ಬೆಂಗಳೂರು: ದಂಡುಪಾಳ್ಯ ಸಿನಿಮಾ (Dandupalya Cinema) ಎಂದಾಗ ತಕ್ಷಣ ಕಣ್ಣು ಮುಂದೆ ಬರುವುದು ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ. ಈ ಸಿನಿಮಾ ನೋಡಿದ ಬೆಂಗಳೂರಿನ ಕೆಲ ಮನೆ ಮಾಲೀಕರಿಗೆ ದಂಡುಪಾಳ್ಯದವರಿಗೆ ಮನೆ ಬಾಡಿಗೆಗೆ ಕೊಡಬೇಕೊ ಬೇಡವೋ ಅನ್ನೊ ಗೊಂದಲ ಶುರುವಾಗಿದೆ. ಮನೆ ಮಾಲೀಕ ಕೃಷ್ಣಮೂರ್ತಿ ಎಂಬುವವರು, ಇತ್ತೀಚೆಗೆ ಓರ್ವ ಬಾಡಿಗೆದಾರ ನನ್ನ ಮನೆಗೆ ಬಾಡಿಗೆಗೆ ಬಂದಿದ್ದಾರೆ. ನಾನು ಅವರ ಆಧಾರ್ ಕಾರ್ಡ್ (Adhar Card) ಅನ್ನು ಪರಿಶೀಲಿಸಿದ್ದೇನೆ. ಅದರಲ್ಲಿ ಅವರ ಹಳ್ಳಿಯ ಹೆಸರನ್ನು ದಂಡುಪಾಳ್ಯ ಎಂದು ನಮೂದಿಸಲಾಗಿದೆ ದಂಡುಪಾಳ್ಯದವರಿಗೆ ಮನೆ ಬಾಡಿಗೆ ಕೊಡಬಹುದಾ ಅಂತ ಟ್ವೀಟ್ ಮೂಲಕ ಪೊಲೀಸರ ಸಲಹೆ ಕೇಳಿದ್ದಾರೆ.
ಆಧಾರ್ ಕಾರ್ಡ್ ಪರಿಶೀಲಿಸಿದಾಗ ಅದರಲ್ಲಿ ಅವರ ಹಳ್ಳಿಯ ಹೆಸರನ್ನು ದಂಡುಪಾಳ್ಯ ಎಂದು ನಮೂದಿಸಲಾಗಿದೆ. ಈ ಹಳ್ಳಿಯ ಜನರು ಕ್ರೂರವಾಗಿ ಕೊಲೆ ಮಾಡುತ್ತಾರೆ. ಈ ಕುರಿತು ನಾನು ಚಲನಚಿತ್ರಗಳನ್ನು ನೋಡಿದ್ದೇನೆ. ಈಗ ಅವರಿಗೆ ಮನೆ ಬಾಡಿಗೆ ಕೊಟ್ಟರೆ ಸರಿಯೇ? ದಯವಿಟ್ಟು ನನಗೆ ನೀವು ಸಹಾಯ ಮಾಡಬಹುದೇ? ಅಂತ ಮನೆ ಮಾಲೀಕ ಪೊಲೀಸರ ಬಳಿ ಕೇಳಿದ್ದಾರೆ.
ಟ್ವೀಟ್ ಮೂಲಕ ನಗರ ಪೊಲೀಸರಿಗೆ ವ್ಯಕ್ತಿ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ. ನಿಮಗೆ ಅವರು ಸಲಹೆ ಮಾಡುತ್ತಾರೆಂದು ಬೆಂಗಳೂರು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ
ವಿದೇಶದಲ್ಲಿ ಕೆಲಸ ಬಿಟ್ಟು ಹಳ್ಳಿ ಕಡೆ ಮುಖ ಮಾಡಿದ ಸಹೋದರರು; ಸಾವಯವ ಕೃಷಿ ಮೂಲಕ ಯಶಸ್ವಿ ಬದುಕು!
Published On - 9:06 am, Tue, 8 February 22