ರವೀಂದ್ರ ಕಲಾಕ್ಷೇತ್ರದ ಮುಂಭಾಗ ನಡುರಸ್ತೆಯಲ್ಲಿ ಇದ್ದಕ್ಕಿದ್ದಂತೆ ಬಾಯ್ತೆರೆದ ಆಳೆತ್ತರದ ಕಂದಕ! ಬಿಬಿಎಂಪಿ ಏನ್ಮಾಡ್ತಿದೆ?
ಹಳ್ಳದ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದೆ. ಕಂದಕ ಸುಮಾರು 10 ಅಡಿ ಆಳವಾಗಿದೆ. ಹಿಂದಿನ ಕಾಲದಲ್ಲಿ ದವಸ, ಧಾನ್ಯಗಳನ್ನು ಸಂಗ್ರಹಿಸಲು ಹಗೆಗಳನ್ನು ನಿರ್ಮಾಣ ಮಾಡ್ತಾ ಇದ್ರು. ಅದೇ ರೀತಿಯಲ್ಲಿ ಈ ಬೃಹತ್ ಹಳ್ಳ ಕಾಣಿಸುತ್ತಿದೆ.
ಬೆಂಗಳೂರು: ನಗರದ ಟೌನ್‌ಹಾಲ್ ಬಳಿ ರಸ್ತೆಯಲ್ಲಿ ಆಳವಾದ ಗುಂಡಿ ಬಿದ್ದಿದೆ. ರವೀಂದ್ರ ಕಲಾಕ್ಷೇತ್ರದ ಮುಂಭಾಗದ ರಸ್ತೆಯ ಮಧ್ಯರಸ್ತೆಯಲ್ಲಿ ಆಳವಾದ ಗುಂಡಿ ಬಿದ್ದಿದ್ದು ಟೌನ್‌ಹಾಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಬೃಹತ್ ಹಳ್ಳ ಕಂಡು ಸಾರ್ವಜನಿಕರು ಕಂಗಾಲಾಗಿದ್ದಾರೆ. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸಂಚಾರಿ ಪೊಲೀಸರು ವಾಹನಗಳನ್ನು ಡೈವರ್ಟ್ ಮಾಡಿ ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದಾರೆ.
ಹಳ್ಳದ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದೆ. ಕಂದಕ ಸುಮಾರು 10 ಅಡಿ ಆಳವಾಗಿದೆ. ಹಿಂದಿನ ಕಾಲದಲ್ಲಿ ದವಸ, ಧಾನ್ಯಗಳನ್ನು ಸಂಗ್ರಹಿಸಲು ಹಗೆಗಳನ್ನು ನಿರ್ಮಾಣ ಮಾಡ್ತಾ ಇದ್ರು. ಅದೇ ರೀತಿಯಲ್ಲಿ ಈ ಬೃಹತ್ ಹಳ್ಳ ಕಾಣಿಸುತ್ತಿದೆ.