ದಾವಣಗೆರೆಯಲ್ಲಿ ಜಮೀನು ಮಾಲೀಕರ ಬೇಜವಾಬ್ದಾರಿಗೆ ಸುಟ್ಟು ಭಸ್ಮವಾದ 600 ಅಡಕೆ ಮರಗಳು!
ಪಕ್ಕದ ಜಮೀನು ಮಾಲೀಕ ಕೊಟ್ರಪ್ಪ ಎಂಬುವರು ಕಸ ಸುಡುವುದಕ್ಕಾಗಿ ಬೆಂಕಿ ಹಚ್ಚಿದ್ದಾರೆ. ಇದೇ ಬೆಂಕಿ ವ್ಯಾಪಕವಾಗಿ ಹರಡಿ ಅಡಕೆ ತೋಟಕ್ಕೂ ಹೊತ್ತಿಕೊಂಡಿದೆ. ನಾಲ್ಕು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಅಡಕೆ ಮರ ಭಸ್ಮವಾಗಿದೆ.
ದಾವಣಗೆರೆ: ಜಮೀನು ಮಾಲೀಕರ ಬೇಜವಾಬ್ದಾರಿಗೆ ಸುಮಾರು 600 ಅಡಕೆ ಮರಗಳು (Areca Trees) ಸುಟ್ಟು ಭಸ್ಮವಾಗಿದ್ದು, ಈ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಹೀರೇಕೊಗಲೂರ ಗ್ರಾಮದಲ್ಲಿ ನಡೆದಿದೆ. ಎರಡು ಎಕರೆ ಪ್ರದೇಶದಲ್ಲಿದ್ದ ನಾಲ್ಕು ವರ್ಷದ ಅಡಕೆ ಮರಗಳು ಬೆಂಕಿಗೆ ಬಲಿಯಾಗಿವೆ. ಹೀರೇಕೊಗಲೂರ ಗ್ರಾಮದ ರುದ್ರಪ್ಪ ಎಂಬ ರೈತ ಎರಡು ಎಕರೆಯಲ್ಲಿ ಅಡಕೆ ಗಿಡ ಹಾಕಿದ್ದರು. ಗಿಡಗಳಿಗೆ ನಾಲ್ಕು ವರ್ಷ ಆಗಿತ್ತು. ಆದರೆ ಬೆಂಕಿ ತಗುಲಿ ಇದೀಗ ನಾಶವಾಗಿದೆ.
ಪಕ್ಕದ ಜಮೀನು ಮಾಲೀಕ ಕೊಟ್ರಪ್ಪ ಎಂಬುವರು ಕಸ ಸುಡುವುದಕ್ಕಾಗಿ ಬೆಂಕಿ ಹಚ್ಚಿದ್ದಾರೆ. ಇದೇ ಬೆಂಕಿ ವ್ಯಾಪಕವಾಗಿ ಹರಡಿ ಅಡಕೆ ತೋಟಕ್ಕೂ ಹೊತ್ತಿಕೊಂಡಿದೆ. ನಾಲ್ಕು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಅಡಕೆ ಮರ ಭಸ್ಮವಾಗಿದೆ. ತೋಟ ನೋಡಿ ರೈತ ಕುಟುಂಬ ಕಣ್ಣೀರು ಹಾಕುತ್ತಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ಅಡಕೆ ಮರಗಳು ಸುಟ್ಟು ಕರಕಲಾಗಿವೆ. ಈ ಪ್ರಕರಣ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಜಾನುವಾರು ರಕ್ಷಣೆಗೆ ರೈತ ಹರಸಾಹ: ಈ ಹಿಂದೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ತೋಟ ಮನೆಗೆ ಬೆಂಕಿ ಬಿದ್ದಿತ್ತು. ಈ ವೇಳೆ ಜಾನುವಾರು ರಕ್ಷಣೆಗೆ ರೈತ ಹರಸಾಹಸ ಪಟ್ಟಿದ್ದರು. ಆಕಸ್ಮಿಕವಾಗಿ ಬೆಂಕಿ ಬಿದ್ದು ತೋಟದ ಮನೆ ಹತ್ತಿಕೊಂಡು ಉರಿದಿದ್ದು, ಪ್ರಾಣದ ಹಂಗು ತೊರೆದು ಜಾನುವಾರು ರಕ್ಷಣೆಗೆ ರೈತ ಹರಸಾಹಸ ಪಟ್ಟಿದ್ದರು.
ಅವರೊಳ್ಳಿ ಗ್ರಾಮದಲ್ಲಿ ತಡರಾತ್ರಿ ನವರತ್ನ ಜೋಳದ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಜೀವವನ್ನೂ ಲೆಕ್ಕಿಸದೇ ಬೆಂಕಿಯಲ್ಲಿ ನುಗ್ಗಿದ ರೈತ ಜಾನುವಾರು ರಕ್ಷಣೆ ಮಾಡಿದ್ದರು. 1 ಕರು ಬೆಂಕಿಗಾಹುತಿಯಾಗಿತ್ತು. 2 ಎಮ್ಮೆ ಹಾಗೂ 1 ಹಸುವಿಗೆ ಗಂಭೀರ ಗಾಯಗಳಾಗಿತ್ತು. ತೋಟದ ಮನೆಯಲ್ಲಿದ್ದ ಕೃಷಿ ಸಾಮಗ್ರಿಯಲ್ಲವೂ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿತ್ತು.
ಇದನ್ನೂ ಓದಿ
ಹೃದಯಾಘಾತದಿಂದ ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ನಿಧನ
Statue of Equality: ಪ್ರಧಾನಿ ನರೇಂದ್ರ ಮೋದಿಯಿಂದ ಇಂದು ಸಮಾನತೆಯ ಪ್ರತಿಮೆ ಅನಾವರಣ; ವಿವರ ಇಲ್ಲಿದೆ
Published On - 9:28 am, Sat, 5 February 22