AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ರಾಪ್ತೆಯ ಖಾಸಗಿ ವಿಡಿಯೋ, ಫೋಟೋ ಹಿಡಿದು ಬ್ಲಾಕ್​ಮೇಲ್! ಹೆದರಿದ ಕುಟುಂಬ ಆತ್ಮಹತ್ಯೆಗೆ ಯತ್ನ

ಆತ ಹೆಂಡತಿ ಸತ್ತ ಮೇಲೆ ಸೈಕೋ ಆಗಿ ತಿರುಗುತ್ತಿದ್ದ. ಚೆಂದದ ಹೆಣ್ಣುಮಕ್ಕಳು ಕಂಡರೆ ಸಾಕು ತನ್ನ ಕಾಮದ ಕಣ್ಣನ್ನ ಬೀರುತ್ತಿದ್ದ. ಹೀಗಿದ್ದಾತನ ಕಣ್ಣು ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾಕೆಯ ಮೇಲೆ ಬಿದ್ದಿತ್ತು. ಆಕೆಯ ಖಾಸಗಿ ಫೋಟೋ, ವಿಡಿಯೋವನ್ನ ಸೆರೆ ಹಿಡಿದು ಇನ್ನಿಲ್ಲದ ಟಾರ್ಚರ್ ನೀಡಿದ್ದ. ಬಳಿಕ ಆಗಿದ್ದಾದ್ರು ಏನು ಅಂತೀರಾ? ಈ ಸ್ಟೋರಿ ಓದಿ.

ಅಪ್ರಾಪ್ತೆಯ ಖಾಸಗಿ ವಿಡಿಯೋ, ಫೋಟೋ ಹಿಡಿದು ಬ್ಲಾಕ್​ಮೇಲ್! ಹೆದರಿದ ಕುಟುಂಬ ಆತ್ಮಹತ್ಯೆಗೆ ಯತ್ನ
ಆರೋಪಿ ಲೋಕೇಶ್​
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Jun 08, 2024 | 9:04 PM

Share

ಚಾಮರಾಜನಗರ, ಜೂ.08: ಆಕೆ ಈಗ ತಾನೇ ಮೊದಲ ವರ್ಷದ ಪಿಯುಸಿ(PUC) ಮುಗಿಸಿ ದ್ವಿತೀಯ ವರ್ಷಕ್ಕೆ ಅಡ್ಮಿಷನ್ ಆಗಿದ್ದಳು. ಉತ್ತಮ ವ್ಯಾಸಾಂಗ ಪಡೆದು ಐಎಎಸ್ ಅಧಿಕಾರಿ ಆಗುವ ಕನಸ್ಸು ಕಂಡಿದ್ದಳು. ಆದ್ರೆ, ಆಕೆಯ ಬಾಳಲ್ಲಿ ಕಾಮ ಕ್ರಿಮಿಯ ಪ್ರವೇಶವಾಗಿತ್ತು. ಮದ್ವೆಯಾಗಿ ಎರೆಡು ಮಕ್ಕಳಿದ್ದರೂ ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ. ಜೊತೆಗೆ ಆಕೆಯ ಖಾಸಗಿ ಫೋಟೊ, ವಿಡಿಯೋ ಹಿಡಿದು ಬ್ಲಾಕ್​ಮೇಲ್ ಮಾಡಿದ್ದ ಪರಿಣಾಮ ಈಗ ಒಂದೇ ಕುಟುಂಬದ ನಾಲ್ವರು ವಿಷ ಪ್ರಾಶಾಣ ಮಾಡಿದ್ದು, ಓರ್ವ ಮೃತ ಪಟ್ಟಿದ್ರೆ, ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಹೌದು, ತಾಳ ಬೆಟ್ಟದಲ್ಲಿ ಕೆ.ಆರ್ ನಗರ ತಾಲೂಕಿನ ಚಂದಗಾಲು ಗ್ರಾಮದ ನಾಲ್ವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದರಲ್ಲಿ ಮಾಹದೇವನಾಯ್ಕ ಎಂಬಾತ ಸಾವನ್ನಪ್ಪಿದ್ರೆ, ಲೀಲಾವತಿ ಗೌರಮ್ಮ ಹಾಗೂ ಅಪ್ರಾಪ್ಥೆಯ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ:ಮಹದೇಶ್ವರನ ದರ್ಶನ ಪಡೆದು ವಾಪಸ್ ಬರುವಾಗ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ 

ಆಗಿದ್ದೇನು?

ದೂರು ದಾಖಲಿಸಿಕೊಳ್ಳದ ಪೊಲೀಸರು

ಚೀರನಹಳ್ಳಿಯ ಲೋಕೇಶ್​ ಎಂಬಾತನಿಗೆ ಮದ್ವೆಯಾಗಿ ಪತ್ನಿ ಮೃತ ಪಟ್ಟಿದ್ದು, ಇಬ್ಬರು ಮಕ್ಕಳಿದ್ದಾರೆ. ಆದ್ರೆ, ಈ ಕಾಮ ಕ್ರಿಮಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಆಪ್ರಾಪ್ಥೆಯ ಮೇಲೆ ಕಣ್ಣಾಕಿದ್ದಾನೆ. ಆಕೆಯ ಖಾಸಗಿ ವಿಡಿಯೋ ಹಾಗೂ ಫೋಟೊ ಇಟ್ಟುಕೊಂಡು ಬ್ಲಾಕ್​ಮೇಲ್ ಮಾಡುತ್ತಿದ್ದ. ಈ ವಿಚಾರ ಅಪ್ರಾಪ್ತೆಯ ಮನೆಯವರಿಗೆ ತಿಳಿದಿದೆ. ಕೆ.ಆರ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆ ಠಾಣೆಯ ಪಿಎಸ್ಐ ಹಾಗೂ ಇನ್ಸ್ ಪೆಕ್ಟರ್ ಎರೆಡು ಬಾರಿ ಹೋದಾಗಲೂ ದೂರು ತೆಗೆದುಕೊಳ್ಳದೆ ವಾಪಸ್ಸು ಕಳುಹಿಸಿದ್ದಾರೆ.

ಯಾವಾಗ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಆಗ ಲೋಕೇಶ್​ ತಂದಗಾಲು ಗ್ರಾಮಕ್ಕೆ ತೆರಳಿ ಸಂತ್ರಸ್ಥ ಯುವತಿ ಮನೆ ಮುಂದೆ ಗಲಾಟೆ ಮಾಡಿದ್ದಾನೆ. ಇದರಿಂದ ಮನನೊಂದ ಕುಟುಂಬಸ್ಥರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದು ಬಳಿಕ ತಾಳ ಬೆಟ್ಟಕ್ಕೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಲೀಲಾವತಿ, ಗೌರಮ್ಮ, ಹಾಗೂ ಅಪ್ರಾಪ್ಥೆ ವಿಷ ಪ್ರಾಶಾಣದಿಂದ ಗಂಭೀರವಾಗಿದ್ರೆ, ಅತ್ತ ಮಹದೇವನಾಯ್ಕ ಮೃತ ಪಟ್ಟಿದ್ದಾರೆ. ಸದ್ಯ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಮಹದೇವನಾಯ್ಕರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಹನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅದೇನೆ ಹೇಳಿ ಉನ್ನತ ವ್ಯಾಸಾಂಗ ಮಾಡಿ ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಕಟ್ಟಿದ್ದ ಬಾಲೆಯ ಬಾಳಲ್ಲಿ ನಡೆದಿದ್ದು ಮಾತ್ರ ಘೋರ ದುರಂತ. ದೂರು ದಾಖಲಿಸಿಕೊಳ್ಳದ ಪೊಲೀಸರ ವಿರುದ್ದ ಕಠಿಣ ಕ್ರಮ ಆಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ