ಬೆಂಗಳೂರಿನಲ್ಲಿ ಪಾರ್ಕ್ಗಳಿಗೆ ಸಾಕು ನಾಯಿ ಕೊಂಡೊಯ್ಯುವವರು ಇದನ್ನು ಗಮನಿಸಿ; ತೋಟಗಾರಿಕೆ ಇಲಾಖೆಯಿಂದ ಕೆಲ ನಿಯಮಗಳು ಜಾರಿ
ಮಾಲೀಕರು ಪಾರ್ಕ್ಗಳಿಗೆ ನಾಯಿಗಳನ್ನ ಕರೆತರುವಾಗ 6 ಅಡಿ ಉದ್ದದ ಸರಪಳಿ ಹಾಕಿರಬೇಕು. ನಾಯಿಗಳನ್ನ ಕೈಯಲ್ಲಿ ಹಿಡಿದುಕೊಂಡು ನಿಯಂತ್ರಿಸಬೇಕು. ತಮ್ಮ ನಾಯಿಗೆ ರೇಬಿಸ್ ಚುಚ್ಚು ಮದ್ದು ಹಾಕಿರುವ ಬಗ್ಗೆ ದಾಖಲೆ ತೋರಿಸಬೇಕು.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರು ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ವಾಯು ವಿಹಾರಕ್ಕೆ ಹೋಗುವುದು ಸಹಜ. ವಾಕಿಂಗ್ ಹೋಗುವ ಜನರು ತಮ್ಮ ತಮ್ಮ ಮನೆಗಳಲ್ಲಿ ಸಾಕಿದ ನಾಯಿಯನ್ನು ಜೊತೆಗೆ ಕೊಂಡೊಯ್ಯುತ್ತಾರೆ. ಆದರೆ ನಾಯಿಗಳು ಹಲವು ಕಾರಣಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತವೆ. ಹೀಗಾಗಿ ತೋಟಗಾರಿಕೆ ಇಲಾಖೆ ಕೆಲ ನಿಯಮಗಳನ್ನು ಜಾರಿಗೆ ತಂದಿದೆ. ನಾಯಿ ಕಾಟದ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದ ಹಿನ್ನೆಲೆ ತೋಟಗಾರಿಕೆ ಇಲಾಖೆ ಕೆಲ ನಿಯಮಗಳನ್ನ ಜಾರಿಗೆ ತಂದು ಆದೇಶ ನೀಡಿದೆ.
ಮಾಲೀಕರು ಪಾರ್ಕ್ಗಳಿಗೆ ನಾಯಿಗಳನ್ನ ಕರೆತರುವಾಗ 6 ಅಡಿ ಉದ್ದದ ಸರಪಳಿ ಹಾಕಿರಬೇಕು. ನಾಯಿಗಳನ್ನ ಕೈಯಲ್ಲಿ ಹಿಡಿದುಕೊಂಡು ನಿಯಂತ್ರಿಸಬೇಕು. ತಮ್ಮ ನಾಯಿಗೆ ರೇಬಿಸ್ ಚುಚ್ಚು ಮದ್ದು ಹಾಕಿರುವ ಬಗ್ಗೆ ದಾಖಲೆ ತೋರಿಸಬೇಕು. ಪಾರ್ಕ್ಗಳಲ್ಲಿ ನಾಯಿಗಳು ಮಲವಿಸರ್ಜನೆ ಮಾಡದಂತೆ ಕ್ರಮ ವಹಿಸಬೇಕು. ಒಂದು ವೇಳೆ ಮಲವಿಸರ್ಜನೆ ಮಾಡಿದರೆ ಮಾಲೀಕರೇ ಸ್ವಚ್ಚಗೊಳಿಸಬೇಕು. ಸಾಕು ನಾಯಿಗಳಿಗೆ ಪಾರ್ಕ್ಗಳ್ಲಿ ಯಾವುದೇ ಕಾರಣಕ್ಕೂ ಆಹಾರ ನೀಡಬಾರದು ಅಂತ ತೋಟಗಾರಿಕೆ ಇಲಾಖೆ ನಿಯಮಗಳನ್ನ ಜಾರಿಗೆ ತಂದಿದೆ.
ಅಲ್ಲದೇ ಉಗ್ರ ಸ್ವರೂಪ ಹಾಗೂ ದೊಡ್ಡ ಗಾತ್ರದ ನಾಯಿಗಳನ್ನ ತರಬಾರದು. ತೋಟಾಗಾರಿಕೆ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ನಾಯಿಗಳಿಂದ ತೊಂದರೆಯಾದರೆ ಅದಕ್ಕೆ ಮಾಲೀಕರೆ ಜವಾಬ್ದಾರಿ. ಪಾರ್ಕ್ನಲ್ಲಿ ಮಕ್ಕಳು, ಹಿರಿಯ ನಾಗರಿಕರು ವಾಯುವಿಹಾರ ನಡೆಸುವ ಉದ್ಯಾನವನಗಳಲ್ಲಿ ನಾಯಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ತೋಟಗಾರಿಗೆ ಇಲಾಖೆ ಗುರುತುಪಡಿಸಿರುವ ಕಡೆ ಮಾತ್ರ ನಾಯಿಗಳಿಗೆ ಊಟ ನೀಡಬೇಕು ಅಂತ ತೋಟಗಾರಿಕೆ ಇಲಾಖೆ ತಿಳಿಸಿದೆ.
ಇದನ್ನೂ ಓದಿ
Kohli vs BCCI: ಬಿಸಿಸಿಐ ಆಯ್ಕೆ ಸಮಿತಿಯವರು ವಿರಾಟ್ ಕೊಹ್ಲಿಯ ಅರ್ಧದಷ್ಟು ಪಂದ್ಯವನ್ನೂ ಆಡಿಲ್ಲ ಎಂದ ಕೀರ್ತಿ ಆಜಾದ್