ಬೆಂಗಳೂರಿನಲ್ಲಿ ಮಧ್ಯರಾತ್ರಿ ಅಗ್ನಿ ದುರಂತ; ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಗ್ಯಾರೇಜ್
ಬೆಂಗಳೂರಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಗ್ನಿ ಅವಘಡ ಒಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಗ್ಯಾರೇಜ್ ಸುಟ್ಟು ಕರಕಲಾಗಿದೆ. ವಿವೇಕನಗರ ಮುಖ್ಯರಸ್ತೆಯ ವನ್ನಾರ್ ಪೇಟ್ ಬಳಿಯ ಕಾರು ಗ್ಯಾರೇಜ್ ನಲ್ಲಿ ಈ ಅವಘಡ ನಡೆದಿದೆ.
ಬೆಂಗಳೂರು: ಬೆಂಗಳೂರಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಗ್ನಿ (fire) ಅವಘಡ ಒಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಗ್ಯಾರೇಜ್ ಸುಟ್ಟು ಕರಕಲಾಗಿದೆ. ವಿವೇಕನಗರ ಮುಖ್ಯರಸ್ತೆಯ ವನ್ನಾರ್ ಪೇಟ್ ಬಳಿಯ ಕಾರು ಗ್ಯಾರೇಜ್ (garage) ನಲ್ಲಿ ಈ ಅವಘಡ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಗ್ಯಾರೇಜ್ ನಲ್ಲಿದ್ಸ 3 ಬೈಕ್ 4 ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಅಷ್ಟೇ ಅಲ್ಲದೇ ಗ್ಯಾರೇಜ್ನಲ್ಲಿದ್ದ ಎರಡು ಸಿಲಿಂಡರ್ ಕೂಡ ಸ್ಪೋಟಗೊಂಡಿವೆ. ಸುಮಾರು 500 ಮೀಟರ್ ನಷ್ಟು ದೂರ ಸಿಲಿಂಡರ್ ಬ್ಲಾಸ್ಟ್ ಆದ ಶಬ್ಧ ಕೇಳಿಬಂದಿದೆ. ಸ್ಫೋಟದ ತೀವ್ರತೆಗೆ ಮಧ್ಯರಾತ್ರಿ ಏರಿಯಾ ಜನ ಗಾಬರಿಗೊಂಡಿದ್ದಾರೆ. ಗ್ಯಾರೇಜ್ ಪಕ್ಕದಲ್ಲೇ ದೇವಸ್ಥಾನ ಹಾಗೂ ಮನೆಗಳು ಇದ್ದು, ಸ್ವಲ್ಪ ಪ್ರಮಾಣದ ಹಾನಿ ಸಂಭವಿಸಿದೆ ಎನ್ನಲಾಗುತ್ತಿದೆ. ನಾಸೀರ್ ಎಂಬುವವರ ಮಾಲೀಕತ್ವದ ಗ್ಯಾರೇಜ್ ಇದ್ದಾಗಿದ್ದು, ಸತತ ಒಂದುವರೆ ಗಂಟೆಗಳ ಕಾರ್ಯಾಚರಣೆ ಬಳಿಕ 3 ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಇನ್ನೂ ಬೆಂಕಿ ಬೀಳುತ್ತಿದ್ದಂತೆ ಸ್ಥಳೀಯರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಧಗಧಗಿಸ್ತಿದ್ದ ಗ್ಯಾರೇಜ್ ನಿಂದ ಮಾಲೀಕ ಕಾರು ಹೊರ ತಂದಿದ್ದಾನೆ. ಪೋಲೊ,ಹ್ಯೂಂಡೈ ಕಂಪನಿ ಕಾರು ಸೇರಿದಂತೆ ಮೂರು ಕಾರುಗಳ ರಕ್ಷಣೆ ಮಾಡಿದ್ದಾನೆ. ಅದಾಗಿಯು ಗಾಜು ಒಡೆದಿದ್ದು,ಕಾರಿನ ಮುಂಭಾಗ ಸುಟ್ಟು ಹೋಗಿವೆ. ಇಂದು ಬೆಳಗ್ಗೆ ಡಿವಲರಿ ಮಾಡಬೇಕಿದ್ದ ಕಾರುಗಳು ಬೆಳಕು ಹರಿಯುವ ಮುಂಚೆಯೇ ಸುಟ್ಟು ಕರಕಲಾಗಿವೆ. ರಾತ್ರಿ ವೇಳೆ ಸಂಭವಿಸಿದರಿಂದ ಗ್ಯಾರೇಜ್ನಲ್ಲಿ ಯಾರು ಇರಲಿಲ್ಲ. ೧೧ ಗಂಟೆಗೆ ಕೆಲಸ ಮುಗಿಸಿ ಗ್ಯಾರೇಜ್ ಮಾಲೀಕ ಮನೆಗೆ ತೆರಳಿದ್ದ. ಹಾಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಸ್ಟ್ ಮಿಸ್ ಆದ ಪೊಲೀಸ್ ಸಿಬ್ಬಂದಿ
ಬೆಂಕಿ ಅವಘಡ ಸಂಭವಿಸಿದ ಸ್ಥಳದಲ್ಲಿಯೇ ಹೊಯ್ಸಳ ಪೊಲೀಸ್ ಸಿಬ್ಬಂದಿಯೊಬ್ಬರು ಜಸ್ಟ್ ಮಿಸ್ ಆಗಿದ್ದಾರೆ. ಹೌದು ಗ್ಯಾರೇಜ್ ಬ್ಲಾಸ್ಟ್ ಆದ ರಭಸಕ್ಕೆ ತಗಡಿನ ಪೀಸ್ ಒಂದು ಮುಖ್ಯರಸ್ತೆಗೆ ಹಾರಿ ಬಂದಿದೆ. ರಾತ್ರಿ ಹೊತ್ತು ಬೀಟ್ ನಲ್ಲಿದ್ದ ಹೊಯ್ಸಳ ಸಿಬ್ಬಂದಿ ಇದೇ ಮುಖ್ಯರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಸುಮಾರು ೧೦೦ ಮೀಟರ್ ನಷ್ಟು ದೂರ ಹಾರಿ ಬಂದ ತಗಡಿನ ಪೀಸ್ ಹೊಯ್ಸಳ ಪೊಲೀಸ್ ಸಿಬ್ಬಂದಿಯ ಕಾರು ಹೋಗ್ತಿದ್ದಂತೆ ಪಕ್ಕದಲ್ಲೇ ಬಂದು ಬಿದ್ದಿದೆ. ಹಾಗಾಗಿ ಹೊಯ್ಸಳ ಪೊಲೀಸ್ ಸಿಬ್ಬಂದಿ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ;
ತವರುಮನೆ ಆಸ್ತಿಗಾಗಿ ಸಹೋದರಿಯರ ಕಾದಾಟ; ತಂಗಿಗೆ ಬೆಂಕಿ ಹಚ್ಚಿ ಕೊಂದು, ತಾನೂ ಆಸ್ಪತ್ರೆ ಸೇರಿರುವ ಅಕ್ಕ