Basavaraj Bommai: 10ನೇ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನದಲ್ಲಿ ಸಂಪ್ರದಾಯ ಬದಲಾವಣೆ?

Puneeth Rajkumar: ಇಂದು ದಿ. ಪುನೀತ್ ರಾಜ್ ಕುಮಾರ್ ಗೆ ಖುದ್ದು ಮುಖ್ಯಮಂತ್ರಿ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಣಗೊಂಡಿದೆ. ರಾಜ್ಯಪಾಲರು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖ ಇಲ್ಲ ಎಂಬುದು ಗಮನಾರ್ಹವಾಗಿದೆ.

Basavaraj Bommai: 10ನೇ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನದಲ್ಲಿ ಸಂಪ್ರದಾಯ ಬದಲಾವಣೆ?
10ನೇ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನದಲ್ಲಿ ಸಂಪ್ರದಾಯ ಬದಲಾವಣೆ?
Edited By:

Updated on: Nov 01, 2022 | 12:41 PM

ಬೆಂಗಳೂರು: 10ನೇ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನದಲ್ಲಿ ಸಂಪ್ರದಾಯ ಬದಲಾವಣೆ ಮಾಡಲಾಗಿದೆಯಾ? ಹೀಗೊಂಡು ಅನುಮಾನ ಎದುರಾಗಿದೆ. ಈವರೆಗೆ ಕುವೆಂಪು ಹೊರತುಪಡಿಸಿ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡುತ್ತಿದ್ದರು. ಆದರೆ ಇಂದು ದಿ. ಪುನೀತ್ ರಾಜ್ ಕುಮಾರ್ ಅವರಿಗೆ (Puneeth Rajkumar) ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಣಗೊಂಡಿದೆ. ರಾಜ್ಯಪಾಲರು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖ ಇಲ್ಲ ಎಂಬುದು ಗಮನಾರ್ಹವಾಗಿದೆ.

ಮೊದಲ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಸರುಷಿ ಕುವೆಂಪು ಅವರಿಗೆ ಅಂದಿನ ಮುಖ್ಯಮಂತ್ರಿ ಎಸ್​. ಬಂಗಾರಪ್ಪ ಅವರು ನಾಡ ಕವಿ ಕುವೆಂಪು ಮನೆಗೆ ಹೋಗಿ ಪ್ರದಾನ ಮಾಡಿದ್ದರು. ರಾಜ್ ಕುಮಾರ್ ಜೊತೆಯಲ್ಲೇ ಕುವೆಂಪು ಅವರಿಗೂ ಅಂದು ಪ್ರಶಸ್ತಿ ಪ್ರದಾನ ನಡೆಯಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅಂದು ವಿಧಾನಸೌಧಕ್ಕೆ ಬಂದು ಕುವೆಂಪು ಅವರಿಗೆ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

ನಂತರ ಮೈಸೂರಿನ ಉದಯರವಿ ನಿವಾಸಕ್ಕೆ ತೆರಳಿ ಬಂಗಾರಪ್ಪ ಅವರೇ ಪ್ರದಾನ ಮಾಡಿದ್ದರು. ಅಂದು ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ರಾಜ್ ಕುಮಾರ್ ಅವರಿಗೆ ಅಂದಿನ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಪ್ರಶಸ್ತಿ ಪ್ರದಾನ ಮಾಡಿದ್ದರು. ನಂತರದ ಎಲ್ಲಾ ಕರ್ನಾಟಕ ರತ್ನ ಪ್ರಶಸ್ತಿಗಳು ರಾಜ್ಯಪಾಲರಿಂದಲೇ ಪ್ರದಾನವಾಗಿತ್ತು ಎಂಬುದು ವಿಶೇಷ.