ECL Recruitment 2022: ಇಸಿಎಲ್​ ನೇಮಕಾತಿ: ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ

ECL Recruitment 2022 : ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್ ಶೀಘ್ರದಲ್ಲೇ ಮೈನಿಂಗ್ ಸಿರ್ದಾರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ECIL ನಲ್ಲಿ ಮೈನಿಂಗ್ ಸಿರ್ದಾರ್ ಹುದ್ದೆಗಳ ನೇಮಕಾತಿಗಾಗಿ ಶೀಘ್ರದಲ್ಲೇ ಪ್ರಕಟಣೆ ಹೊರಡಿಸಲಾಗುತ್ತದೆ. ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಕೋಲ್ ಇಂಡಿಯಾದ ಅಂಗಸಂಸ್ಥೆಯಾಗಿದ್ದು, ಈ ಸಂಸ್ಥೆಯು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದೆ. ಮೈನಿಂಗ್ ಸಿರ್ದಾರ್ ಹುದ್ದೆಗೆ ನೇಮಕಗೊಳ್ಳಲು ಇಚ್ಛಿಸುವ ಯುವಕರು ಅಧಿಕೃತ ವೆಬ್‌ಸೈಟ್ easterncoal.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ECL ನೇಮಕಾತಿ 2022 […]

ECL Recruitment 2022: ಇಸಿಎಲ್​ ನೇಮಕಾತಿ: ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ
ECL Recruitment 2022
TV9kannada Web Team

| Edited By: Zahir PY

Feb 06, 2022 | 9:00 AM

ECL Recruitment 2022 : ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್ ಶೀಘ್ರದಲ್ಲೇ ಮೈನಿಂಗ್ ಸಿರ್ದಾರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ECIL ನಲ್ಲಿ ಮೈನಿಂಗ್ ಸಿರ್ದಾರ್ ಹುದ್ದೆಗಳ ನೇಮಕಾತಿಗಾಗಿ ಶೀಘ್ರದಲ್ಲೇ ಪ್ರಕಟಣೆ ಹೊರಡಿಸಲಾಗುತ್ತದೆ. ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಕೋಲ್ ಇಂಡಿಯಾದ ಅಂಗಸಂಸ್ಥೆಯಾಗಿದ್ದು, ಈ ಸಂಸ್ಥೆಯು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದೆ. ಮೈನಿಂಗ್ ಸಿರ್ದಾರ್ ಹುದ್ದೆಗೆ ನೇಮಕಗೊಳ್ಳಲು ಇಚ್ಛಿಸುವ ಯುವಕರು ಅಧಿಕೃತ ವೆಬ್‌ಸೈಟ್ easterncoal.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ECL ನೇಮಕಾತಿ 2022 ರ ಅರ್ಜಿ ಪ್ರಕ್ರಿಯೆಯು 10 ಮಾರ್ಚ್ 2022 ರವರೆಗೆ ನಡೆಯಲಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.

ಹುದ್ದೆಗಳ ವಿವರ: ಒಟ್ಟು ಖಾಲಿ ಹುದ್ದೆ – 313 ಹುದ್ದೆಗಳು ಸಾಮಾನ್ಯ – 127 ಹುದ್ದೆಗಳು EWS – 30 ಹುದ್ದೆಗಳು OBC – 83 ಹುದ್ದೆಗಳು SC – 46 ಹುದ್ದೆಗಳು ST – 23 ಹುದ್ದೆಗಳು

ವಿದ್ಯಾರ್ಹತೆ: ಮೈನಿಂಗ್ ಸಿರ್ದಾರ್ ಹುದ್ದೆಗೆ ಅಭ್ಯರ್ಥಿಯು ಕನಿಷ್ಠ 12ನೇ ತರಗತಿ ಪಾಸ್ ಆಗಿರಬೇಕು. ಅಲ್ಲದೆ, ಡಿಜಿಎಂಎಸ್ ನೀಡಿದ ಮೈನಿಂಗ್ ಸಿರ್ದಾರ್‌ಶಿಪ್‌ನ ಮಾನ್ಯ ಪ್ರಮಾಣಪತ್ರ ಹೊಂದಿರಬೇಕು. ಜೊತೆಗೆ ಅನಿಲ ಪರೀಕ್ಷೆಯ ಮಾನ್ಯ ಪ್ರಮಾಣಪತ್ರ ಮತ್ತು ಮಾನ್ಯವಾದ ಪ್ರಥಮ ಚಿಕಿತ್ಸಾ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಅಥವಾ.. ಮೈನಿಂಗ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಪದವಿ ಮತ್ತು ಮಾನ್ಯವಾದ ಗ್ಯಾಸ್ ಟೆಸ್ಟಿಂಗ್ ಪ್ರಮಾಣಪತ್ರ ಮತ್ತು ಮಾನ್ಯವಾದ ಪ್ರಥಮ ಚಿಕಿತ್ಸಾ ಪ್ರಮಾಣಪತ್ರ ಹೊಂದಿರಬೇಕು.

ವೇತನ: ಮೈನಿಂಗ್ ಸಿರ್ದಾರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 31,852 ರೂಪಾಯಿ ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು ಆನ್‌ಲೈನ್ ಸಲ್ಲಿಕೆ ಪ್ರಾರಂಭ – 20 ಫೆಬ್ರವರಿ 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10 ಮಾರ್ಚ್ 2022

ಅರ್ಜಿ ಸಲ್ಲಿಸುವುದು ಹೇಗೆ? – ಮೊದಲು ಅಧಿಕೃತ ವೆಬ್‌ಸೈಟ್ easterncoal.gov.in ಗೆ ಭೇಟಿ ನೀಡಿ. – ಅಲ್ಲಿ ನೀಡಲಾಗಿರುವ ನೇಮಕಾತಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ – ಈ ವೇಳೆ ನಿಮಗೆ ಮೈನಿಂಗ್ ಸಿರ್ದಾರ್ ಹುದ್ದೆಗೆ ಅರ್ಜಿ ಸಲ್ಲಿಸಲು ಲಿಂಕ್ ಕಾಣಿಸುತ್ತದೆ – ಅರ್ಜಿ ನಮೂನೆಯಲ್ಲಿ ಕೋರಿದ ಮಾಹಿತಿಯನ್ನು ಭರ್ತಿ ಮಾಡಿ. – ಅರ್ಜಿ ನಮೂನೆಯನ್ನು ಸಲ್ಲಿಸಿ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್

(Eastern Coalfields Limited recruitment: Apply for 313 vacancies from February 20)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada