ಮಂಗಳೂರು: ವಿಟ್ಲದಲ್ಲಿ ದಲಿತ ಬಾಲಕಿ ಮೇಲೆ ಐವರಿಂದ ಅತ್ಯಾಚಾರ!
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ದಲಿತ ಬಾಲಕಿಯೊಬ್ಬಳ ಮೇಲೆ ಮೂವರು ಪ್ರತ್ಯೇಕವಾಗಿ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು, ಆಗಸ್ಟ್ 1: ದಲಿತ ಬಾಲಕಿಯೊಬ್ಬಳ ಮೇಲೆ ಪ್ರತ್ಯೇಕವಾಗಿ ಮೂವರು ಅತ್ಯಾಚಾರ ಎಸಗಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ. ಪೋಕ್ಸೋ (POCSO) ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ ಪೊಲೀಸರು ಅಕ್ಷಯ್ ದೇವಾಡಿಗ (24), ಕಮಲಾಕ್ಷ ಬೆಳ್ಚಾಡ (30), ಸುಕುಮಾರ ಬೆಳ್ಚಾಡ (28), ರಾಜ ಮತ್ತು ಜಯಪ್ರಕಾಶ್ ಎಂಬವರನ್ನು ಬಂಧಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಜಯಪ್ರಕಾಶ್ ಎಂಬಾತ 2019ರಲ್ಲಿ ತನ್ನ ಮನೆಯಲ್ಲೇ ದಲಿತ ಬಾಲಕಿಯನ್ನ ಕರೆದೊಯ್ದು ಅತ್ಯಾಚಾರಗೈದಿದ್ದಾನೆ. 2023ರ ಜನವರಿಯಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅಕ್ಷಯ್ ಎಂಬಾತ ಇದೇ ಬಾಲಕಿಯನ್ನು ಶಾಲೆಯೊಂದರ ಬಳಿಗೆ ಬಲವಂತವಾಗಿ ಕರೆದೊಯ್ದು ಬೇರೆ ಬೇರೆ ದಿನಗಳಲ್ಲಿ ಮೂರು ಬಾರಿ ಅತ್ಯಾಚಾರವೆಸಗಿದ್ದಾನೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ ಯುವಕನ ಪ್ರೀತಿ ಬಲೆಗೆ ಬಿದ್ದ ಯುವತಿ: ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ, ಮೂವರು ಅರೆಸ್ಟ್
2023ರ ಮೇ ತಿಂಗಳಿನಲ್ಲಿ ವಿಟ್ಲ ನಿವಾಸಿ ರಾಜ ಎಂಬಾತ ಬಾಲಕಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ತಾನು ನಿನ್ನನ್ನು ಮದುವೆಯಾಗುವುದಾಗಿ ನಂಬಿಸಿ ಶಾಲೆಯೊಂದರ ಬಳಿಯಿರುವ ಗುಡ್ಡಕ್ಕೆ ಕರೆದೊಯ್ದು ಬಲವಂತವಾಗಿ ಬಾಲಕಿಯ ಇಚ್ಚೆಯ ವಿರುದ್ಧವಾಗಿ ಅತ್ಯಾಚಾರವೆಸಗಿದ್ದಾನೆ.
2023 ಜೂನ್ ತಿಂಗಳ ಮೊದಲ ವಾರದಲ್ಲಿ ವಿಟ್ಲ ನಿವಾಸಿ ಸುಕುಮಾರ, ಆರೋಪಿ ಅಕ್ಷಯ್ ಮುಖಾಂತರ ದಲಿತ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆ ಬಳಿ ಹೋಗಿ ಮದುವೆಯಾಗುವುದಾಗಿ ನಂಬಿಸಿದ್ದಾನೆ. ನಂತರ ಆಕೆಯನ್ನು ಶಾಲೆಯೊಂದರ ಬಳಿಯರುವ ಗುಡ್ಡಕ್ಕೆ ಕರೆದುಕೊಂಡು ಹೋಗಿ ಬಾಲಕಿಯ ಇಚ್ಛೆಯ ವಿರುದ್ಧವಾಗಿ ಅತ್ಯಾಚಾರವೆಸಗಿದ್ದಾನೆ.
2023 ಜುಲೈ 28 ರ ರಾತ್ರಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕಮಾಲಾಕ್ಷ ಎಂಬಾತ ಮದುವೆಯಾಗುವುದಾಗಿ ನಂಬಿಸಿ, ಬಾಲಕಿಯನ್ನು ತನ್ನ ಸಂಬಂಧಿಕರ ಮನೆಗೆ ಬರುವಂತೆ ಹೇಳಿದ್ದಾನೆ. ಬಳಿಕ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಬಾಲಕಿಯನ್ನ ಪುಸಲಾಯಿಸಿ ಅತ್ಯಾಚಾರವೆಸಗಿದ್ದಾನೆ.
ಅತ್ಯಾಚಾರ ವಿಚಾರ ಪೋಷಕರಿಗೆ ತಿಳಿದಿದ್ದು ಹೇಗೆ?
ನಾಲ್ಕು ವರ್ಷದಿಂದ 16 ವರ್ಷದ ಮಗಳ ಮೇಲೆ ಅತ್ಯಾಚಾರವಾಗುತ್ತಿದ್ದರೂ ಪೋಷಕರಿಗೆ ಗೊತ್ತಾಗಿರಲಿಲ್ಲ. ಜುಲೈ 27 ರಂದು ರಾತ್ರಿ ಕಾಣೆಯಾಗಿದ್ದ ಬಾಲಕಿ ನಂತರದ ದಿನ ಸಮೀಪದ ಪಾಳು ಮನೆಯಲ್ಲಿ ಪತ್ತೆಯಾಗಿದ್ದಾಳೆ. ಪೋಷಕರು ವಿಚಾರಿಸಿದಾಗ ಕಮಲಾಕ್ಷ ಎಂಬಾತ ಇಲ್ಲಿ ಕರೆತಂದು ಅತ್ಯಾಚಾರ ಎಸಗಿರುವ ಬಗ್ಗೆ ಹೇಳಿದ್ದಾಳೆ. ಅಷ್ಟೇ ಅಲ್ಲದೆ, ತನ್ನ ಮೇಲೆ 2019 ರಿಂದ ನಡೆದ ಎಲ್ಲಾ ಕೃತ್ಯಗಳನ್ನೂ ಬಾಯಬಿಟ್ಟಿದ್ದಾಳೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Tue, 1 August 23