Hit And Run: ಸ್ಕೂಟಿಗೆ ಕಾರು ಡಿಕ್ಕಿ, ಬೈಕ್ ಸವಾರ ರಕ್ತಸಿಕ್ತವಾಗಿ ಕಾರಿನ ಮೇಲೆ ಬಿದ್ದಿದ್ದರೂ ಒಂದಿಷ್ಟೂ ಕನಿಕರವಿಲ್ಲದೆ 3 ಕಿ.ಮೀ ಕಾರು ಓಡಿಸಿದ ಚಾಲಕ
ದೆಹಲಿಯಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್( Hit And Run) ಪ್ರಕರಣ ಬೆಳಕಿಗೆ ಬಂದಿದೆ, ಕಾರು ಚಾಲಕನೊಬ್ಬ ಸ್ಕೂಟಿಗೆ ಗುದ್ದಿದ ರಭಸಕ್ಕೆ ಚಾಲಕ ಕಾರಿನ ಮೇಲೆ ಬಿದ್ದರೂ ಒಂದು ಚೂರು ಕನಿಕರವಿಲ್ಲದೆ 3 ಕಿಲೋಮೀಟರ್ ಕಾರು ಚಲಾಯಿಸಿಕೊಂಡು ಹೋದ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್( Hit And Run) ಪ್ರಕರಣ ಬೆಳಕಿಗೆ ಬಂದಿದೆ, ಕಾರು ಚಾಲಕನೊಬ್ಬ ಸ್ಕೂಟಿಗೆ ಗುದ್ದಿದ ರಭಸಕ್ಕೆ ಚಾಲಕ ಕಾರಿನ ಮೇಲೆ ಬಿದ್ದರೂ ಒಂದು ಚೂರು ಕನಿಕರವಿಲ್ಲದೆ 3 ಕಿಲೋಮೀಟರ್ ಕಾರು ಚಲಾಯಿಸಿಕೊಂಡು ಹೋದ ಘಟನೆ ದೆಹಲಿಯಲ್ಲಿ ನಡೆದಿದೆ. ಅಪಘಾತದಲ್ಲಿ ಸ್ಕೂಟಿ ಚಲಾಯಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಡಿಯೋ ರೆಕಾರ್ಡ್ ಮಾಡಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಗಾಂಧಿ ಮಾರ್ಗ ಮತ್ತು ಟಾಲ್‌ಸ್ಟಾಯ್ ಮಾರ್ಗದ ಛೇದಕದಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕನೊಬ್ಬ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದಾನೆ. ಘರ್ಷಣೆಯ ನಂತರ, ಯುವಕರಲ್ಲಿ ಒಬ್ಬರ ದೇಹ ಹಲವಾರು ಅಡಿಗಳಷ್ಟು ದೂರ ಹೋಗಿ ಬಿದ್ದರೆ ಮತ್ತೊಬ್ಬರು ಕಾರಿನ ಛಾವಣಿಯ ಮೇಲೆ ಬಿದ್ದಿದ್ದರು.
ಪರಿಸ್ಥಿತಿಯನ್ನು ನಿಭಾಯಿಸುವ ಬದಲು, ಯಾರಿಗೆ ಏನಾಗಿದೆ ಎನ್ನುವ ಪರಿಜ್ಞಾನವೂ ಇಲ್ಲದೆ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಘಟನೆಯ ಪ್ರತ್ಯಕ್ಷದರ್ಶಿ ಮೊಹಮ್ಮದ್ ಬಿಲಾಲ್, ಘಟನೆಯನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡುವಾಗ ಪರಾರಿಯಾಗುತ್ತಿದ್ದ ವಾಹನವನ್ನು ತನ್ನ ಸ್ಕೂಟರ್‌ನಲ್ಲಿ ಹಿಂಬಾಲಿಸಿದ್ದಾರೆ. ಕಾರ್ ಚಾಲಕನಿಗೆ ಹಾರ್ನ್ ಮಾಡಿ ಕೂಗಿ ಎಚ್ಚರಿಸಲು ಯತ್ನಿಸಿದರೂ ಕಾರು ನಿಲ್ಲಲಿಲ್ಲ.
ಮತ್ತಷ್ಟು ಓದಿ: ಮಂಡ್ಯ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ನಾಲ್ವರ ಸಾವು
ಸುಮಾರು 3 ಕಿಲೋಮೀಟರ್ ಓಡಿಸಿದ ನಂತರ ಶಂಕಿತರು ಗಾಯಗೊಂಡ ವ್ಯಕ್ತಿಯನ್ನು ದೆಹಲಿ ಗೇಟ್ ಬಳಿ ಕಾರಿನಿಂದ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಇದರ ಪರಿಣಾಮ 30 ವರ್ಷದ ದೀಪಾಂಶು ವರ್ಮಾ ಗಾಯಗೊಂಡು ಸಾವನ್ನಪ್ಪಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಆತನ 20 ವರ್ಷದ ಸೋದರ ಸಂಬಂಧಿ ಮುಕುಲ್ ಸ್ಥಿತಿ ಚಿಂತಾಜನಕವಾಗಿದೆ.
#WATCH | Man Dies In Delhi Hit-And-Run, Seen Lying On Roof As Car Driven For 3 Km
Following a car hit a motorcycle one of the men on a motorcycle was thrown several feet away, while the other landed on the roof of the car
Incident took place at the intersection of Kasturba… pic.twitter.com/7ta267NDjT
— Subodh Kumar (@kumarsubodh_) May 3, 2023
ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ, ಆದರೆ ಪೊಲೀಸರು ಇನ್ನೂ ಅವರನ್ನು ಹೆಸರಿಸಿಲ್ಲ. ಚಿನ್ನಾಭರಣ ಅಂಗಡಿ ನಡೆಸುತ್ತಿದ್ದ ದೀಪಾಂಶು ವರ್ಮಾ ಅವರು ತಂದೆ-ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ದೆಹಲಿಯಲ್ಲಿ ಹೊಸ ವರ್ಷದಂದು ಯುವತಿಯೊಬ್ಬಳ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದ ಕಾರು ಆಕೆಯನ್ನು ಸಾಕಷ್ಟು ದೂರ ಎಳೆದೊಯ್ದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Wed, 3 May 23