Bhuj Earthquake 2001: ಕುಟುಂಬದವರೆಲ್ಲಾ ಪ್ರಾಣ ಬಿಟ್ಟಿದ್ದ ಕಾಂಕ್ರೀಟ್​ ರಾಶಿಗಳ ನಡುವಿಂದ ಪವಾಡವೆಂಬಂತೆ ಬದುಕಿ ಬಂದಿದ್ದ 8 ತಿಂಗಳ ಮಗುವಿಗೀಗ ನಿಶ್ಚಿತಾರ್ಥ

Bhuj Earthquake 2001: 22 ವರ್ಷಗಳ ಹಿಂದೆ ಭುಜ್​ನಲ್ಲಿ ಸಂಭವಿಸಿದ್ದ ಭಾರಿ ಭೂಕಂಪ(Earthquake)ದಲ್ಲಿ ಅವಶೇಷಗಳಡಿ ಸಿಲುಕಿದವರು ಎಲ್ಲರೂ ಮೃತಪಟ್ಟಿದ್ದಾರೆ ಎಂದುಕೊಳ್ಳುತ್ತಿರುವ ಹೊತ್ತಿಗೆ ಉಸಿರು ಬಿಗಿ ಹಿಡಿದು ಬದುಕಿ ಬಂದಿದ್ದ 8 ತಿಂಗಳ ಮಗುವಿಗೀಗ ನಿಶ್ಚಿತಾರ್ಥ.

Bhuj Earthquake 2001: ಕುಟುಂಬದವರೆಲ್ಲಾ ಪ್ರಾಣ ಬಿಟ್ಟಿದ್ದ ಕಾಂಕ್ರೀಟ್​ ರಾಶಿಗಳ ನಡುವಿಂದ ಪವಾಡವೆಂಬಂತೆ ಬದುಕಿ ಬಂದಿದ್ದ 8 ತಿಂಗಳ ಮಗುವಿಗೀಗ ನಿಶ್ಚಿತಾರ್ಥ
ಭೂಕಂಪ
Follow us
ನಯನಾ ರಾಜೀವ್
|

Updated on:May 03, 2023 | 1:03 PM

22 ವರ್ಷಗಳ ಹಿಂದೆ ಭುಜ್​ನಲ್ಲಿ ಸಂಭವಿಸಿದ್ದ ಭಾರಿ ಭೂಕಂಪ(Earthquake)ದಲ್ಲಿ ಅವಶೇಷಗಳಡಿ ಸಿಲುಕಿದವರು ಎಲ್ಲರೂ ಮೃತಪಟ್ಟಿದ್ದಾರೆ ಎಂದುಕೊಳ್ಳುತ್ತಿರುವ ಹೊತ್ತಿಗೆ ಉಸಿರು ಬಿಗಿ ಹಿಡಿದು ಬದುಕಿ ಬಂದಿದ್ದ 8 ತಿಂಗಳ ಮಗುವಿಗೀಗ ನಿಶ್ಚಿತಾರ್ಥ. ಗುಜರಾತ್​ನ ಭುಜ್​ನಲ್ಲಿ ಸಂಭವಿಸಿದ ಭೂಕಂಪದಲ್ಲಿ 13 ಮಂದಿ ಮೃತಪಟ್ಟಿದ್ದರು. ಭೂಕಂಪ ಸಂಭವಿಸಿ ನಾಲ್ಕು ದಿನಗಳ ಕಳೆದ ಬಳಿಕ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿತ್ತು, ಆ ಸಂದರ್ಭದಲ್ಲಿ ಮಗುವಿನ ಅಳು ಕೇಳಿಸಿತ್ತು. ಎಂಟು ತಿಂಗಳ ಮಗು ಕಾಂಕ್ರೀಟ್​ ರಾಶಿಗಳ ಅಡಿಯಿಂದ ಜೀವಂತವಾಗಿ ಬದುಕಿಬಂದಿತ್ತು.

ಈಗ ಅವರಿಗೆ 22 ವರ್ಷ, ಹೆಸರು ಮುರ್ತಾಜಾ ಅಲಿ ವೆಜ್ಲಾನಿ, ಮುರ್ತಾಜಾ ಈಗ ತನ್ನ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದಾರೆ. ವಾಸ್ತವವಾಗಿ, ಕಳೆದ ವಾರ, ಮುರ್ತಾಜಾ ರಾಜ್‌ಕೋಟ್‌ನ ಹುಡುಗಿಯೊಂದಿಗೆ ಭುಜ್‌ನ ಮಸೀದಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ಮತ್ತಷ್ಟು ಓದಿ: New Zealand Earthquake: ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ 6.1 ತೀವ್ರತೆಯ ಭೂಕಂಪ

ಜನವರಿ 26 ರಂದು ಭುಜ್‌ನಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದಾಗ, ವೆಜ್ಲಾನಿ ಕುಟುಂಬದ ಮೂರು ಅಂತಸ್ತಿನ ಮನೆಯು ಭೂಕಂಪದಲ್ಲಿ ನೆಲಸಮವಾಗಿತ್ತು. ಈ ಭೂಕಂಪದಲ್ಲಿ ಮುರ್ತಾಜಾ ಅವರ ಇಡೀ ಕುಟುಂಬ ಪ್ರಾಣ ಕಳೆದುಕೊಂಡಿದೆ. ಅವರ ಅಜ್ಜ, ಪೋಷಕರು, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಎಂಟು ಕುಟುಂಬ ಸದಸ್ಯರು ಸಾವನ್ನಪ್ಪಿದ್ದರು.

ಆ ಸಮಯದಲ್ಲಿ ಮುರ್ತಾಜಾ ಅವರ ಅಜ್ಜಿ ಮೊರ್ಬಿಯಲ್ಲಿರುವ ತನ್ನ ತಾಯಿಯ ಮನೆಗೆ ಹೋಗಿದ್ದರು , ಆದ್ದರಿಂದ ಅವರ ಪ್ರಾಣ ಉಳಿದಿತ್ತು. ಮುರ್ತಾಜಾ ಅವರ ತಾಯಿ ಜೈನಾಬ್ ಅವರ ತೋಳುಗಳಿಂದ ಮಗುವನ್ನು ಬೇರ್ಪಡಿಸಲಾಗಿತ್ತು. ಮುರ್ತಜಾ ಅವರ ಚಿಕ್ಕಮ್ಮ ನಸೀಫಾ ಹಾಗೂ ಅವರ ಪತಿ ಜಾಹಿದ್ ಸಲಹಿದ್ದರು. ಇದೀಗ ಮುರ್ತಜಾ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Wed, 3 May 23

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ