ಪೊಲೀಸ್ ಇಲಾಖೆಯ ಕಾರ್ಯಕಾರ್ಯೇತರ ಹುದ್ದೆಗಳಲ್ಲಿ ಮಾರ್ಪಾಡು: ಗೃಹ ಸಚಿವ ಡಾ ಜಿ ಪರಮೇಶ್ವರ್ ಆದೇಶ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 05, 2023 | 6:16 PM

ಪೊಲೀಸ್ ಇಲಾಖೆಯಲ್ಲಿ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಲ್ಲಿ ಬಡ್ತಿ ಪಡೆದ ಅಧಿಕಾರಿಗಳು ಕನಿಷ್ಠ 1 ವರ್ಷ ಮಾತ್ರ ಕೆಲಸ ಮಾಡಬೇಕು. ಮತ್ತು ನಾನ್ ಎಕ್ಸಿಕ್ಯೂಟಿವ್​ ಹುದ್ದೆ ನಿರ್ವಹಿಸಬೇಕೆಂದು ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್​ರಿಂದ ಆದೇಶ ಮಾರ್ಪಾಡು ಮಾಡಲಾಗಿದೆ.  

ಪೊಲೀಸ್ ಇಲಾಖೆಯ ಕಾರ್ಯಕಾರ್ಯೇತರ ಹುದ್ದೆಗಳಲ್ಲಿ ಮಾರ್ಪಾಡು: ಗೃಹ ಸಚಿವ ಡಾ ಜಿ ಪರಮೇಶ್ವರ್ ಆದೇಶ
ಗೃಹ ಸಚಿವ ಜಿ ಪರಮೇಶ್ವರ್
Follow us on

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ನಾನ್ ಎಕ್ಸಿಕ್ಯೂಟಿವ್​ (Non -Excutive) ಹುದ್ದೆ ಆದೇಶ ಮಾರ್ಪಾಡು ಮಾಡಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್​ ಬುಧವಾರ ಆದೇಶ ಹೊರಡಿಸಿದ್ದಾರೆ. ಬಡ್ತಿ ಪಡೆದ ಇನ್ಸ್​ಪೆಕ್ಟರ್, ಡಿವೈಎಸ್​ಪಿ ಕನಿಷ್ಠ 2 ವರ್ಷ ಮತ್ತು ಬಡ್ತಿ ಪಡೆದ ಅಧಿಕಾರಿಗಳು ನಾನ್ ಎಕ್ಸಿಕ್ಯೂಟಿವ್​ ಹುದ್ದೆ ನಿರ್ವಹಿಸಬೇಕು ಎಂದು ಮೇ 15ರಂದು ಗೃಹ ಇಲಾಖೆಯಿಂದ ಆದೇಶ ಹೊರಡಿಸಿತ್ತು. ಆದರೆ  ಈಗ ಹೊಸ ಆದೇಶದ ಪ್ರಕಾರ ಬಡ್ತಿ ಪಡೆದ ಪೊಲೀಸ್​ ಅಧಿಕಾರಿಗಳು ಕನಿಷ್ಟ 1 ವರ್ಷ ಮಾತ್ರ ನಾನ್​ ಎಕ್ಸಿಕ್ಯೂಟಿವ್​ ಹುದ್ದೆ ನಿರ್ವಹಿಸಬೇಕು ಎಂದು ಮಾರ್ಪಡಿಸಿ ಆದೇಶ ಹೊರಡಿಸಲಾಗಿದೆ.

ಆದೇಶದಲ್ಲೇನಿದೆ?

ಪೊಲೀಸ್ ಇಲಾಖೆಯಲ್ಲಿ ಪದೋನ್ನತಿ ಹೊಂದಿದ ಪೊಲೀಸ್ ಇನ್ಸ್‌ ಪೆಕ್ಟರ್ ಮತ್ತು ಪೊಲೀಸ್ ಉಪಾಧೀಕ್ಷಕರಿಗೆ (ಸಿವಿಲ್) ಕಡ್ಡಾಯವಾಗಿ ಕನಿಷ್ಟ 2 ವರ್ಷದ ಸೇವೆಯನ್ನು ಕಾರ್ಯಕಾರ್ಯತರ (Non-Executive) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಈ ಹಿಂದೆ ಆದೇಶಿಸಲಾಗಿತ್ತು.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ನೀರಿನ ಕೊರತೆ; ಸಮಸ್ಯೆ ಪರಿಹಾರಕ್ಕೆ 100 ಕೊಳವೆಬಾವಿ ಕೊರೆಯಲು ಪ್ಲ್ಯಾನ್

ದಿನಾಂಕ: ಮೇ 15, 2020ರಂದು ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿ ಪದೋನ್ನತಿ ಹೊಂದಿದ ಅಧಿಕಾರಿಗಳಿಗೆ ಕಡ್ಡಾಯವಾಗಿ ಕನಿಷ್ಟ ಒಂದು ವರ್ಷದ ಅವಧಿಗೆ ಮಾತ್ರ ಸೇನೆಯನ್ನು ನಿಗದಿ ಮಾಡಿದೆ.  ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ನಿಗದಿಪಡಿಸುವಂತೆ ಕೋರಿ ಮಾನ್ಯ ಬೃಹತ್‌ ಮತ್ತು ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕೂಡಲೇ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:03 pm, Wed, 5 July 23