ಬೆಂಗಳೂರಿನಲ್ಲಿ ಹನಿಟ್ರ್ಯಾಪ್: ಹಣ ವಸೂಲಿಗೆ ‘ಕತ್ನಾ, ಮತಾಂತರ’ ಅಸ್ತ್ರ ಪ್ರಯೋಗ, ಮೂವರು ಅರೆಸ್ಟ್

| Updated By: Rakesh Nayak Manchi

Updated on: Aug 01, 2023 | 5:04 PM

ಬಾಂಬೆ ಮಾಡೆಲ್ ಮೂಲಕ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ನಡೆಸಲಾಗುತ್ತಿತ್ತು. ಸಂತ್ರಸ್ತರು ಹಣ ನೀಡದಿದ್ದರೆ ಕತ್ನಾ ಮಾಡಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು, ಇಲ್ಲದಿದ್ದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸುತ್ತಿದ್ದರು. ಇದರಿಂದ ಭಯಗೊಂಡು ಸಂತ್ರಸ್ತರು ಆರೋಪಿಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದರು.

ಬೆಂಗಳೂರಿನಲ್ಲಿ ಹನಿಟ್ರ್ಯಾಪ್: ಹಣ ವಸೂಲಿಗೆ ಕತ್ನಾ, ಮತಾಂತರ ಅಸ್ತ್ರ ಪ್ರಯೋಗ, ಮೂವರು ಅರೆಸ್ಟ್
Follow us on

ಬೆಂಗಳೂರು, ಆಗಸ್ಟ್ 1: ಹನಿಟ್ರ್ಯಾಪ್ (Honey Trap) ನಂತರ ಕತ್ನಾ ಅಸ್ತ್ರ ಪ್ರಯೋಗಿಸಿ ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್​ನ ಮೂವರು ಸದಸ್ಯರನ್ನು ನಗರದ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮೋಹದ ಬಲೆಗೆ ಬೀಳಿಸುತ್ತಿದ್ದ ಬಾಂಬೆ ಮಾಡೆಲ್ ಸೇರಿ ಇಬ್ಬರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಬಂಧಿತ ಆರೋಪಿಗಳಾಗಿದ್ದು, ನದೀಮ್ ಮತ್ತು ಮಾಡೆಲ್ ನೇಹಾ ತಲೆಮರೆಸಿಕೊಂಡಿರುವ ಆರೋಪಿಗಳಾಗಿದ್ದಾರೆ. ಹನಿಟ್ರ್ಯಾಪ್ ಗ್ಯಾಂಗ್ 20 ವರ್ಷದ ಯುವಕರಿಂದ 50 ವರ್ಷದ ಪುರುಷರನ್ನು ಟಾರ್ಗೆಟ್ ಮಾಡುತ್ತಿದ್ದರು.

ಟೆಲಿಗ್ರಾಮ್ ಮೂಲಕ ಯುವಕರನ್ನು ಸಂಪರ್ಕ ಮಾಡುತ್ತಿದ್ದ ನೇಹಾ, ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಆಹ್ವಾನಿಸುತ್ತಿದ್ದಳು. ಅದರಂತೆ ಜೆಪಿ ನಗರ ಐದನೇ ಹಂತದಲ್ಲಿರುವ ಮನೆಗೆ ಬಂದ ಯುವಕರನ್ನು ಬಿಕಿನಿ ತೊಟ್ಟು ಹಗ್ ಮಾಡಿ ಸ್ವಾಗತ ಕೋರುತ್ತಿದ್ದಳು. ನಂತರ ನಡೆಯುವ ರಂಗಿನಾಟದ ದೃಶ್ಯವನ್ನು ಮನೆಯೊಳಗೆ ಇರುವ ಸಿ.ಸಿ.ಟಿವಿ ಕ್ಯಾಮರಾದಲ್ಲಿ ಸೆರೆಯಾಗುತ್ತಿತ್ತು.

ಇದನ್ನೂ ಓದಿ: ಮಂಗಳೂರು: ವಿಟ್ಲದಲ್ಲಿ ದಲಿತ ಬಾಲಕಿ ಮೇಲೆ ಐವರಿಂದ ಅತ್ಯಾಚಾರ!

ಅತಿಥಿ ಎಂಟ್ರಿಯಾಗಿ ಮೂರೇ ನಿಮಿಷಕ್ಕೆ ಅದೇ ಮನೆಗೆ ಗ್ಯಾಂಗ್ ಎಂಟ್ರಿ ಕೊಡುತ್ತಿತ್ತು. ಬಾಗಿಲು ತೆರೆದು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ನಂತರ ಸಂತ್ರಸ್ತರ ಮೊಬೈಲ್ ಕಸಿದು ಅದರಲ್ಲಿರುವ ಇತರರ ನಂಬರ್ ನೋಟ್ ಹಣಕ್ಕೆ ಡಿಮ್ಯಾಂಡ್ ಇಡುತ್ತಿದ್ದರು.

ಹಣ ಕೊಡದಿದ್ದರೆ ವಿಡಿಯೋ ಸ್ನೇಹಿತರು, ಸಂಬಂಧಿಕರು, ಕುಟುಂಬಸ್ಥರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಅಲ್ಲದೇ ಯುವತಿ ಮುಸ್ಲಿಂ ಆಗಿದ್ದು, ಆಕೆಯನ್ನ ಮದುವೆ ಆಗಬೇಕು. ಮದುವೆ ಆಗಬೇಕೆಂದರೆ ಮತಾಂತರ ಆಗಬೇಕು ಮತ್ತು ಕತ್ನಾ ಮಾಡಿಸಬೇಕು ಎಂದು ಧಮ್ಕಿ ಹಾಕುತ್ತಿದ್ದರು.

ಈ ರೀತಿಯಾಗಿ ಹನಿಟ್ರ್ಯಾಪ್ ಜಾಲಕ್ಕೆ ಬಿದ್ದ ಸಂತ್ರಸ್ತರೊಬ್ಬರು ಆರೋಪಿಗಳ ಹಣ ವರ್ಗಾವಣೆ ಮಾಡಿದ ನಂತರ ಅಲ್ಲಿಂದ ಹೊರಬಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ 12ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡಿರುವುದು ಬೆಳಕಿಗೆ ಬಂದಿದ್ದು, ಒಟ್ಟು 30 ಕ್ಕೂ ಹೆಚ್ಚು ಲಕ್ಷ ವರ್ಗಾಯಿಸಿಕೊಂಡಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ