ಬೆಂಗಳೂರು, ಮಾ.29: ಹಣಕ್ಕಾಗಿ ಸಾಕು ಮಕ್ಕಳಿಂದಲೇ ಮಹಿಳೆ ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನ(Bengaluru) ಆರ್ಎಂಸಿ ಯಾರ್ಡ್ ಮಾರ್ಕೆಟ್ನಲ್ಲಿ ನಡೆದಿದೆ. ಅಣ್ಣಮ್ಮ (56) ಚಾಕು ಇರಿತಕ್ಕೊಳಗಾದ ಮಹಿಳೆ. ತನ್ನ ಅಕ್ಕನ ಮಕ್ಕಳಾದ ಸುಮಿತ್ರಾ ಹಾಗೂ ಮುನಿರಾಜು ಎಂಬುವವರನ್ನ ಇವರು ಸಾಕಿಕೊಂಡಿದ್ದರು. ಆರೋಪಿ ಮುನಿರಾಜು ಆರ್ಎಂಸಿ ಯಾರ್ಡ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ, ಇಲ್ಲಿ ಸಂಬಳ ಕೊಡುತ್ತಿಲ್ಲ, ಕೊಡಿಸಿ ಎಂದು ಸುಮಿತ್ರಾ ಹಾಗೂ ಮುನಿರಾಜು ಅಣ್ಣಮ್ಮನನ್ನು ಕರೆದೊಯ್ದಿದ್ದರು. ಈ ವೇಳೆ ಅಣ್ಣಮ್ಮಗೆ ಚಾಕು ಇರಿದಿರುವ ಮುನಿರಾಜು, ಬಳಿಕ ಮನೆಯಲ್ಲಿದ್ದ 6 ಲಕ್ಷ ನಗದು, ಚಿನ್ನ ದರೋಡೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ: ಆನೇಕಲ್ ಪಟ್ಟಣದ ಮಿರ್ಜಾ ರಸ್ತೆಯಲ್ಲಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಅರಣ್ಯ ಇಲಾಖೆ ಸಿಬ್ಬಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ರಾಕೇಶ್(28) ಮೃತ ರ್ದುದೈವಿ. ಮತ್ತೋರ್ವ ಅರಣ್ಯ ಇಲಾಖೆ ಸಿಬ್ಬಂದಿ ವಿನಯ್ಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಇವರು ಚಿರತೆ ಕಾರ್ಯಪಡೆಯಲ್ಲಿ ಕೆಲಸ ಮಾಡ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯಾಗಿದ್ದು, ಎಟಿಎಂಗೆ ಹೋಗಿ ಬರುವುದಾಗಿ ಬೈಕ್ನಲ್ಲಿ ತೆರಳಿದ್ದ ವೇಳೆ ಅಪಘಾತ ನಡೆದಿದೆ. ಈ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಅಕ್ರಮ ಮಣ್ಣು ಸಾಗಿಟ ಬಗ್ಗೆ ಪ್ರಶ್ನಿಸಿದ್ದಕ್ಕೆ ತಹಶೀಲ್ದಾರ್ ಮೇಲೆ ಲಾರಿ ಹತ್ತಿಸಿ ಕೊಲೆಗೆ ಯತ್ನ: ದೂರು ದಾಖಲು
ಧಾರವಾಡ: ಕೃಷಿ ವಿಶ್ವ ವಿದ್ಯಾಲಯ ಬಳಿಯ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.70 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಅಥಣಿಯಿಂದ ಧಾರವಾಡಕ್ಕೆ ಬೊಲೆರೊ ವಾಹನದಲ್ಲಿ ಹಣ ಸಾಗಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದ್ದು, ಈ ಕುರಿತು ಹಣ ಜಪ್ತಿ ಮಾಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Fri, 29 March 24