Bullet Proof Helmet: ಯೋಧರಿಗಾಗಿ ವಿಶೇಷ ಹೆಲ್ಮೆಟ್, ಸಿಖ್ ಸೈನಿಕರಿಗೂ ಇದು ಆರಾಮದಾಯಕ

ಕಾನ್ಪುರ ಮೂಲದ ಕಂಪೆನಿಯೊಂದು ಸೈನಿಕರಿಗಾಗಿ ಭದ್ರತಾ ಹೆಲ್ಮೆಟ್​​ನ್ನು ತಯಾರಿಸಿದೆ. ಇದರ ವಿಶೇಷತೆಯೇನೆಂದರೆ ಇದು ಗುಂಡು ನಿರೋಧಕವಾಗಿದ್ದು, ಸಿಖ್ ಸೈನಿಕರು ಸಹ ಇದನ್ನು ಧರಿಸಬಹುದಾಗಿದೆ.

Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 29, 2023 | 1:40 PM

ಸೈನಿಕರು ದೇಶದ ಹೆಮ್ಮೆ. ಗಡಿಯಲ್ಲಿ ಶತ್ರುಗಳ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ದೇಶ ರಕ್ಷಣೆ ಮಾಡುವವರು. ದುರಾದೃಷ್ಟವಶಾತ್ ಕೆಲವೊಮ್ಮೆ ಶತ್ರುಗಳ ಗುಂಡಿನ ದಾಳಿಗೆ ಬಲಿಯಾಗಿ ಸೈನಿಕರು ಪ್ರಾಣ ತ್ಯಾಗ ಮಾಡಿದ ಅದೆಷ್ಟೋ ಘಟನೆಗಳು ನಡೆದಿದೆ. ಇಂತಹ ಕೆಚ್ಚೆದೆಯ ವೀರರ ರಕ್ಷಣೆಗಾಗಿ ಭಾರತೀಯ ಮೂಲದ ಕನ್ಪುರದ ಎಮ್.ಕೆ.ಯು ಕಂಪೆನಿ ಯೋಧರಿಗಾಗಿ ವಿಶೇಷ ಹೆಲ್ಮೆಟ್ ತಯಾರಿಸಿದೆ. ಇದು ಬುಲೆಟ್ ಪ್ರೂಫ್ ಹೆಲ್ಮೆಟ್ ಆಗಿದ್ದು, ಜೊತೆಗೆ ಇದು ಮೇಕ್ ಇನ್ ಇಂಡಿಯಾ ಉಪಕರಣವಾಗಿದೆ. ಈ ಹೆಲ್ಮೆಟ್​​​ಗಳು ಆರಾಮದಾಯಕ, ಕಡಿಮೆ ತೂಕ ಮತ್ತು ಧರಿಸಲು ಹಿತಕರವಾಗಿದೆ. ತಲೆಯ ಗಾತ್ರವನ್ನು ಅವಲಂಬಿಸಿ ಇದರ ತೂಕವು 1.2 ಕೆಜಿಯಿಂದ 1.4 ಕೆಜಿಯವರೆಗೆ ಬದಲಾಗುತ್ತದೆ. ಇದನ್ನು ಯೋಧರಿಗೆ ಯುದ್ಧದಲ್ಲಿ ಆಗುವ ಗಾಯಗಳಿಂದ ರಕ್ಷಣೆ ನೀಡಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಮತ್ತು ಈ ಹೊಸ ಹೆಲ್ಮೆಟ್ ವಿಸರ್​​ಗಳು, ಫೆಸ್ ಶೀಲ್ಡ್, ಟಾರ್ಚ್ ಮತ್ತು ರಾತ್ರಿ ದೃಷ್ಟಿ ಕನ್ನಡಕ ಸೇರಿದಂತೆ ವಿವಿಧ ಪರಿಕರಗಳನ್ನು ಒಳಗೊಂಡಿದೆ.

ನಾವು ಈ ಉಪಕರಣಗಳನ್ನು ಸಶಸ್ತ್ರ ಪಡೆಗಳಿಗೆ ಪೂರೈಸುತ್ತಿದ್ದೇವೆ. ಹಾಗೂ ಸಿಖ್ ಸೈನಿಕರಿಗೂ ಈ ಬುಲೆಟ್ ಪ್ರೂಫ್ ಹೆಲ್ಮೆಟ್ ತಯಾರಿಸಬಹುದಲ್ಲವೆ ಎಂದು ನಾವು ಯೋಚಿಸಿದ್ದೇವೆ. ನಾವು ಈ ಉತ್ಪನ್ನವನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ನಮಗೆ ಅದಕ್ಕೆ ಪೇಟೆಂಟ್ ಕೂಡಾ ಸಿಕ್ಕಿದೆ ಎಂದು ಎಮ್.ಕೆ.ಯು ಲಿಮಿಟೆಡ್​​​ನ ಅಧಿಕಾರಿ ಮನೋಜ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ:ರಕ್ಷಣಾ ಕ್ಷೇತ್ರದಲ್ಲಿ ಮೇಕ್​ ಇನ್​ ಇಂಡಿಯಾಕ್ಕೆ ಒತ್ತು; ಶೇ.68ರಷ್ಟು ಅಗತ್ಯ ಉಪಕರಣಗಳ ಖರೀದಿ ದೇಶೀಯ ಉದ್ಯಮಗಳಿಂದ

ಭಾರತೀಯ ಸೇನೆಯಲ್ಲಿ ಅತೀ ಹೆಚ್ಚು ಸಿಖ್ ಸೈನಿಕರಿದ್ದಾರೆ. ಆದರೆ ಅವರು ಇಲ್ಲಿಯವರೆಗೆ ಯಾವುದೇ ರಕ್ಷಣಾತ್ಮಕ ಹೆಲ್ಮೆಟ್​​​ಗಳನ್ನು ಧರಿಸಿಲ್ಲ. ನಾವು ರೂಪಿಸಿರುವ ಈ ಹೆಲ್ಮೆಟ್ ಎಕೆ-47 ರೈಫಲ್​​​ನಿಂದ ಹಾರುವ ಬುಲೆಟ್​​​ನ್ನು ಸಹ ತಡೆದುಕೊಳ್ಳುತ್ತದೆ, ಮತ್ತು ಇದು ರಕ್ಷಣಾತ್ಮಕವಾಗಿದೆ ಎಂದು ಎಮ್.ಕೆ.ಯು ಕಂಪೆನಿ ಹೇಳಿಕೊಂಡಿದೆ.

12,000ಕ್ಕೂ ಹೆಚ್ಚು ಹೈಲ್ಮೆಟ್​​​ಗಳನ್ನು ತಯಾರಿಸಲು ಭಾರತೀಯ ಸೇನೆಯಿಂದ ಆದೇಶವನ್ನು ಸ್ವೀಕರಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಸೇನೆಯ ಹೊರತಾಗಿ, ಪಂಜಾಬ್ ಪೋಲಿಸರು ತಮ್ಮ ಸಿಖ್ ಸಿಬ್ಬಂದಿಗಳಿಗೆ ಈ ಹೆಲ್ಮೆಟ್ ಬಳಸಲು ಪರಿಗಣಿಸಬಹುದು ಎಂದು ಕಂಪೆನಿ ಆಶಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:40 pm, Sat, 29 April 23