Bengaluru ಡಬಲ್ ಮರ್ಡರ್ ಪ್ರಕರಣ: ಇಬ್ಬರು ಹಂತಕರು ಅರೆಸ್ಟ್; ಡಿ.17ರಂದು ಏನಾಯ್ತು ಎಂದು ಇಲ್ಲಿದೆ ನೋಡಿ
ಸೆಕ್ಯುರಿಟಿ ಗಾರ್ಡ್ ಹಾಗೂ ಮನೆಗೆಲಸದವನನ್ನ ಕೊಲೆ ಮಾಡಿದ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು: ನಗರದ ಕೋರಮಂಗಲದಲ್ಲಿ ನಡೆದ ಜೋಡಿ ಕೊಲೆ ಪ್ರಕರಣ (Double Murder Case)ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಗದೀಶ ಹಾಗೂ ಸುನೀಲ ಎಂಬ ಆರೋಪಿಗಳನ್ನು ಬ್ಯಾಡರಹಳ್ಳಿ ಬಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಜಗದೀಶ ಮನೆ ಮಾಲೀಕ ಗೋಪಾಲರೆಡ್ಡಿ ಅವರ ಮಾಜಿ ಕಾರು ಚಾಲಕನಾಗಿದ್ದನು. ಬೆಲೆಬಾಳುವ ಕಾರನ್ನ ಶೋಕಿಗಾಗಿ ಒಬ್ಬನೇ ತೆಗೆದುಕೊಂಡು ಹೋಗಿ ಅಪಘಾತ ಮಾಡಿದ್ದನು. ಈ ವಿಚಾರದಲ್ಲಿ ಗೋಪಾಲರೆಡ್ಡಿ ಜಗದೀಶನ ಕೆನ್ನೆಗೆ ಹೊಡೆದಿದ್ದರು. ಅಂದಿನಿಂದ ರೆಡ್ಡಿ ಮೇಲೆ ಜಗದೀಶನಿಗೆ ಸಿಟ್ಟು ಇತ್ತು ಎಂಬುದು ತಿಳಿದುಬಂದಿದೆ.
ಗೋಪಾಲರೆಡ್ಡಿ ಮನೆಯಲ್ಲಿ ಕಾರು ಚಾಲಕನಾಗಿದ್ದ ಜಗದೀಶ, ಕಳೆದ ಎರಡೂವರೆ ತಿಂಗಳ ಹಿಂದೆ ರೆಡ್ಡಿಯವರ ಬೆಲೆಬಾಳುವ ಕಾರನ್ನ ಶೋಕಿಗಾಗಿ ಒಬ್ಬನೇ ತೆಗೆದುಕೊಂಡು ಹೋಗಿದ್ದ. ಈ ವೇಳೆ ಕಾರು ಅಪಘಾತವಾಗಿ ಮಾಹಿತಿ ಗೋಪಾಲರೆಡ್ಡಿಗೆ ತಿಳಿದುಬಂದಿದೆ. ಸಿಟ್ಟಿಗೆದ್ದ ಗೋಪಾಲರೆಡ್ಡಿ ಜಗದೀಶನ ಮನೆಯವರನ್ನ ಠಾಣೆಗೆ ಕರೆಸಿ ಜಗದೀಶನಿಗೆ ಒಂದೇಟು ಹಾಕಿಸಿದ್ದರು.
ಇದನ್ನೂ ಓದಿ: ಹೈದರಾಬಾದ್: ಎಐಎಂಐಎಂ ಪಕ್ಷದ ಸ್ಥಳೀಯ ಕಾರ್ಪೊರೇಟರ್ ಕಚೇರಿಯೊಳಗೆ ಯುವಕನ ಹತ್ಯೆ
ಘಟನೆ ನಂತರ ಗೋಪಾಲ ರೆಡ್ಡಿಯವರು ಜಗದೀಶನನ್ನು ಕೆಲಸದಿಂದ ತೆಗೆದು ಬೇರೊಬ್ಬರನ್ನು ನೇಮಿಸಿದ್ದರು. ಆದರೆ ಜಗದೀಶ ಗೋಪಾಲರೆಡ್ಡಿಯ ಹೊಸ ಚಾಲಕನ ಜೊತೆ ಮಾತುಕತೆ ಮುಂದುವರಿಸಿದ್ದ. ಅಲ್ಲದೆ ಮನೆಗೆಲಸ ಮಾಡುತ್ತಿದ್ದ ಕರಿಯಪ್ಪನ ಜೊತೆ ಫೋನ್ ಸಂಪರ್ಕದಲ್ಲಿದ್ದನು. ಹೀಗೆ ಡಿ.17 ರಂದು ಜಗದೀಶ ಕರಿಯಪ್ಪನಿಗೆ ಕರೆ ಮಾಡಿದ್ದಾಗ ಗೋಪಾಲರೆಡ್ಡಿ ಆಂದ್ರಪ್ರದೇಶದ ಮದುವೆ ಸಮಾರಂಭಕ್ಕೆ ಹೋಗಿದ್ದಾರೆ ಎಂದಿದ್ದಾನೆ. ಈ ಮಾತು ಕೇಳುತ್ತಿದ್ದಂತೆ ಜಗದೀಶ ತನ್ನ ಲಗ್ಗೆರೆ ಸ್ನೇಹಿತ ಸುನೀಲನನ್ನ ಕಟ್ಟಿಕೊಂಡು ಗೋಪಾಲರೆಡ್ಡಿ ಮನೆ ಕಡೆ ಬಂದಿದ್ದಾನೆ.
ಸುನೀಲನ ತನ್ನ ಆಟೋದಲ್ಲಿ ಜಗದೀಶನನ್ನ ಗೋಪಾಲರೆಡ್ಡಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಜಗದೀಶನಿಗೆ ಗೋಪಾಲರೆಡ್ಡಿ ಮನೆಯಲ್ಲಿರುವ ಸಿಸಿಟಿವಿ ಎಲ್ಲೆಲ್ಲಿ ಇದೆ ಎಂದು ತಿಳಿದಿತ್ತು. ಅದಕ್ಕಾಗಿ ಕುರ್ಚಿಯನ್ನು ಬಳಸಿ ಮನೆಯ ಹಿಂಭಾಗದ ಕಂಪೌಂಡ್ ಜಿಗಿದು ಒಳಬಂದಿದ್ದಾನೆ. ಮನೆಯ ಸೆಲ್ಲಾರ್ಗೆ ಮೊದಲು ಎಂಟ್ರಿ ಕೊಟ್ಟು ಸೆಕ್ಯೂರಿಟಿ ರೂಂನಲ್ಲಿದ್ದ ಸಿಬ್ಬಂದಿ ದಿಲ್ ಬಹದ್ದೂರ್ನನ್ನು ಗಮನಿಸಿದ್ದ.
ಇದನ್ನೂ ಓದಿ: ಪತಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಮಹಿಳೆಯಿಂದ ಕಿಡ್ನಿ ದಾನ ಪಡೆದು ಮೋಸ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ
ಭದ್ರತಾ ಸಿಬ್ಬಂದಿ ದಿಲ್ ಬಹದ್ದೂರ್ ಅವರನ್ನ ಕೈಯಿಂದ ಉಸಿರುಗಟ್ಟಿಸಿದ ಜಗದೀಶ, ನಂತರ ಮೈಕೈಗೆ ಟೇಪನ್ನ ಸುತ್ತಿ ಸಂಪಿಗೆಸೆದಿದ್ದಾನೆ. ನಂತರ ಜಗದೀಶ ಸುನೀಲನನ್ನ ಸೆಲ್ಲಾರ್ಗೆ ಕರೆಸಿಕೊಂಡಿದ್ದ. ಮನೆಯ ಒಳಗಡೆ ಮನೆಗೆಲಸದ ಕರಿಯಪ್ಪ ಇರುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಅಲ್ಲದೆ ಮನೆಯ ಬಾಗಿಲಿನಲ್ಲೇ ಡಿ.15ರ ರಾತ್ರಿಯಿಡಿ ಠಿಕಾಣಿ ಹೂಡುತ್ತಾರೆ.
ಬೆಳಗ್ಗೆ ಮನೆಕಲಸದ ಕರಿಯಪ್ಪ ಮನೆ ಬಾಗಿಲು ತೆರೆಯುತ್ತಿದ್ದಂತೆ ಆತನನ್ನ ಇಬ್ಬರು ಸೇರಿಕೊಂಡು ಉಸಿರುಗಟ್ಟಿಸಿ ಕೊಲೆ ಮಾಡುತ್ತಾರೆ. ನಂತರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಬಂದ ಆಟೋದಲ್ಲೇ ಸೈಲೆಂಟಾಗಿ ಪರಾರಿಯಾಗಿದ್ದರು. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Tue, 20 December 22