ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯಲೋಪ ಆರೋಪ; ನಾಲ್ವರು ಶಿಕ್ಷಕರು ಅಮಾನತು
ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯಲೋಪ ಆರೋಪ ಹಿನ್ನಲೆ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ನಾಲ್ವರು ಶಿಕ್ಷಕರನ್ನು ಅಮಾನತುಗೊಳಿಸಿದ ಘಟನೆ ನಡೆದಿದೆ. ಚಿತ್ರದುರ್ಗ ಡಿಡಿಪಿಐ ರವಿಶಂಕರರೆಡ್ಡಿ ಅವರು ‘ವಿದ್ಯಾರ್ಥಿಗಳು ನಕಲು ಮಾಡುವುದು ತಡೆಯದೆ ಸಹಕಾರ ಆರೋಪದ ಹಿನ್ನಲೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಚಿತ್ರದುರ್ಗ, ಮಾ.30: ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯಲೋಪ ಆರೋಪ ಹಿನ್ನಲೆ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ನಾಲ್ವರು ಶಿಕ್ಷಕರನ್ನು ಅಮಾನತುಗೊಳಿಸಿದ ಘಟನೆ ನಡೆದಿದೆ. ವಿದ್ಯಾರ್ಥಿಗಳು ನಕಲು ಮಾಡುವುದು ತಡೆಯದೆ ಸಹಕಾರ ನೀಡಿದ ಆರೋಪ ಕೇಳಿಬಂದಿತ್ತು. ಈ ಹಿನ್ನಲೆ ಚಳ್ಳಕೆರೆಯ ಮಂಜರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ರೇವಣ್ಣ, ಚಳ್ಳಕೆರೆ ತಾಲೂಕಿನ ಗೋಸಿಕೆರೆ ಪ್ರೌಢ ಶಾಲೆಯ ಶಿಕ್ಷಕ ರಾಘವೇಂದ್ರ, ಪಿ.ಓಬನಹಳ್ಳಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಚಂದ್ರಶೇಖರ್ ಮತ್ತು ಕೊರ್ಲಕುಂಟೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಕಾಶ್ ಎಂಬುವವರನ್ನು ಅಮಾನತುಗೊಳಿಸಿ ಚಿತ್ರದುರ್ಗ ಡಿಡಿಪಿಐ ರವಿಶಂಕರರೆಡ್ಡಿ ಆದೇಶಿಸಿದ್ದಾರೆ.
ಇದೇ ಮಾರ್ಚ್ 28 ರಂದು ಕೂಡ ಇಂತಹುದೆ ಘಟನೆ ಹರಿಹರದಲ್ಲಿ ನಡೆದಿತ್ತು. ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ಎಂಕೆಇಟಿಎಲ್ಕೆ ಪರೀಕ್ಷಾ ಕೇಂದ್ರ ಕೊಠಡಿಯ ಮೇಲ್ವಿಚಾರಕರೊಬ್ಬರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತಿ ಸಿಇಒ ಸುರೇಶ್ ಇಟ್ನಾಳ್ ಆದೇಶಿಸಿದ್ದರು. ಇದರ ಬೆನ್ನಲ್ಲೇ ಇದೀಗ ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ನಾಲ್ವರು ಅಮಾನತಾಗಿದ್ದಾರೆ.
ಇದನ್ನೂ ಓದಿ:ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಜನರಿಗೆ ಒದ್ದ ದೆಹಲಿ ಪೊಲೀಸ್; ಅಧಿಕಾರಿ ಅಮಾನತು
ದಾಖಲೆ ಇಲ್ಲದೇ ಸಾಗಿಸುತ್ತಿದ್ದ 405 ಮಿಕ್ಸರ್ ಗ್ರೈಂಡರ್‌ಗಳು ಜಪ್ತಿ
ಬಳ್ಳಾರಿ: ಹಲಕುಂದಿ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 405 ಮಿಕ್ಸರ್ ಗ್ರೈಂಡರ್ಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬಳ್ಳಾರಿ ತಾಲೂಕಿನ ಹಲಕುಂದಿ ಬಳಿ ಪರಿಶೀಲನೆ ವೇಳೆ 5.25 ಲಕ್ಷ ರೂಪಾಯಿ ಮೌಲ್ಯದ ಮಿಕ್ಸರ್ ಗ್ರೈಂಡರ್‌ಗಳು ಪತ್ತೆಯಾಗಿದೆ. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 pm, Sat, 30 March 24