ಬೆಂಗಳೂರು ಅ.10: ಇತ್ತೀಚಿಗೆ ಬೆಂಗಳೂರು ಪೊಲೀಸರು ಅತಿದೊಡ್ಡ ಸೈಬರ್ ಕ್ರೈಮ್ (Cyber Crime) ಜಾಲವೊಂದನ್ನು ಭೇದಿಸಿದ್ದರು. ಈ ಜಾಲದಲ್ಲಿ ಸಿಕ್ಕಿಬಿದ್ದ ಆರೋಪಿಗಳು ಹೂಡಿಕೆ ಹೆಸರಿನಲ್ಲಿ ಜನರಿಗೆ ಬರೋಬ್ಬರಿ 854 ಕೋಟಿ ರೂ. ವಂಚಿಸಿದ್ದರು. ರಾಜ್ಯ ರಾಜಧಾನಿಯಲ್ಲಿನ ಸೈಬರ್ ವಂಚಕರ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಇದುವರೆಗೆ ನಗರದಲ್ಲಿ ನಡೆದ ಸೈಬರ್ ಕ್ರೈಮ್ ಮಾದರಿ, ತೆಗೆದುಕೊಂಡ ಕ್ರಮಗಳ ಬಗ್ಗೆ ಬೆಂಗಳೂರು ನಗರ ಕಮಿಷನರ್ ದಯಾನಂದ್ (Commissioner Dayanand) ಟಿವಿ9 ಡಿಜಿಟಲ್ಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ನಗರ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸೈಬರ್ ಕ್ರೈಮ್ ದೂರುಗಳನ್ನು ದಾಖಲು ಮಾಡಲಾಗುತ್ತಿದೆ. ಇಲ್ಲಿಯವರೆಗೆ 18 ಮಾದರಿಯಲ್ಲಿ ಸೈಬರ್ ಕ್ರೈಮ್ ಆಗಿವೆ. ಈ ಪೈಕಿ 12,615 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 470 ಕೋಟಿ ರೂ. ಹಣ ವಂಚನೆ ಮಾಡಲಾಗಿದೆ. ಇದರಲ್ಲಿ 201 ಕೋಟಿ ರೂ. ಹಣವನ್ನು ಅರೋಪಿಗಳ ಅಕೌಂಟ್ನಲ್ಲಿ ಫ್ರೀಜ್ ಮಾಡಲಾಗಿದೆ. 27 ಕೋಟಿ ರೂ. ಹಣವನ್ನು ಕಳೆದುಕೊಂಡವರಿಗೆ ವಾಪಸ್ಸು ನೀಡಲಾಗಿದೆ. ಆಧಾರ್ ಬಯೋಮೆಟ್ರಿಕ್ಗಳನ್ನು ಬಳಸಿ ಚೀಟಿಂಗ್ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಾಗಿ ಗಮನ ಹರಿಸಬೇಕಿದೆ ಎಂದು ತಿಳಿಸಿದರು.
Protect yourself from cyber attacks with these steps!
If you encounter cyber crime, report to authorities: Call 1930#BeCyberSafe #CyberScam
ಯಾವುದೇ ಅನುಮಾನಾಸ್ಪದ ಲಿಂಕ್ ಗಳ ಮೇಲೆ ಕ್ಲಿಕ್ ಮಾಡದಿರಿ! ವಿವಿಧ ಬಗೆಯ ಸೈಬರ್ ದಾಳಿಗಳಿಂದ ತಪ್ಪಿಸಿಕೊಳ್ಳಲು ಈ ಕೆಳಕಂಡ ಹಂತಗಳನ್ನು ಅನುಸರಿಸಿ.
ಒಂದು ವೇಳೆ ನೀವು… pic.twitter.com/i9b2itIbPV
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) October 9, 2023
ಇದನ್ನೂ ಓದಿ: ರಾಜ್ಯದಲ್ಲಿ ದಾಖಲಾದ ಪ್ರಕರಣಗಳಲ್ಲಿ ಸೈಬರ್ ಕ್ರೈಂ ಶೇ.20ರಷ್ಟಿದೆ: ಎಂ ಎ ಸಲೀಂ
ಇನ್ನು ಪೊಲೀಸ್ ಕಮಿಷನರ್ ಕಚೇರಿ ಹತ್ತಿರದಲ್ಲಿ ಬಸ್ ಸ್ಟಾಂಡ್ ಕಳ್ಳತನವಾಗಿದ್ದ ಪ್ರಕರಣ ಪತ್ತೆ ಹಚ್ಚಲಾಗಿದೆ. ಬಸ್ ಶೆಲ್ಟರ್ ಕಳ್ಳತನ ಅಥವಾ ಮಿಸ್ ಆಗಿರಲಿಲ್ಲ. ಬಿಬಿಎಂಪಿ ಅಧಿಕಾರಿಗಳು ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ತೆರವು ಮಾಡಿದ್ದಾರೆ. ಆದರೆ ಬಸ್ ಶೆಲ್ಟರ್ ಹಾಕಲು ಕೆಲಸ ಮಾಡುತ್ತಿದ್ದ ಸೈನ್ ಪೋಸ್ಟ್ ಕಂಪನಿಯವರು ಬಸ್ ಶೆಲ್ಟರ್ ಕಳ್ಳತನ ಆಗಿದೆ ಎಂದು ದೂರು ನೀಡಿದ್ದರು. ದೂರಿನ ಅನ್ವಯ ಕೇಸ್ ದಾಖಲು ಮಾಡಲಾಗಿತ್ತು. ನಾವು ತನಿಖೆ ನಡೆಸುತ್ತಿರುವ ವೇಳೆ ಪರಿಶೀಲನೆ ವೇಳೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಮಗಾರಿ ಕಳಪೆ ಎಂದು ನೋಟಿಸ್ ನೀಡಿದ್ದಾರೆ. ಆದಾದ ಬಳಿಕ ಬಿಬಿಎಂಪಿ ಅಧಿಕಾರಿಗಳು ಬಸ್ ನಿಲ್ದಾಣವನ್ನು ತೆರವು ಮಾಡಿದರು ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Tue, 10 October 23