ಬೆಂಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಐಎಂಎ ಕಂಪನಿಯಿಂದ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 4ರಿಂದ ಠೇವಣಿದಾರರ ಚಿನ್ನಾಭರಣ ಹಿಂದಿರುಗಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಕ್ಷಮ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಚಿನ್ನಾಭರಣ ಹಿಂಪಡೆಯುವ ಮುನ್ನ ಸಾಲ ಪಾವತಿಸತಕ್ಕದ್ದು. ಬಾಕಿ ಹಣ ಪಾವತಿಗೆ ಏಪ್ರಿಲ್ 5ರ ಸಂಜೆ 5ರವರೆಗೂ ಅವಕಾಶ ನೀಡಲಾಗುತ್ತೆ. imaclaims.karnataka.gov.inನಲ್ಲಿ ಬಾಕಿ ಹಣ ತಿಳಿಯತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. NEFT/RTGS ಮೂಲಕ ಸಕ್ಷಮ ಪ್ರಾಧಿಕಾರದ ಖಾತೆಗೆ ಬಾಕಿ ಮೊತ್ತ ಸಲ್ಲಿಸಲು ಅವಕಾಶ ನೀಡಲಾಗಿದೆ. ಹಣ ಪಾವತಿಸಿದ UTR ಸಂಖ್ಯೆಯನ್ನು ಮೇಲೆ imaclaims.karnataka.gov.in ವೆಬ್ಸೈಟ್ನಲ್ಲಿ ಸಲ್ಲಿತಕ್ಕದ್ದು. ಚಿನ್ನಾಭರಣ ಹಿಂಪಡೆಯುವ ದಿನ SMS ಮೂಲಕ ಬರುತ್ತೆ. ದಿನಾಂಕ, ಸಮಯ ಎಸ್ಎಂಎಸ್ ಮೂಲಕ ಬರಲಿದೆ. ಹಂತಹಂತವಾಗಿ ಠೇವಣಿದಾರರ ಚಿನ್ನಾಭರಣ ವಾಪಸಾತಿ ಎಂದು ತಿಳಿಸಿದೆ.
ಬೆಂಗಳೂರು ಮೂಲದ ಐಎಂಎ ಮತ್ತು ಅದರ ಗುಂಪು ಸಂಸ್ಥೆಗಳು ಇಸ್ಲಾಂ ಹೂಡಿಕೆಯ ಮಾರ್ಗಗಳನ್ನು ಬಳಸಿಕೊಂಡು ಜನರಿಗೆ ಹೆಚ್ಚಿನ ಆದಾಯದ ಆಸೆ ಹುಟ್ಟಿಸಿ ಲಕ್ಷಾಂತರ ಜನರಿಂದ 4000 ಕೋಟಿ ವಂಚಿಸಿತ್ತು. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಹೊರಡಿಸಿದ ಅಧಿಸೂಚನೆಗಳಿಗೆ ಅನುಸಾರವಾಗಿ ಸಿಬಿಐ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಅಲಿಖಾನ್‌ನನ್ನು ಬಂಧಿಸಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿನ ಭ್ರಷ್ಟಾಚಾರದಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮನ್ಸೂರ್ ಅಲಿ ಖಾನ್ ವಿಡಿಯೋ ಮಾಡಿ ದುಬೈಗೆ ಪರಾರಿಯಾಗಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಫೋಟೋಗೆ ನಮಿಸಿದ ರಾಹುಲ್ ಗಾಂಧಿ; ಇಲ್ಲಿವೆ ಫೋಟೋಗಳು
ಐಎಂಎ ಬಹುಕೋಟಿ ಹಗರಣ: ರೋಷನ್ ಬೇಗ್ ವಿರುದ್ಧದ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ