪ; ನಾಲ್ವರು ಶಿಕ್ಷಕರು ಅಮಾನತು

ಅಂಜನಾದ್ರಿ ದೇಗುಲದ ಅರ್ಚಕ ತೆರಳುತ್ತಿದ್ದ ಕಾರ್ ಪಲ್ಟಿ

ಕೊಪ್ಪಳ: ಸುಪ್ರಸಿದ್ದ ಅಂಜನಾದ್ರಿ ದೇಗುಲದ ಅರ್ಚಕ ತೆರಳುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮೂರು ಬಾರೀ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಅರ್ಚಕ ಪಾರಾದ ಘಟನೆ ನಿನ್ನೆ(ಏ.05)ಸಂಜೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದ ಬಳಿ ನಡೆದಿದ. ಅರ್ಚಕ ವಿದ್ಯಾದಾಸ ಬಾಬಾಗೆ ಕೆಲವಡೇ ಸಣ್ಣಪುಟ್ಟ ಗಾಯಗಳಾಗಿದ್ದು, ಕೊಪ್ಪಳ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:22 pm, Sat, 6 April 24