ಬೆಂಗಳೂರು, ಮೇ.08: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ(G Parameshwara), ‘ಈ ಪ್ರಕರಣವನ್ನು ಎಸ್ಐಟಿ(SIT) ಗಂಭೀರವಾಗಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು ಕರೆತರಲು ಈಗಾಗಲೇ ಎಸ್ಐಟಿ ತಂಡ ಸಿಬಿಐ ನೆರವು ಕೋರಿದ್ದು, ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ. ಪ್ರಜ್ವಲ್ ವಾಪಸ್ ಬರೋವರೆಗೂ ತ್ವರಿತಗತಿ ವಿಚಾರಣೆ ಕಷ್ಟ ಎಂದಿದ್ದಾರೆ.
ಇನ್ನು ಮಹಿಳೆ ಅಪಹರಣ ಪ್ರಕರಣ ಸಂಬಂಧ ರೇವಣ್ಣನನ್ನು ಬಂಧಿಸಲಾಗಿದೆ. ಜೊತೆಗೆ ದೂರು ನೀಡಿದವರಿಂದ ಮಾಹಿತಿ ಕೂಡ ಸಂಗ್ರಹ ಮಾಡಲಾಗುತ್ತಿದ್ದು, ಈ ಪ್ರಕರಣದ ಕುರಿತು ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ರೇವಣ್ಣ, ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡುವಂತೆ HD ಕುಮಾರಸ್ವಾಮಿ ಆಗ್ರಹ ವಿಚಾರ, ‘ ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಬರುವುದಿಲ್ಲ. ಎಸ್ಐಟಿ ತನಿಖೆ ಬಗ್ಗೆ ವಿಶ್ವಾಸ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಕುಮಾರಸ್ವಾಮಿಗೆ ಎಸ್ಐಟಿ ಬಗ್ಗೆ ಗೊತ್ತಿದೆ. ಎಸ್ಐಟಿ ತಂಡ ಸಮರ್ಥವಾಗಿಯೇ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ನಾನಾಗಲಿ, ಸಿಎಂ, ಡಿಸಿಎಂ ಯಾರೂ ಹಸ್ತಕ್ಷೇಪ ಮಾಡಲ್ಲ. ಜೊತೆಗೆ ಹೆಚ್ಡಿಕೆ ಅವಧಿಯಲ್ಲೂ ಯಾವುದೇ ಪ್ರಕರಣ ಸಿಬಿಐಗೆ ನೀಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಹಿಂದೆ ರಾಜ್ಯ ಬಿಜೆಪಿ ನಾಯಕರಿದ್ದಾರೆ: ರವಿಕುಮಾರ್ ಗಣಿಗ, ಶಾಸಕ
ಡಿಕೆ ಶಿವಕುಮಾರ್ ವಿರುದ್ಧ ದೂರು ವಿಚಾರ, ‘ಅವರಿಗೆ ನೋಟೀಸ್ ಕೊಡೋ ಬಗ್ಗೆ ಎಸ್ಐಟಿ ತೀರ್ಮಾನ ಮಾಡುತ್ತದೆ. ಅವರ ಮೇಲೆ ನಮಗೆ ವಿಶ್ವಾಸ ಇದೆ. ವರದಿ ಕೊಡಲಿ ನೊಡೋಣ ಎಂದರು. ಬಳಿಕ ಸಿಎಂ ಎಸ್ಐಟಿ ಸಭೆ, ‘ನಾನು ಡಿಸ್ ಕ್ಲೋಸ್ ಮಾಡಲ್ಲ. ಆದ್ರೆ, ಸಿಎಂ ಹಾಗೂ ಗೃಹ ಸಚಿವರಿಗೆ ಮಾಹಿತಿ ಇರಬೇಕಲ್ವಾ.?, ಹಾಗಾಗಿ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೀತೀವಿ. ಇದೇ ವೇಳೆ ಡಿಸಿಎಂ ಡಿಕೆಶಿ ದೇವರಾಜೇಗೌಡ ಜೊತೆ ಮಾತಾಡಿರೋ ಆಡಿಯೋ ರಿಲೀಸ್ ಕುರಿತು, ‘SIT ಅದನ್ನೂ ಗಮನಿಸುತ್ತೆ. ಡಿಕೆಶಿ ಡಿಸಿಎಂ ಇದ್ದಾರೆ. ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಅವರಿಗೆ ಶಿಕ್ಷೆ ಆಗಬಾರದು ಎಂದು ಏನಿಲ್ಲ.
ಪರಮೇಶ್ವರಗೆ ಬೆನ್ನು ಮೂಳೆ ಇದೆಯಾ ಎಂದ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಪರಮೇಶ್ವರ ಅವರು, ‘ನಮ್ಮನ್ನ ಆರಿಸಿ ಜನ ಕಳಿಸಿದ್ದಾರೆ. ಅವರು ಅಧಿಕಾರ ಹಿಡಿದಿಲ್ಲ. ಅವರು ಖುಷಿ ಪಡಬೇಕು ನಾವಾಗಿದ್ದೇವೆ ಅಂತ. ಅದು ಬಿಟ್ಟು ಬೆನ್ನು ಮೂಳೆ ಅಂತೆಲ್ಲಾ ಮಾತಾಡಬಾರದು. ಬಳಿಕ ಇಂಟಲಿಜೆನ್ಸ್ ಫೇಲ್ಯೂರ್ ವಿಚಾರ, ಇಮಿಗ್ರೇಷನ್ ಯಾರ ಬಳಿ ಇದೆ. ಬ್ಲೇಮ್ ಗೇಮ್ ಮಾಡೋದಾದ್ರೆ ಮಾವೂ ಅವರ ಮೇಲೆ ಹೇಳಬಹುದು. ಕೇಂದ್ರ ನಮಗೆ ಸಹಕಾರ ನೀಡಲಿ, ಯಾರೂ ಕೂಡ ಪ್ರಭಾವ ಬೀರಲು ಸಾಧ್ಯವಿಲ್ಲ. ನಾವ್ಯಾರೂ ಹೀಗೆ ಮಾಡಿ ಎಂದು ಇನ್ಸ್‌ಸ್ಟ್ರಕ್ಷನ್ ಕೊಟ್ಟಿಲ್ಲ. ಈ ಕುರಿತು SIT ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ