AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಡ್ಡದಾರಿ ಹುಡುಕುವ ಮನೋಭಾವ ಬೇಡ’; ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಸಚಿನ್ ತೆಂಡಲ್ಕೂರ್ ಹೇಳಿಕೆ

Sachin Tendulkar Breaks Silence: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಸಚಿನ್ ತೆಂಡೂಲ್ಕರ್ ಮೌನ ಮುರಿದಿದ್ದಾರೆ. ತಮ್ಮ ತಂದೆಯ ಪಾಠಗಳನ್ನು ನೆನಪಿಸಿಕೊಂಡು, ಮೋಸಕ್ಕಿಂತ ವೈಫಲ್ಯ ಉತ್ತಮ ಎಂದಿದ್ದಾರೆ. ವಿದ್ಯಾರ್ಥಿಗಳ ನಿರಾಶೆ ಅರ್ಥಮಾಡಿಕೊಂಡಿರುವ ಅವರು, ಕಠಿಣ ಪರಿಶ್ರಮ ಮತ್ತು ಅರ್ಹತೆಗೆ ಗೌರವ ನೀಡುವ ಸಮಾಜಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಲು ಕರೆ ನೀಡಿದ್ದಾರೆ. ಯುವಕರ ಭವಿಷ್ಯ ರಕ್ಷಿಸಲು ಪ್ರಾಮಾಣಿಕ ವ್ಯವಸ್ಥೆ ಅಗತ್ಯ ಎಂದು ಒತ್ತಿ ಹೇಳಿದ್ದಾರೆ.

‘ಅಡ್ಡದಾರಿ ಹುಡುಕುವ ಮನೋಭಾವ ಬೇಡ’; ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಸಚಿನ್ ತೆಂಡಲ್ಕೂರ್ ಹೇಳಿಕೆ
Sachin Tendulkar
ಪೃಥ್ವಿಶಂಕರ
|

Updated on:Jul 23, 2026 | 10:25 PM

Share

ನೀಟ್ ಪರೀಕ್ಷೆಯ (NEET exam) ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಪ್ರಸ್ತುತ ದೇಶಾದ್ಯಂತ ಕೋಲಾಹಲ ಸೃಷ್ಟಿಯಾಗಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಳೆದ ಹಲವು ದಿನಗಳಿಂದ ರಾಜಧಾನಿ ನವದೆಹಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಈ ಪ್ರತಿಭಟನೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಹಿಂಸಾಚಾರವಾಗಿ ಮಾರ್ಪಟ್ಟಿದೆ, ಇದು ಈಗ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ದೇಶದಾದ್ಯಂತ ಪರ ವಿರೋಧದ ಹೇಳಿಕೆಗಳು ಹೊರಬರುತ್ತಿವೆ. ಈ ನಡುವೆ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಈಗ ಈ ವಿಷಯದ ಬಗ್ಗೆ ಮೌನ ಮುರಿದಿದ್ದು, ತಮ್ಮ ತಂದೆಯಿಂದ ಕಲಿತ ಪಾಠಗಳನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದ್ದಾರೆ.

ಮೋಸ ಮಾಡುವುದು ತಪ್ಪು

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿನ್ ತೆಂಡಲ್ಕೂರ್, ‘ನನ್ನ ತಂದೆ ಪ್ರಾಧ್ಯಾಪಕರು, ಅನೇಕರಿಗೆ ಮಾರ್ಗದರ್ಶಕರಾಗಿದ್ರು. ಬಾಲ್ಯದಲ್ಲೇ ನನ್ನ ತಂದೆ ಅಮೂಲ್ಯ ಜೀವನ ಪಾಠ ಕಲಿಸಿದ್ದಾರೆ. ವಿಫಲತೆ ತಪ್ಪಲ್ಲ ಆದರೆ, ಮೋಸ ಮಾಡುವುದು ತಪ್ಪು. ಎಂದೂ ಅಡ್ಡದಾರಿ ಹಿಡಿಯಬೇಡ ಎಂದು ನನ್ನ ತಂದೆ ಹೇಳಿದ್ರು. ಸಮಾಜದ ಸಂಸ್ಕೃತಿ ರೂಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಫಲಕ್ಕಿಂತ ಶ್ರಮಕ್ಕೆ ಗೌರವ ನೀಡುವ ಸಮಾಜ ನಮಗೆ ಬೇಕು. ಅರ್ಹತೆಗಿಂತ ಅಡ್ಡದಾರಿ ಹುಡುಕುವ ಮನೋಭಾವ ಬೇಡ.

ಬಂಧುಗಳ ಬೆಂಬಲ ಕೂಡ ಅಗತ್ಯ

ವಿದ್ಯಾರ್ಥಿಗಳ ನಿರಾಶೆ ಸಹಜ. ಶ್ರಮಕ್ಕೆ ಫಲ ಸಿಗದಿದ್ದಾಗ ಆಗುವ ನೋವು ಅರ್ಥವಾಗುತ್ತೆ. ಈ ನಿರಾಶೆ ಮತ್ತೆ ಬರದಂತೆ ನೋಡಿಕೊಳ್ಳಬೇಕು.​​ ಇದಕ್ಕಾಗಿ ಎಲ್ಲರೂ ಕೂಡಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಯುವ ಭಾರತ ಕನಸು ಮತ್ತು ಉತ್ಸಾಹದಿಂದ ತುಂಬಿದೆ ಯುವಕರೇ ದೇಶದ ಯಶಸ್ಸಿನ ನಿಜವಾದ ಶಕ್ತಿ. ​​ಯುವಕರಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಜವಾಬ್ದಾರಿ. ಪೋಷಕರದ್ದು ಹಾಗೂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಸ್ನೇಹಿತರು, ಬಂಧುಗಳ ಬೆಂಬಲ ಕೂಡ ಅಗತ್ಯ.

ನೀಟ್​ ಅಕ್ರಮ; ಮಹತ್ವದ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ

ಯುವಕರು ಸದಾ ಉತ್ಸಾಹದಿಂದಿರಲು ಪ್ರೋತ್ಸಾಹಿಸಬೇಕು. ಕಠಿಣ ಪರಿಶ್ರಮಕ್ಕೆ ಯೋಗ್ಯ ಗೌರವ ಸಿಗಬೇಕು. ​ಪ್ರಾಮಾಣಿಕತೆ ಪ್ರೋತ್ಸಾಹಿಸುವ ಸಮಾಜ ನಿರ್ಮಿಸಬೇಕು. ಅಂತಿಮವಾಗಿ ಅರ್ಹತೆಯೇ ಗೆಲ್ಲುವಂತಹ ವ್ಯವಸ್ಥೆ ಬೇಕು. ಮಕ್ಕಳ ಭವಿಷ್ಯವನ್ನು ಇನ್ನಷ್ಟು ಬಲಪಡಿಸಬೇಕು, ಮಕ್ಕಳ ಕನಸುಗಳು ಮತ್ತು ಆಶಯಗಳನ್ನು ರಕ್ಷಿಸಬೇಕಿದೆ. ಎಲ್ಲರೂ ಸೇರಿ ಶಾಶ್ವತವಾದ ಪರಿಹಾರ ಕಂಡುಕೊಳ್ಳೋಣ ಜೈ ಹಿಂದ್ ಎಂದು ಪೋಸ್ಟ್​ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 pm, Thu, 23 July 26

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು