Sign In

By signing in or creating an account, you agree with Associated Broadcasting Company's Terms & Conditions and Privacy Policy.

Real Potential In India: ಇಡೀ ಜಗತ್ತಿಗೆ ಮೇಕ್ ಇನ್ ಇಂಡಿಯಾದಂತಹ ಯೋಜನೆಗಳ ಅಗತ್ಯವಿದೆ: ಜರ್ಮನ್ ಕಂಪನಿ ಸಿಇಒಗಳ ಮಾತು

ಜರ್ಮನಿಯ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (ಸಿಇಒ) ಗುಂಪು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ಜರ್ಮನಿ ಮತ್ತು ಭಾರತ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದರು.

Real Potential In India: ಇಡೀ ಜಗತ್ತಿಗೆ ಮೇಕ್ ಇನ್ ಇಂಡಿಯಾದಂತಹ ಯೋಜನೆಗಳ ಅಗತ್ಯವಿದೆ: ಜರ್ಮನ್ ಕಂಪನಿ ಸಿಇಒಗಳ ಮಾತು
ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಜರ್ಮನ್ ಕಂಪನಿ ಸಿಇಒಗಳು
Follow us
ನಯನಾ ರಾಜೀವ್
|

Updated on: Feb 26, 2023 | 10:49 AM

ಜರ್ಮನ್ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (ಸಿಇಒ) ಗುಂಪು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ಜರ್ಮನಿ ಮತ್ತು ಭಾರತ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದರು. ಅವರೆಲ್ಲರೂ ವಿವಿಧ ಉತ್ಪಾದನಾ ಕ್ಷೇತ್ರಗಳಿಗೆ ಸೇರಿದ ಪ್ರಮುಖ ಜರ್ಮನ್ ಕಂಪನಿಗಳಿಂದ ಬಂದವರಾಗಿದ್ದರು. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತ ಅತೀ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿ ಭಾರತ ಸದೃಢ ಹೆಜ್ಜೆ ಇಡುತ್ತಿದೆ ಎಂದರು.

ಗ್ರೀನ್ ಎನರ್ಜಿ, ಮೂಲಭೂತ ಸೌಕರ್ಯ, ಆರೋಗ್ಯ ರಕ್ಷಣೆಯಲ್ಲಿ ಭಾರತ ಇತರ ಎಲ್ಲಾ ದೇಶಗಳಿಂದ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಇದಕ್ಕೆ ಭಾರತದಲ್ಲಿರುವ ಅತೀ ದೊಡ್ಡ ಯುವ ಸಮೂಹದ ಕಾಣಿಕೆಯೂ ಇದೆ. ಇದರ ಜೊತೆ ಜೊತೆಗೆ ಭಾರತದ ಡಿಜಿಟಲ್ ಬಳಕೆ ಪೂರಕ ವಾತಾವರಣ ನಿರ್ಮಿಸುತ್ತಿದೆ ಎಂದು ಸೀಮೆನ್ಸ್ ಎಜಿ ಅಧ್ಯಕ್ಷ ಮತ್ತು ಸಿಇಒ ರೋಲ್ಯಾಂಡ್ ಬುಶ್ ಹೇಳಿದ್ದಾರೆ.

ಮೇಕ್ ಇನ್ ಇಂಡಿಯಾದಂತಹ ಯೋಜನೆಗಳು ಇಡೀ ಜಗತ್ತಿಗೆ ಅಗತ್ಯವಿದೆ ಎಂದರು, ಭಾರತದಲ್ಲಿ ಹೂಡಿಕೆ, ಮೂಲಸೌಕರ್ಯ, ಶಿಕ್ಷಣ ಮತ್ತು ವ್ಯಾಪಾರಕ್ಕೆ ಹೊಸ ಅವಕಾಶಗಳ ಕುರಿತು ಚರ್ಚಿಸಿದರು. ಕಳೆದ 45 ವರ್ಷಗಳಿಂದ ಭಾರತದಲ್ಲಿ DHL ಕಾರ್ಯನಿರ್ವಹಿಸುತ್ತಿದೆ. ನಾವು ಭಾರತದಲ್ಲಿ ನಿಜವಾದ ಸಾಮರ್ಥ್ಯವನ್ನು ನೋಡುತ್ತಿದ್ದೇವೆ. ಭಾರತ ನಮಗೆ ಉತ್ತಮ ಹಾಗೂ ಅತೀ ಹೆಚ್ಚಿನ ಅವಕಾಶಗಳನ್ನು ನೀಡುವ ಮಾರುಕಟ್ಟೆಯಾಗಿದೆ. ಮಾರುಕಟ್ಟೆಯಲ್ಲಿನ ವೇಗವನ್ನು ಭಾರತದಲ್ಲಿ ನೋಡುತ್ತಿದ್ದೇವೆ. DHLಗ್ರೂಪ್ ಸಿಇಒ ಡಟ್ಸೆ ಪೋಸ್ಟ್ ಹೇಳಿದ್ದಾರೆ.

ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿ – ಬೀಜಗಳನ್ನು ಬಿತ್ತಲಾಗುತ್ತಿದೆ, ಅವುಗಳ ಕೊಯ್ಲು ಶೀಘ್ರದಲ್ಲೇ ಸಿದ್ಧವಾಗಲಿದೆ. ನಾವು ಇಲ್ಲಿ ನೈಜ ಸಾಮರ್ಥ್ಯವನ್ನು ನೋಡುತ್ತಿದ್ದೇವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ