AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಲ್ಕಿಸ್ ಬಾನೊ ಪ್ರಕರಣ: ಅಪರಾಧಿಗಳಿಗೆ ಕ್ಷಮಾಪಣೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಮೇ9ಕ್ಕೆ ಮುಂದೂಡಿದ ಸುಪ್ರೀಂ

Bilkis Bano: ಅಪರಾಧಿಗಳ ಪರವಾಗಿ ಹಾಜರಾದ ಹಲವಾರು ವಕೀಲರು ಬಾನೊ ಅವರ ಮನವಿಯ ಮೇಲೆ ನೋಟಿಸ್ ನೀಡದಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದು ಇದನ್ನು ಗಮನಿಸಿದ ಉನ್ನತ ನ್ಯಾಯಾಲಯ, "ಈ ಪೀಠವು ವಿಚಾರಣೆಯನ್ನು ನಡೆಸುವುದನ್ನು ನೀವೆಲ್ಲರೂ ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದೆ.

ಬಿಲ್ಕಿಸ್ ಬಾನೊ ಪ್ರಕರಣ: ಅಪರಾಧಿಗಳಿಗೆ ಕ್ಷಮಾಪಣೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಮೇ9ಕ್ಕೆ ಮುಂದೂಡಿದ ಸುಪ್ರೀಂ
ಬಿಲ್ಕಿಸ್ ಬಾನೊ
ರಶ್ಮಿ ಕಲ್ಲಕಟ್ಟ
|

Updated on: May 03, 2023 | 1:04 PM

Share

ದೆಹಲಿ: 2002ರ ಗೋಧ್ರಾ ಗಲಭೆ ನಂತರದ (2002 Godhra riots) ಅವಧಿಯಲ್ಲಿ ಬಿಲ್ಕಿಸ್ ಬಾನೊ (Bilkis Bano)ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಕಳೆದ ವರ್ಷ ಎಲ್ಲಾ 11 ಅಪರಾಧಿಗಳಿಗೆ ನೀಡಲಾದ ಕ್ಷಮಾಪಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಮೇ 9ಕ್ಕೆ ಮುಂದೂಡಿದೆ. ಅಪರಾಧಿಗಳ ಪರವಾಗಿ ಹಾಜರಾದ ಹಲವಾರು ವಕೀಲರು ಬಾನೊ ಅವರ ಮನವಿಯ ಮೇಲೆ ನೋಟಿಸ್ ನೀಡದಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದು ಇದನ್ನು ಗಮನಿಸಿದ ಉನ್ನತ ನ್ಯಾಯಾಲಯ, “ಈ ಪೀಠವು ವಿಚಾರಣೆಯನ್ನು ನಡೆಸುವುದನ್ನು ನೀವೆಲ್ಲರೂ ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದೆ. ಕೇಂದ್ರ ಮತ್ತು ಗುಜರಾತ್ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ಪೀಠಕ್ಕೆ ತಾವು ಯಾವುದೇ ವಿಶೇಷಾಧಿಕಾರವನ್ನು ಪಡೆದುಕೊಳ್ಳುತ್ತಿಲ್ಲ ಮತ್ತು ನ್ಯಾಯಾಲಯದ ಮಾರ್ಚ್ 27 ರ ಆದೇಶದ ಮರುಪರಿಶೀಲನೆಗೆ ಯಾವುದೇ ಮನವಿ ಸಲ್ಲಿಸುತ್ತಿಲ್ಲ ಎಂದು ಹೇಳಿದರು. ಮಾರ್ಚ್ 27ರ ಆದೇಶದಲ್ಲಿ ಅಪರಾಧಿಗಳಿಗೆ ನೀಡಲಾದ ಕ್ಷಮಾಪಣೆಗೆ ಸಂಬಂಧಿಸಿದಂತೆ ಮೂಲ ದಾಖಲೆಗಳನ್ನು ಒದಗಿಸುವಂತೆ ನ್ಯಾಯಾಲಯ ಹೇಳಿತ್ತು.

ತುಷಾರ್ ಮೆಹ್ತಾ ಅವರು ಬಾನೊ ಅವರು ಸಲ್ಲಿಸಿದ ಅರ್ಜಿಗಳನ್ನು ಹೊರತುಪಡಿಸಿ ಇತರ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಆಕ್ಷೇಪಣೆಗಳನ್ನು ಎತ್ತಿದ್ದು ಆಗಾಗ್ಗೆ ಮೂರನೇ ವ್ಯಕ್ತಿಗಳು ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾಲಯಗಳನ್ನು ಸಂಪರ್ಕಿಸುವುದರಿಂದ ಇದು ವ್ಯಾಪಕವಾದ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಹೇಳಿದರು. ಬಿಡುಗಡೆಗೊಂಡಿರುವ ಅಪರಾಧಿಗಳ ಪರ ಹಲವು ವಕೀಲರು ಬಾನೊ ಅವರ ಮನವಿಗೆ ತಮ್ಮ ಉತ್ತರಗಳನ್ನು ಸಲ್ಲಿಸಲು ಸಮಯ ಬೇಕು ಎಂದು ಹೇಳಿದ್ದರಿಂದ ಪೀಠವು ಮೇ 9 ರಂದು ವಿಚಾರಣೆಯನ್ನು ನಿಗದಿಪಡಿಸಿದೆ.

ನಾವು ಟೈಮ್‌ಲೈನ್‌ಗಳನ್ನು ಮಾತ್ರ ನಿಗದಿಪಡಿಸುತ್ತಿದ್ದೇವೆ, ಆದ್ದರಿಂದ ಯಾವುದೇ ನ್ಯಾಯಾಲಯವು ವಿಷಯವನ್ನು ಕೈಗೆತ್ತಿಕೊಂಡರೂ ಈ ಕಾರ್ಯವಿಧಾನದ ಸಮಸ್ಯೆಗಳಿಗೆ ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ. ಜೂನ್ 16 ರ ರಜೆಯಲ್ಲಿ ನಾನು ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಕೊನೆಯ ಕೆಲಸದ ದಿನ ಮೇ 19. ನನ್ನ ಸಹೋದರಿ (ನ್ಯಾಯಮೂರ್ತಿ ನಾಗರತ್ನ) ಮೇ 25 ರವರೆಗೆ ಸಿಂಗಾಪುರದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ನೀವೆಲ್ಲರೂ ಒಪ್ಪಿದರೆ, ರಜೆಯ ಸಮಯದಲ್ಲಿ ನಾವು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಬಹುದು ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದ್ದಾರೆ.

ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ವೃಂದಾ ಗ್ರೋವರ್ ಸೇರಿದಂತೆ ಅರ್ಜಿದಾರರ ಪರ ಹಾಜರಾದ ಕೆಲವು ವಕೀಲರು, ಬೇಸಿಗೆ ರಜೆಯಲ್ಲಿ ಪೀಠವು ಈ ವಿಷಯವನ್ನು ಆಲಿಸಬಹುದು ಎಂದು ಒಪ್ಪಿಕೊಂಡರು. ಆದಾಗ್ಯೂ, ಮೆಹ್ತಾ, ರಜೆಯ ಮೊದಲು ವಿಷಯವನ್ನು ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯವನ್ನು ವಿನಂತಿಸಿದ್ದಾರೆ.

ಇದನ್ನೂ ಓದಿ:ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ಬಿಡುಗಡೆ ಬಗ್ಗೆ ದಾಖಲೆ ಸಲ್ಲಿಸಲು ಕೇಂದ್ರ, ಗುಜರಾತ್ ಸರ್ಕಾರ ಸಮ್ಮತಿ

ನಾನು ಈ ಪ್ರಕರಣಕ್ಕೆ ಮಾತ್ರ ಲಭ್ಯವಿಲ್ಲ ಎಂದಲ್ಲ ಯಾವುದೇ ಪ್ರಕರಣಗಳಿಗೆ ಲಭ್ಯವಿಲ್ಲ. ಒಮ್ಮೆ ನಾವು ಒಂದು ಪ್ರಕರಣಕ್ಕೆ ವಿನಾಯಿತಿ ನೀಡಿದರೆ, ನಾನು ಎಲ್ಲಾ ಪ್ರಕರಣಗಳಿಗೆ ವಿನಾಯಿತಿ ನೀಡಬೇಕಾಗುತ್ತದೆ ಎಂದು ಮೆಹ್ತಾ ಹೇಳಿದ್ದಾರೆ.

ಕಾನೂನಿನ ಪ್ರಶ್ನೆಯನ್ನು ಮಾತ್ರ ನಿರ್ಧರಿಸಬೇಕಾಗಿರುವುದರಿಂದ ವಿಷಯವು ಬಹಳ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎಂದು ವಕೀಲೆ ಶೋಭಾ ಗುಪ್ತಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜೋಸೆಫ್, ಅಪರಾಧಿಗಳ ಪರ ವಾದ ಮಂಡಿಸುತ್ತಿರುವ ವಕೀಲರು ಈ ವಿಚಾರಣೆ ನಡೆಯುವುದನ್ನು ಬಯಸುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರತಿ ಬಾರಿ ಪ್ರಕರಣವನ್ನು ಕರೆಯುವಾಗ, ಒಬ್ಬ ವ್ಯಕ್ತಿ ಅಥವಾ ಇನ್ನೊಬ್ಬರು ಬಂದು ತನಗೆ ಅರ್ಜಿ ಸಲ್ಲಿಸಲು ಸಮಯ ಬೇಕು ಎಂದು ಹೇಳುತ್ತಾರೆ. ಇದರಿಂದ ಇದು ಹೆಚ್ಚು ಸ್ಪಷ್ಟವಾಗಿದೆ.

ಇಲ್ಲಿ ಏನು ಪ್ರಯತ್ನಿಸಲಾಗುತ್ತಿದೆ ಎಂಬುದು ಸ್ವಲ್ಪಮಟ್ಟಿಗೆ ಸ್ಪಷ್ಟವಾಗಿದೆ. ಸ್ಪಷ್ಟಕ್ಕಿಂತ ಹೆಚ್ಚಾಗಿ, ಈ ಪೀಠವು ವಿಚಾರಣೆಯನ್ನು ನಡೆಸುವುದನ್ನು ನೀವೆಲ್ಲರೂ ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದು ನನಗೆ ನ್ಯಾಯಸಮ್ಮತವಲ್ಲ. ನಮ್ಮ ಕೊನೆಯ ವಿಚಾರಣೆಯಲ್ಲಿ, ಮುಂದಿನ ವಿಚಾರಣೆಯ ದಿನಾಂಕದಂದು ವಿಷಯವನ್ನು ಅಂತಿಮ ವಿಚಾರಣೆಗೆ ಇಡಲಾಗುವುದು ಎಂದು ನಾವು ಸಂಪೂರ್ಣವಾಗಿ ಸ್ಪಷ್ಟಪಡಿಸಿದ್ದೇವೆ. ನೆನಪಿಡಿ, ನೀವೆಲ್ಲರೂ (ಅಪರಾಧಿಗಳ ಪರ ವಕೀಲರು) ನ್ಯಾಯಾಲಯದ ಅಧಿಕಾರಿಗಳು. ನಿಮ್ಮ ಪಾತ್ರವನ್ನು ಮರೆಯಬೇಡಿ. ನೀವು ಕೇಸ್ ಒಂದನ್ನು ಗೆಲ್ಲಬಹುದು ಇಲ್ಲವೇ ಸೋಲಬಹುದು., ಆದರೆ ನ್ಯಾಯಾಲಯದ ಕಡೆಗೆ ನಿಮ್ಮ ಕರ್ತವ್ಯವನ್ನು ಮರೆಯಬೇಡಿ. ಜುಲೈ ಎರಡನೇ ವಾರದಲ್ಲಿ ಅಂತಿಮ ವಿಚಾರಣೆಗೆ ಹೊಸ ಪೀಠವು ಈ ವಿಷಯವನ್ನು ಕೈಗೆತ್ತಿಕೊಳ್ಳಲಿದೆ ಎಂದು ನ್ಯಾಯಾಲಯ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ