Hit and Run: ಕುಡಿದ ಮತ್ತಲ್ಲಿ ಯುವಕ, ಯುವತಿಯರ ಜಾಲಿ ರೈಡ್: ಹಿಟ್ ಆ್ಯಂಡ್ ರನ್​ಗೆ ಡೆಲೆವೆರಿ ಬಾಯ್​ ಬಲಿ

|

Updated on: Jun 19, 2023 | 7:01 AM

ಬೆಂಗಳೂರಲ್ಲಿ ಹಿಟ್​​  ಆ್ಯಂಡ್​ ರನ್​ಗೆ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಆರ್​.ಆರ್​​. ನಗರದ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

Hit and Run: ಕುಡಿದ ಮತ್ತಲ್ಲಿ ಯುವಕ, ಯುವತಿಯರ ಜಾಲಿ ರೈಡ್: ಹಿಟ್ ಆ್ಯಂಡ್ ರನ್​ಗೆ ಡೆಲೆವೆರಿ ಬಾಯ್​ ಬಲಿ
ಅಪಘಾತವಾದ ಕಾರು (ಎಡಚಿತ್ರ) ಮೃತ ಪವನ್​ (ಬಲಚಿತ್ರ)
Follow us on

ಬೆಂಗಳೂರು: ನಗರದಲ್ಲಿ ಹಿಟ್​​ ಆ್ಯಂಡ್​ ರನ್​ಗೆ (Hit and Run) ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಆರ್​.ಆರ್​​. ನಗರದ (RR Nagar) ಮೆಟ್ರೋ ನಿಲ್ದಾಣದ (Metro Station) ಬಳಿ ನಡೆದಿದೆ. ಜೊಮ್ಯಾಟೊ (Zomato) ಡೆಲಿವರಿ ಬಾಯ್ (Delivery Boy) ಪವನ್​ ಮೃತ ದುರ್ದೈವಿ. ಮೃತ ಪವನ್, ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ನಿವಾಸಿಯಾಗಿದ್ದನು. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಕಾರು ಚಾಲಕ ವಿನಾಯಕ್​​ ವಿಜಯನಗರ ನಿವಾಸಿಯಾಗಿದ್ದು, ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ರಾಜಾಜಿನಗರದ ಮಹೀಂದ್ರ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದಾನೆ. ವೀಕೆಂಡ್​ ಹಿನ್ನೆಲೆ ಇನ್ಸೆಂಟಿವ್ ಹಣದಲ್ಲಿ ನಿನ್ನೆ (ಜೂ.18) ರಾತ್ರಿ ಗೆಳೆಯರ ಜೊತೆ ಪಾರ್ಟಿ ​ಪಾರ್ಟಿ ಮಾಡಿದ್ದಾನೆ.

ಪಾರ್ಟಿ ಬಳಿಕ ಗೆಳೆಯ ಗೆಳೆಯ ಸಾಗರ್​ ಎಂಬವನಿಗೆ ಡ್ರಾಪ್​ ನೀಡಲು ಕಾರಿನಲ್ಲಿ ಮೂವರು ಯುವತಿರು ಓರ್ವ ಯುವಕ ನಾಯಂಡಹಳ್ಳಿಯಿಂದ ಆರ್​.ಆರ್​ನಗರದ ಕಡೆಗೆ ತೆರಳಿದ್ದಾರೆ. ವಿನಾಯಕ್ ಕುಡಿದ ಮತ್ತಿನಲ್ಲೇ ಕಾರು ಚಲಾಯಿಸುತ್ತಿದ್ದು, ತಡರಾತ್ರಿ 1:45ರ ಸುಮಾರಿಗೆ ಆರ್​.ಆರ್​​. ನಗರದ ಮೆಟ್ರೋ ನಿಲ್ದಾಣದ ಬಳಿ ಮುಂದೆ ಹೋಗುತ್ತಿದ್ದ ಜೊಮ್ಯಾಟೊ ಡೆಲಿವರಿ ಬಾಯ್ ಪವನ್ ​ಬೈಕ್​​ಗೆ ಹಿಂದಿನಿಂದ ಗುದ್ದಿದ್ದಾನೆ.

ಇದನ್ನೂ ಓದಿ: Bengaluru Mysuru Expressway: ಸಾವಿನ ಹೆದ್ದಾರಿಯಾಗುತ್ತಿರುವ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪವನ್​​​​​ನನ್ನು ಕಾರು 100 ಮೀಟರ್ ಎಳೆದೊಯ್ದಿದೆ. ನಂತರ ಪವನ್​​ ಬಿಟ್ಟು ಕಾರು ಸಮೇತ ಯುವಕ, ಯುವತಿಯರು ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನು ಕಂಡ ಸ್ಥಳೀಯರು ಸುಮಾರು 1 ಕಿ.ಮೀ.ವರೆಗೂ ಕಾರನ್ನು ಚೇಸ್​ ಮಾಡಿದ್ದಾರೆ. ನಂತರ ಕಾರನ್ನು ಅಡ್ಡ ಹಾಕಿ ಆರೋಪಿ ಚಾಲಕ ವಿನಾಯಕನನ್ನು ಹಿಡಿದು ಸ್ಥಳೀಯರು ಥಳಿಸಿದ್ದಾರೆ. ಕಾರಿನ ಗ್ಲಾಸ್​ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ಮೂವರು ಯುವತಿಯರು, ಯುವಕ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರು ಆರೋಪಿ ವಿನಾಯಕ್​ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತಪಾಸಣೆ ವೇಳೆ ವಿನಾಯಕ್​ ಮದ್ಯಪಾನ ಮಾಡಿರುವುದು ದೃಢವಾಗಿದೆ. ಇನ್ನು ಕಾರಿನಲ್ಲಿ ಯುವತಿಯರ ಐಡಿ ಕಾರ್ಡ್​ ಪತ್ತೆಯಾಗಿದೆ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:01 am, Mon, 19 June 23