ಗಂಡನ ಕಾಟಕ್ಕೆ ಹೆಂಡ್ತಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಪತಿಯ ಲವ್ವಿಡವ್ವಿ ಬಿಚ್ಚಿಟ್ಟಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 19, 2024 | 5:44 PM

ಆತ್ಮಹತ್ಯೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದರಂತೆ ಬೆಂಗಳೂರಿನ ಶೆಟ್ಟಿಹಳ್ಳಿ(Shettihalli)ಯ ಮನೆಯೊಂದರಲ್ಲಿ ಗೃಹಿಣಿಯೊಬ್ಬರು ಪತಿಯ ಕಿರುಕುಳ ಹಿನ್ನಲೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಇದೀಗ ಪತಿ ಕಾಂತರಾಜ್‌ನನ್ನು ಬಾಗಲಗುಂಟೆ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಗಂಡನ ಕಾಟಕ್ಕೆ ಹೆಂಡ್ತಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಪತಿಯ ಲವ್ವಿಡವ್ವಿ ಬಿಚ್ಚಿಟ್ಟಳು
ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ಆರೋಪಿ ಪತಿ
Follow us on

ಬೆಂಗಳೂರು, ಜೂ.19: ಪತಿ ಅನೈತಿಕ ಸಂಬಂಧಕ್ಕೆ ಬೇಸತ್ತು ಬೆಂಗಳೂರಿನ ಶೆಟ್ಟಿಹಳ್ಳಿ(Shettihalli)ಯ ಮನೆಯೊಂದರಲ್ಲಿ ಗೃಹಿಣಿಯೊಬ್ಬರು ಪತಿಯ ಕಿರುಕುಳ ಹಿನ್ನಲೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಲತಾ(30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇನ್ನು ಲತಾ ನೇಣಿಗೆ ಶರಣಾಗುವ ಮೊದಲು ಡೆತ್‌ನೋಟ್‌ನಲ್ಲಿ ಪತಿ ಕಾಂತರಾಜ್‌ ಸೇರಿ 8 ಜನರ ವಿರುದ್ಧ ಆರೋಪಿಸಿ ಬರೆದಿದ್ದಾಳೆ. ಈ ಹಿನ್ನಲೆ ಇದೀಗ ಪತಿ ಕಾಂತರಾಜು(33)ನನ್ನು ಪೊಲೀಸರು ಬಂಧಿಸಿದ್ದಾರೆ.

ಡೆತ್​ನೋಟ್​ನಲ್ಲಿ ಏನಿದೆ?

ಪತಿ ಕಾಂತರಾಜ್‌ ಸೇರಿ 8 ಜನರ ವಿರುದ್ಧ ಡೆತ್‌ನೋಟ್‌ನಲ್ಲಿ ಆರೋಪಿಸಿರುವ ಲತಾ, ‘ಕಾಂತರಾಜ್‌ ದಿವ್ಯಾ ಎಂಬುವವರ ಜತೆ ಅಕ್ರಮ ಸಂಬಂಧ ಹೊಂದಿದ್ದ. ಇದರಿಂದ ನನಗೆ ಕಿರುಕುಳ ನೀಡುತ್ತಿದ್ದ. ಈ ಹಿನ್ನಲೆ ಆತನ ಅನೈತಿಕ ಸಂಬಂಧಕ್ಕೆ ಬೇಸತ್ತು ನಾನು ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಬರೆದಿಟ್ಟಿದ್ದಾರೆ. ಇದೀಗ ಪತಿ ಕಾಂತರಾಜ್‌ನನ್ನು ಬಾಗಲಗುಂಟೆ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ವ್ಯಕ್ತಿಯೊರ್ವನಿಗೆ ಪಿಎಸ್​​ಐ ನಿಂದ ಕಿರುಕುಳ ಆರೋಪ; ಮನನೊಂದು ಠಾಣೆ ಮುಂದೆಯೇ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಹಿಂಬದಿಯಿಂದ ದ್ವಿಚಕ್ರ ವಾಹನದ ಮೇಲೆ‌ ಹರಿದ ಲಾರಿ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಸ್ವತ್ರೆ ಬಳಿ ಹಿಂಬದಿಯಿಂದ ದ್ವಿಚಕ್ರ ವಾಹನದ ಮೇಲೆ‌ ಟಿಪ್ಪರ್ ಲಾರಿ ಹರಿದು ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ನಾಗಮಂಗಲ ಮೂಲದ ಅನಿತಾ( 29) ಮೃತ ದುರ್ದೈವಿ.
ಈಶಾ ಪೌಂಡೇಶನ್​ಗೆ ಎಂದು ಸ್ನೇಹಿತನ ಜೊತೆ ಮಹಿಳೆ‌ ಹೋಗುತ್ತಿದ್ದರು. ತಲೆ ಮೇಲೆ ಚಕ್ರ ಹರಿದ ಪರಿಣಾಮ ಮೆದುಳು ಹೊರ ಬಂದು ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಅಪಘಾತದ ನಂತರ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ದೊಡ್ಡಬಳ್ಳಾಪುರ ನಗರ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Wed, 19 June 24