Bagalkot: ಚುನಾವಣಾ ಕರ್ತವ್ಯ ನಿರ್ವಹಿಸಿ ರೈಫಲ್ ಹಿಂದಿರುಗಿಸುವಾಗ ಹಾರಿದ ಗುಂಡು; ಇಬ್ಬರು ಯೋಧರಿಗೆ ಗಾಯ

ಚುನಾವಣಾ ಕರ್ತವ್ಯ ನಿರ್ವಹಿಸಿ ರೈಫಲ್ ಹಿಂದಿರುಗಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಇಬ್ಬರು ಯೋಧರು ಗಾಯಗೊಂಡ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

Bagalkot: ಚುನಾವಣಾ ಕರ್ತವ್ಯ ನಿರ್ವಹಿಸಿ ರೈಫಲ್ ಹಿಂದಿರುಗಿಸುವಾಗ ಹಾರಿದ ಗುಂಡು; ಇಬ್ಬರು ಯೋಧರಿಗೆ ಗಾಯ
ಆಕಸ್ಮಿಕವಾಗಿ ಗುಂಡು ಹಾರಿ ಗಾಯಗೊಂಡ ಯೋಧರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
Follow us
Rakesh Nayak Manchi
|

Updated on: May 01, 2023 | 3:05 PM

ಬಾಗಲಕೋಟೆ: ಚುನಾವಣಾ (Karnataka Assembly Elections 2023) ಕರ್ತವ್ಯ ನಿರ್ವಹಿಸಿ ರೈಫಲ್ ಹಿಂದಿರುಗಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ (Misfiring) ಇಬ್ಬರು ಯೋಧರು ಗಾಯಗೊಂಡ ಘಟನೆ ಇಂದು (ಮೇ 1) ಬೆಳಗ್ಗೆ ಬಾಗಲಕೋಟೆಯಲ್ಲಿ ನಡೆದಿದೆ. ದಿನೇಶಕುಮಾರ್ ಝಾ (38) ಮತ್ತು ಲಕ್ಷ್ಮಣ ನಿತ್ಯಂಗ್ (44) ಗಾಯಗೊಂಡ ಯೋಧರು. ದಿನೇಶಕುಮಾರ್ ಕುಮಾರ್ ಅವರ ಎಡ ಮೊಳಗಾಲಿಗೆ ಗುಂಡೇಟು ಬಿದ್ದಿದ್ದ, ಲಕ್ಷ್ಮಣ ನಿತ್ಯಂಗ್ ಅವರ ಬಲಗಾಲಿನ ಪಾದಕ್ಕೆ ಗುಂಡು ತುಗುಲಿದೆ.

ಅರುಣಾಚಲ ಪ್ರದೇಶದ ಲಕ್ಷ್ಮಣ ನಿತ್ಯಂಗ್ ಮತ್ತು ಬಿಹಾರ ಮೂಲದ ದಿನೇಶಕುಮಾರ್ ಅವರು ಮುಧೋಳದ ರನ್ನ ವಸತಿ ಶಾಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಚುನಾವಣಾ ಕರ್ತವ್ಯ ಮುಗಿಸಿ ಇಂದು ಬೆಳಗ್ಗೆ ರೈಪಲ್​ಗಳನ್ನು ಮರಳಿಸಬೇಕಿತ್ತು. ಅದರಂತೆ ರೈಫಲ್ ಹಿಂದಿರುಗಿಸುವ ಸಮಯದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿದೆ. ಕೂಡಲೇ ಇಬ್ಬರು ಯೋಧರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಗುಂಡುಗಳನ್ನು ಹೊರತೆಗೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: Bullet Proof Helmet: ಯೋಧರಿಗಾಗಿ ವಿಶೇಷ ಹೆಲ್ಮೆಟ್, ಸಿಖ್ ಸೈನಿಕರಿಗೂ ಇದು ಆರಾಮದಾಯಕ

ಕರ್ನಾಟಕ ವಿಧಾನಸಭೆ ಚುನಾವಣೆ ರಣಕಣ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಎಲ್ಲೆಂದರಲ್ಲಿ ರಾಜಕೀಯ ನಾಯಕರು ಸುತ್ತಾಡುತ್ತಿದ್ದಾರೆ. ಮಾತ್ರವಲ್ಲದೆ, ಚುನಾವಣಾ ಅಕ್ರಮಗಳನ್ನು ತಡೆಯಲು ಅಲ್ಲಲ್ಲಿ ಚೆಕ್ ಪೋಸ್ಟ್​ಗಳನ್ನು ಹಾಕಿ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಸಾರ್ವತ್ರಿಕ ಚುನಾವಣೆ ಯಾವುದೇ ಅಹಿತಕರ ಘಟನೆ ನಡೆಯದೆ ಸುಸೂತ್ರವಾಗಿ ನಡೆಯುವಂತೆ ಮಾಡಲು ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದ್ದು, ಹೆಚ್ಚಿನ ಭದ್ರತೆಗಾಗಿ ಯೋಧರನ್ನು ನಿಯೋಜಿಸಲಾಗಿದೆ. ಯೋಧರ ಪಥಸಂಚಲನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ