ಬೆಂಗಳೂರು: ಅಂಬೇಡ್ಕರ್ (Dr BR Ambedkar) ಫೋಟೋ ವಿವಾದಕ್ಕೆ ಹೈಕೋರ್ಟ್ (High Court) ಇದೀಗ ಅಂತ್ಯ ಹಾಡಿದೆ. ಕೋರ್ಟ್ನ ಅಧಿಕೃತ ಸಮಾರಂಭಗಳಲ್ಲಿ ಫೋಟೋ ಇಡಲು ಹೈಕೋರ್ಟ್ ತೀರ್ಮಾನಿಸಿದ್ದು, ನ್ಯಾಯಮೂರ್ತಿಗಳ ಪೂರ್ಣ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿದೆ. ಭಾರತರತ್ನ ಡಾ.ಬಿಆರ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ. ಅಂಬೇಡ್ಕರ್ ಫೋಟೋ ಸಮಾರಂಭಗಳಲ್ಲಿ ಇಡಲಾಗುವುದು ಎಂದು ತಿಳಿಸಿದ ರಿಜಿಸ್ಟ್ರಾರ್ ಜನರಲ್ ಟಿಜಿ ಶಿವಶಂಕರೇಗೌಡ, ಜ.26ರ ಗಣರಾಜ್ಯ ದಿನಾಚರಣೆ, ಆ.15ರ ಸ್ವಾತಂತ್ರ್ಯ ದಿನಾಚರಣೆ, ನ.26ರ ಸಂವಿಧಾನ ದಿನದಂದು ಫೋಟೋ ಇಡಲು ಜಿಲ್ಲಾ, ತಾಲೂಕು ಕೋರ್ಟ್ಗಳಿಗೆ ಸೂಚನೆ ನೀಡಿದ್ದಾರೆ.
ವಿವಾದವೇನು? :
ರಾಯಚೂರಿನಲ್ಲಿ ಜನವರಿ 26ಕ್ಕೆ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ನ್ಯಾಯಧೀಶರು ಬಿಆರ್ ಅಂಬೇಡ್ಕರ್ ಫೋಟೋ ತೆಗೆಸಿ ಅಪಮಾನ ಮಾಡಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೇ ಈ ಬಗ್ಗೆ ವಿರೋಧವೂ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಕೋರ್ಟ್ನ ಅಧಿಕೃತ ಸಮಾರಂಭಗಳಲ್ಲಿ ಫೋಟೋ ಇಡಲು ಹೈಕೋರ್ಟ್ ತೀರ್ಮಾನಿಸಿದೆ.
ರಾಯಚೂರು ಜಿಲ್ಲಾ ನ್ಯಾಯಧೀಶರು ಗಣರಾಜ್ಯೋತ್ಸವದ ದಿನದಂದು ಧ್ರಜಾರೋಹಣ ಮಾಡುವ ವೇಳೆ ಬಿ ಆರ್ ಅಂಬೇಡ್ಕರ್ ಪೋಟೋ ತೆಗೆಸಿದ್ದಾರೆ ಎಂದು ಹಲವು ದೂರುಗಳು ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದವು. ದೂರಿನನ್ವಯ ಹೈಕೊರ್ಟ್ ಇದೀಗ ಗಣರಾಜ್ಯ ದಿನಾಚರಣೆ, ಆ.15ರ ಸ್ವಾತಂತ್ರ್ಯ ದಿನಾಚರಣೆ, ನ.26ರ ಸಂವಿಧಾನ ದಿನದಂದು ಫೋಟೋ ಇಡಲು ಜಿಲ್ಲಾ, ತಾಲೂಕು ಕೋರ್ಟ್ಗಳಿಗೆ ಸೂಚನೆ ನೀಡಿದೆ.
ಇದನ್ನೂ ಓದಿ
ದಾವಣಗೆರೆಯಲ್ಲಿ ಜಮೀನು ಮಾಲೀಕರ ಬೇಜವಾಬ್ದಾರಿಗೆ ಸುಟ್ಟು ಭಸ್ಮವಾದ 600 ಅಡಕೆ ಮರಗಳು!
‘ಸಲಗ’ ಗೆಲುವಿನ ವೇದಿಕೆಯಲ್ಲಿ ದುನಿಯಾ ವಿಜಯ್ ಅಳು; ‘ಕರಿಚಿರತೆ’ ಕಣ್ಣೀರಿಗೆ ಕಾರಣ ಏನು?
Published On - 11:30 am, Sat, 5 February 22