ಕಂದಾಯ ಇಲಾಖೆಗೆ ಈಗ ಮತ್ತೊಂದು ಟೆನ್ಷನ್: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಂಘಟನೆಗಳ ಪಟ್ಟು

| Updated By: ಆಯೇಷಾ ಬಾನು

Updated on: Sep 26, 2022 | 12:01 PM

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಅವಕಾಶ ಕೊಡಬೇಕು ಎಂಬ ಕೂಗು ಎದ್ದಿದೆ. ಇಂದು ಸಂಜೆ 6 ಗಂಟೆಗೆ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಸಭೆ ಹಮ್ಮಿಕೊಂಡಿದೆ.

ಕಂದಾಯ ಇಲಾಖೆಗೆ ಈಗ ಮತ್ತೊಂದು ಟೆನ್ಷನ್: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಂಘಟನೆಗಳ ಪಟ್ಟು
ಚಾಮರಾಜಪೇಟೆ ಈದ್ಗಾ ಮೈದಾನ
Follow us on

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ(chamrajpet Idgah Maidan) ಗಣೇಶ ಕೂರಿಸುವ ಬಗ್ಗೆ ಇದ್ದಂತಹ ಗೊಂದಲ ಮುಗಿಯುತ್ತಿದ್ದಂತೆ ಕಂದಾಯ ಇಲಾಖೆಗೆ ಈಗ ಮತ್ತೊಂದು ಟೆನ್ಷನ್ ಶುರುವಾಗಿದೆ. ಹೀಗಾಗಿ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಈಗ ಮತ್ತೆ ತಲೆ ಎತ್ತಿದೆ. ಗಣೇಶ ಹಬ್ಬ ಮಗೀತು. ಈಗ ಕನ್ನಡ ರಾಜ್ಯೋತ್ಸವ ಆಚರಣೆಗೆ(Kannada Rajyotsava) ಪಟ್ಟು ಹೆಚ್ಚಾಗಿದೆ.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಅವಕಾಶ ಕೊಡಬೇಕು ಎಂಬ ಕೂಗು ಎದ್ದಿದೆ. ಧ್ವಜಾರೋಹಣ, ಗಣೇಶೋತ್ಸವ ಮುಗಿದರೂ ಈ ಗಲಾಟೆ ಮಾತ್ರ ತಣ್ಣಗಾಗುವಂತೆ ಕಾಣುತ್ತಿಲ್ಲ. ಗಣೇಶೋತ್ಸವಕ್ಕೆ ಅನುಮತಿ ಸಿಗದೆ ನಿರಾಸೆಗೊಂಡಿರೋ ಹಿಂದೂ ಸಂಘಟನೆಗಳು ಇದೀಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಪಟ್ಟು ಹಿಡಿದಿವೆ. ಕನ್ನಡ ಸಾಹಿತ್ಯ ಪರಿಷತ್ ನಿಂದ ನಾಡಧ್ವಜ ಹಾರಿಸುವಂತೆ ಒತ್ತಡ ಹೇರಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಮನವಿ ಮಾಡಿದೆ. ಇದನ್ನೂ ಓದಿ: ಇದೇ ಮೊದಲ ಬಾರಿಗೆ ಆಸ್ತಿ ಘೋಷಿಸಿದ TTD, ಅಬ್ಬಬ್ಬಾ…ತಿರುಪತಿ ತಿಮ್ಮಪ್ಪ ಎಷ್ಟು ಶ್ರೀಮಂತ ಗೊತ್ತಾ?

ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿದಂತೆ ಕನ್ನಡ ಧ್ವಜ ಹಾರಿಸುವ ಬಗ್ಗೆ ಚರ್ಚಿಸಲು ಇಂದು ಸಂಜೆ 6 ಗಂಟೆಗೆ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಸಭೆ ಹಮ್ಮಿಕೊಂಡಿದೆ. ಸಭೆ ಬಳಿಕ ಸಿಎಂ ಬೊಮ್ಮಾಯಿ ಹಾಗೂ ಕಂದಾಯ ಸಚಿವರ ಭೇಟಿ ಮಾಡಿ ರಾಷ್ಟ್ರ ಧ್ಜಜ ಹಾರಿದ ರೀತಿಯೇ ನಾಡಧ್ವಜವನ್ನ ಹಾರಿಸುವಂತೆ ಮನವಿ ಮಾಡಲಾಗುತ್ತೆ. ಇನ್ನು ಈ ಬಗ್ಗೆ ಮಾತನಾಡಿದ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ಖಜಾಂಚಿ ಯಶವಂತ್, ಚಾಮರಾಜಪೇಟೆ ನಾಗರೀಕರ ಒಕ್ಕೂಟವೇ ಅಂತಲ್ಲ, ಶಾಸಕ ಜಮೀರ್ ಅವ್ರೇ ಕನ್ನಡ ಬಾವುಟ ಹಾರಿಸಲಿ. 2006ರಲ್ಲೇ ಮೈದಾನದಲ್ಲಿ ನಾಡ ಧ್ವಜ ಹಾರಿಸೋದಾಗಿ ಹೇಳಿದ್ದರು. ಶಾಸಕ ಜಮೀರ್ ಅವರೇ ಖುದ್ದಾಗಿ ನಿಂತು ಕನ್ನಡ ಧ್ವಜ ಹಾರಿಸಲಿ. ಮೈದಾನ ಸರ್ಕಾರಿ ಸ್ವತ್ತೆಂದು ಘೋಷಣೆ ಆದ ಮೇಲೆ ಕನ್ನಡ ಧ್ವಜ ಹಾರಿಸಬೇಕು ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:01 pm, Mon, 26 September 22