BMRCL Recruitment 2022; ಬೆಂಗಳೂರು ಮೆಟ್ರೋದಲ್ಲಿದೆ ಉದ್ಯೋಗಾವಕಾಶ, ಲಕ್ಷ ರೂ.ವೇತನ; ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ !
ಹಿರಿಯ ಸಾರಿಗೆ ಯೋಜಕ (ಸಲಹೆಗಾರ) ಹುದ್ದೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆದಿನವಾಗಿದ್ದು, ಅರ್ಜಿ ದಾರರು ಮೊದಲು ಆನ್ಲೈನ್ನಲ್ಲಿ ಎಲ್ಲ ಮಾಹಿತಿಯನ್ನೂ ತುಂಬಬೇಕು. ನಂತರ ಅದನ್ನು ಪ್ರಿಂಟ್ ತೆಗೆದು ಕೊಟ್ಟಿರುವ ವಿಳಾಸಕ್ಕೆ ಕಳಿಸಬೇಕು.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (Bangalore Metro Rail Corporation Limited )ಹಿರಿಯ ಸಾರಿಗೆ ಯೋಜಕ (ಸಲಹೆಗಾರ) (Sr . Transport Planner (Consultant) ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಇಂದೇ ಕೊನೇ ದಿನವಾಗಿದೆ. ಇದರಲ್ಲಿ ಒಂದೇ ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಪ್ಲ್ಯಾನಿಂಗ್/ಆರ್ಕಿಟೆಕ್ಚರ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಮತ್ತು ಟ್ರಾನ್ಸ್ಪೋರ್ಟ್ ಪ್ಲ್ಯಾನಿಂಗ್/ಟ್ರಾನ್ಸ್ಪೋರ್ಟ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ನಗರ ಸಾರಿಗೆ ಯೋಜನೆ, ವಿನ್ಯಾಸ ಮತ್ತು ಅನುಷ್ಠಾನ (urban Transportation Planning, Design and Implementation) ಕ್ಷೇತ್ರದಲ್ಲಿ ಪೂರ್ಣ ಸಮಯ ಕೆಲಸ ಮಾಡಿದ 8-10ವರ್ಷ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ನಗರ ಹಂತದ ಸಾರಿಗೆ ಯೋಜನೆಗಳಾದ ಬಹುಮಾದರಿ ಏಕೀಕರಣ, ಪಾದಚಾರಿಗಳಿಗೆ ಅನುಕೂಲವಾಗುವ ಕೊನೇ ಮೈಲಿ ಸಂಪರ್ಕ ಸೇರಿ ಇನ್ನಿತರ ಯೋಜನೆಯ ಕೆಲಸಗಳನ್ನು ಮಾಡುವುದು ಗೊತ್ತಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಮೆಟ್ರೋ ರೈಲು ನಿಗಮ ಹೇಳಿದೆ. ನೇಮಕವಾಗುವವರಿಗೆ ತಿಂಗಳಿಗೆ 1 ಲಕ್ಷ ರೂಪಾಯಿ ವೇತನವಿದೆ.
ಹೇಗೆ ನಡೆಯಲಿದೆ ಆಯ್ಕೆ ಪ್ರಕ್ರಿಯೆ ಅರ್ಜಿ ಪರಿಶೀಲನೆ ಬಳಿಕ ಅರ್ಹರು ಎನ್ನಿಸುವವರಿಗೆ ಆನ್ಲೈನ್ ಮೂಲಕ ಇಂಟರ್ವ್ಯೂ ಮಾಡಲಾಗುತ್ತದೆ. ಸಂಬಂಧಿತ ಪ್ರಾಧಿಕಾರದಿಂದ ರಚಿತವಾಗಿರುವ ಸಮಿತಿಯಿಂದ ಅಭ್ಯರ್ಥಿಗಳ ಸಂದರ್ಶನ ನಡೆಯುತ್ತದೆ. ಸಂದರ್ಶನದ ಬಳಿಕ ಉದ್ಯೋಗಕ್ಕೆ ಆಯ್ಕೆಯಾಗುವರು, ಜಾಬ್ಗೆ ಸೇರ್ಪಡೆಯಾಗುವ ಮೊದಲ ದಿನ ಅಗತ್ಯವಿರುವ ಎಲ್ಲ ದಾಖಲೆಗಳನ್ನೂ ನೀಡಬೇಕಾಗುತ್ತದೆ. ಅಂದರೆ ತಮ್ಮ ಶಿಕ್ಷಣಕ್ಕೆ ಸಂಬಂಧಪಟ್ಟ, ಉದ್ಯೋಗ ಅನುಭವ ಇರುವ ದಾಖಲೆಗಳು/ಸರ್ಟಿಫಿಕೇಟ್ಗಳನ್ನು ಪ್ರಸ್ತುತಪಡಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? ಹಿರಿಯ ಸಾರಿಗೆ ಯೋಜಕ (ಸಲಹೆಗಾರ) ಹುದ್ದೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆದಿನವಾಗಿದ್ದು, ಅರ್ಜಿ ದಾರರು ಮೊದಲು ಆನ್ಲೈನ್ನಲ್ಲಿ ಎಲ್ಲ ಮಾಹಿತಿಯನ್ನೂ ತುಂಬಬೇಕು. ನಂತರ ಅದನ್ನು ಪ್ರಿಂಟ್ ತೆಗೆದು ತಮ್ಮ ಶಿಕ್ಷಣ, ಉದ್ಯೋಗಾನುಭವದ ದಾಖಲೆ/ಸರ್ಟಿಫಿಕೇಟ್ನೊಂದಿಗೆ General Manager (HR), Bangalore Metro Rail Corporation Limited, III Floor, BMTC Complex, K.H.Road, Shanthinagar, Bengaluru 560027 ಈ ವಿಳಾಸಕ್ಕೆ ಕಳಿಸಬಹುದು. ಹೆಚ್ಚಿನ ಮಾಹಿತಿ, ಅರ್ಜಿಗಾಗಿ bmrc.co.in ನ್ನು ಭೇಟಿ ನೀಡಬಹುದು.
ಇನ್ನೆರಡು ಹುದ್ದೆಗಳು ಖಾಲಿ ಇವೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಇನ್ನೆರಡು ಹುದ್ದೆಗಳಿಗೂ ನೇಮಕಾತಿ ನಡೆಯುತ್ತಿದೆ. Chief Engineer ಮತ್ತು ಸಹಾಯಕ ಮ್ಯಾನೇಜರ್ (ಆಸ್ತಿ ಅಭಿವೃದ್ಧಿ)(Assistant Manager (Property Development) ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೇ ದಿನ ಫೆ.22 ಆಗಿದೆ. ಮುಖ್ಯ ಇಂಜಿನಿಯರ್ ವಿಭಾಗದಲ್ಲಿ ನಾಲ್ಕು ಹುದ್ದೆಗಳು ಖಾಲಿ ಇದ್ದರೆ, ಸಹಾಯಕ ಮ್ಯಾನೇಜರ್ (ಆಸ್ತಿ ಅಭಿವೃದ್ಧಿ) ವಿಭಾಗದಲ್ಲಿ 6 ಖಾಲಿ ಹುದ್ದೆಗಳಿವೆ. ಹಾಗೇ, ಮುಖ್ಯ ಇಂಜಿನಿಯರ್ಗೆ ತಿಂಗಳಿಗೆ ಎಲ್ಲ ಭತ್ಯೆ ಸೇರಿ 1.50 ಲಕ್ಷ ರೂ.ವೇತನವಿದ್ದರೆ, ಸಹಾಯಕ ಮ್ಯಾನೇಜರ್ಗೆ ತಿಂಗಳಿಗೆ 50 ಸಾವಿರ ರೂ.ಸಂಬಳವಿದೆ.
ಶೈಕ್ಷಣಿಕ ಅರ್ಹತೆ ಮುಖ್ಯ ಇಂಜಿನಿಯರ್: ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿಇ/ಬಿ.ಟೆಕ್ ಅಥವಾ ಇದಕ್ಕೆ ಸಮಾನವಾದ ಪದವಿಯನ್ನು ಪ್ರತಿಷ್ಠಿತ ಸಂಸ್ಥೆಯಿಂದ ಪಡೆದು, ಕನಿಷ್ಠ 18 ವರ್ಷಗಳ ಉದ್ಯೋಗ ಅನುಭವ ಇರಬೇಕು.
ಅಸಿಸ್ಟೆಂಟ್ ಮ್ಯಾನೇಜರ್: MBA (ಮಾರ್ಕೆಟಿಂಗ್/ ಸೇಲ್ಸ್/ ಫೈನಾನ್ಸ್) ಅಥವಾ ಅರ್ಥಶಾಸ್ತ್ರ/ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. ಇದು ಪೂರ್ಣಸಮಯದ ವಿದ್ಯಾಭ್ಯಾಸವಾಗಿರಬೇಕು. ಈ ಹುದ್ದೆಗಳಿಗೂ ಕೂಡ ಆನ್ಲೈನ್ನಲ್ಲಿ ಅರ್ಜಿ ತುಂಬಿ, ಪ್ರಿಂಟ್ ತೆಗೆದು ಮೇಲೆ ನೀಡಲಾದ ವಿಳಾಸಕ್ಕೆ ಕಳಿಸಬಹುದು. ಆದರೆ ಇದೆರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೇ ದಿನ ಫೆ.22 ಆಗಿದೆ.
ಇದನ್ನೂ ಓದಿ: Hrithik Roshan: ತಲೆಗೂದಲಿನಿಂದ ಮುಖ ಮುಚ್ಚಿಕೊಂಡ ಸಬಾ; ಕೈಹಿಡಿದು ಕರೆದೊಯ್ದ ಹೃತಿಕ್- ರೂಮರ್ ಜೋಡಿಯ ಫೋಟೋ ವೈರಲ್