Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರಜಾ ದಿನ ಪ್ರಯಾಣದ ಅವ್ಯವಸ್ಥೆ, 2 ಗಂಟೆ ಮೊದಲು ಬಂದರೂ ವಿಮಾನ ಮಿಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 20, 2022 | 11:19 AM

ರಜಾದಿನಗಳ ಆರಂಭಕ್ಕೂ ಮುನ್ನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪ್ರಮಾಣದ ಜನಸಂಖ್ಯೆಯಿಂದ ನಿಲ್ದಾಣದಲ್ಲಿ ಭಾರೀ ಅಸ್ತವ್ಯಸ್ತತೆ ಸೃಷ್ಟಿಯಾಗಿದೆ. ಈ ಬಗ್ಗೆ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಇದರಿಂದ ಅನೇಕ ಪ್ರಯಾಣಿಕರಿಗೆ ವಿಮಾನ ಮಿಸ್ ಆಗಿದೆ.

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರಜಾ ದಿನ ಪ್ರಯಾಣದ ಅವ್ಯವಸ್ಥೆ, 2 ಗಂಟೆ ಮೊದಲು ಬಂದರೂ ವಿಮಾನ ಮಿಸ್
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರಜಾ ದಿನ ಪ್ರಯಾಣದ ಅವ್ಯವಸ್ಥೆ
Follow us on

ಬೆಂಗಳೂರು: ರಜಾದಿನಗಳ ಆರಂಭಕ್ಕೂ ಮುನ್ನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಹೆಚ್ಚಿನ ಪ್ರಮಾಣದ ಜನಸಂಖ್ಯೆಯಿಂದ ನಿಲ್ದಾಣದಲ್ಲಿ ಭಾರೀ ಅಸ್ತವ್ಯಸ್ತತೆ ಸೃಷ್ಟಿಯಾಗಿದೆ. ಈ ಹಿಂದೆ ಇಂತಹದೇ ಪರಿಸ್ಥಿತಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕಂಡು ಬಂದಿತ್ತು. ನಂತರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದಿದ್ದರು.

ಇದೀಗ ಬೆಂಗಳೂರಿನಲ್ಲೂ ಇಂತಹದೇ ಘಟನೆ ನಡೆದಿದೆ. ಸೋಮವಾರ ವಿಮಾನ ನಿಲ್ದಾಣದ ಟರ್ಮಿನಲ್​ನ ಹೊರಗೆ ಚೆಕ್​-ಇನ್​​ ಕೌಂಟರ್​ಗಳಲ್ಲಿ ಮತ್ತು ನಿರ್ಗಮನದ ಪೂರ್ವ ಭದ್ರತಾ ತಪಾಸಣೆ ನಡೆಸುವ ವಿಭಾಗದಲ್ಲಿ ದೊಡ್ಡದಾಗಿ ಪ್ರಯಾಣಿಕರ ಸಾಲು ನಿಂತಿರುವುದು ಕಂಡು ಬಂದಿದೆ. ಇದರಿಂದ ಎರಡು ಗಂಟೆಗಿಂತ ಮುಂಚಿತ ಬಂದವರ ವಿಮಾನ ಕೂಡ ಮಿಸ್ ಆಗಿದೆ.

ಈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪ್ರಯಾಣಿಕರಿಗೆ ವಿಮಾನ ಮಿಸ್ ಆಗಿದೆ. ತಪಾಸಣೆ ವಿಭಾಗದಲ್ಲಿ ಈ ರೀತಿಯ ಅವ್ಯವಸ್ಥೆಯಿಂದ ಜನರು ಪರದಾಡುವಂತೆ ಮಾಡಿದೆ. ಈ ಬಗ್ಗೆ ಪ್ರಯಾಣಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಮುಂದಿನ ವರ್ಷ ಬೆಂಗಳೂರು ವಿಮಾನ ನಿಲ್ದಾಣ ಐಪಿಒ; 30,000 ಕೋಟಿ ರೂ. ಷೇರು ಮಾರಾಟ ನಿರೀಕ್ಷೆ

ಕಾಕ್ಸ್​ ಟೌನ್ ನಿವಾಸಿ ರೇಮಂಡ್ ರೊಜಾರಿಯೊ ಕಳೆದ ಸೋಮವಾರ ಮುಂಜಾನೆ 5.55ಕ್ಕೆ ಅಹಮದಾಬಾದ್​ಗೆ ತೆರಲು ಆಕಾಶ್ ಏರ್ ಫ್ಲೈಟ್​ನಲ್ಲಿ ತೆರೆಳಬೇಕಿತ್ತು. ಅದಕ್ಕಾಗಿ ಅವರು 3.45ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ವಾರದ ಪ್ರಾರಂಭ (ಸೋಮವಾರ) ವಾದರೂ ಅವರು ವಿಮಾನ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಹೋಗಲು 30 ನಿಮಿಷ ಬೇಕಾಯಿತು ಎಂದು ಹೇಳಿದ್ದಾರೆ. ನನ್ನ ಬ್ಯಾಗ್​ಗಳನ್ನು ಚೆಕ್-ಇನ್ ಮಾಡಲು ಮತ್ತು ಬೋರ್ಡಿಂಗ್ ಪಾಸ್ ಪಡೆಯಲು ಚೆಕ್​​-ಇನ್​​ ಕೌಂಟರ್​ನ್ನು ತಲುಪಲು 30 ನಿಮಿಷಗಳನ್ನು ತೆಗೆದುಕೊಂಡಿತು. ನಿರ್ಗಮನದ ಪೂರ್ವ ಪರಿಶಿಲನೆಗೆ 45 ನಿಮಿಷ ತೆಗೆದುಕೊಂಡಿದೆ ಎಂದು ಹೇಳಿದರೂ.

ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜುಗಳನ್ನು ಪರಿಶೀಲನೆ ಮಾಡುವ ಹೊತ್ತಿಗೆ ಪ್ರಯಾಣಿಕರಿಗೆ ಸುಸ್ತಾಗಿ ಹೋಗಿದೆ. ಈ ಬಗ್ಗೆ ಪ್ರಯಾಣಿಕರು ವಿಮಾನ ನಿಲ್ದಾಣದ ಸಿಬ್ಬಂದಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರು ಬೋರ್ಡಿಂಗ್ ಗೇಟ್​ಗೆ ಸರಿಯಾದ ಸಮಯಕ್ಕೆ ತಲುಪದ ಕಾರಣ ಅನೇಕ ಪ್ರಯಾಣಿಕರಿಗೆ ವಿಮಾನ ಮಿಸ್ ಆಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ