ಬೆಂಗಳೂರು: ಕಾರಿನಲ್ಲಿ ಹೋಗುತ್ತಿದ್ದಾಗ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಪತಿ ಮೇಲಿನ ಕೋಪಕ್ಕೆ ಪತ್ನಿ ದಿಢೀರ್ ಸ್ಟೇರಿಂಗ್ ಎಳೆದಿದ್ದು, ಈ ವೇಳೆ ಕಾರು ಪಲ್ಟಿಯಾದ(Car Overturned) ಘಟನೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆ(Halasuru Gate Police Station) ಬಳಿ ತಡರಾತ್ರಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ದಂಪತಿ ಅಪಾಯದಿಂದ ಪಾರಾಗಿದ್ದಾರೆ. ಮಾರ್ಕೆಟ್ ಕಡೆಯಿಂದ ದಂಪತಿ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಪತಿ ಮೇಲಿನ ಕೋಪಕ್ಕೆ ಪತ್ನಿ ದಿಢೀರ್ ಸ್ಟೇರಿಂಗ್ ಎಳೆದಿದ್ದಾಳೆ.
ಸ್ಟೇರಿಂಗ್ ಎಳೆದ ರಭಸಕ್ಕೆ ರಸ್ತೆಯಲ್ಲಿಯೇ ಕಾರು ಪಲ್ಟಿ ಹೊಡೆದಿದೆ. ಕೂಡಲೇ ದಂಪತಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮದ್ಯ ಸೇವಿಸಿ ಕಾರು ಚಲಾಯಿಸಿರುವ ಅನುಮಾನ ಹಿನ್ನೆಲೆ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಚಳ್ಳಕೆರೆ ಬಳಿ ಕಾರು ಪಲ್ಟಿ; ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಸಾವು
ರಾಮನಗರ: ಬೆಂಗಳೂರು- ಮೈಸೂರು ಹೆದ್ದಾರಿ ಶುರುವಾದಾಗಿನಿಂದ ಅಪಘಾತ ಸಂಖ್ಯೆಗಳು ಮೀತಿಮೀರಿದೆ. ಅಷ್ಟೇ ಅಲ್ಲ ಕಳ್ಳತನ ಪ್ರಕರಣಗಳು ಕೇಳಿಬರುತ್ತಿದೆ. ಇದಕ್ಕೋಸ್ಕರ ಪೊಲೀಸರು ಇತ್ತೀಚೆಗೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವವರು ನಿಗದಿತ ವೇಗಮೀತಿಗಿಂತ ಹೆಚ್ಚಾಗಿ ಚಾಲನೆ ಮಾಡುವಂತಿಲ್ಲ ಎಂದಿದ್ದರು. ಜೊತೆಗೆ ಸ್ಪೀಡಾಗಿ ಚಾಲನೆ ಮಾಡಿದ್ದ ವಾಹನಗಳಿಗೆ ಫೈನ್ ಕೂಡ ಹಾಕಿದ್ದರು. ಈ ಮೂಲಕ ಅಪಘಾತಕ್ಕೆ ತಡೆ ಹಾಕಲು ಪ್ರಯತ್ನಿಸಿದ್ದರು. ಆದರೀಗ ಹೆದ್ದಾರಿಯ ಬಿಡದಿ ಬಳಿಯ ನೆಲ್ಲಿಗುಂಟಕೆರೆ ಬಳಿ ಲಾರಿ , ಬಸ್ಸು, ಕಾರು ಒಂದೊಕ್ಕೊಂದು ಗುದ್ದಿಕೊಂಡಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ