ಬೆಂಗಳೂರು, (ನವೆಂಬರ್ 23): ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಐಟಿ ದಾಳಿಯಾಗಿದೆ. ಗೃಹ ಬಳಕೆ ವಸ್ತುಗಳ ತಯಾರಿಕಾ ಗಿಲ್ಮಾ ಎನ್ನುವ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗಿಲ್ಮ ಕಂಪನಿಗೆ ಸಂಬಂಧಿಸಿದ ಪ್ರಾಂಚೈಸಿಗಳ ಮೇಲೂ ಸಹ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬನ್ನೇರುಘಟ್ಟ ರಸ್ತೆ , ಹೆಚ್ ಎಸ್ ಆರ್ ಲೇಔಟ್, ಜಯನಗರ , ಪೀಣ್ಯಾ ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಗಿಲ್ಮಾ ಗ್ಯಾಸ್ ಸ್ಟವ್, ಓವನ್ ಸೇರಿದಂತೆ ಗೃಹ ಬಳಕೆ ವಸ್ತುಗಳನ್ನ ಸರಬರಾಜು ಮಾಡುವ ಕಂಪನಿಯಾಗಿದೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ಗಿಲ್ಮ ಕಂಪನಿಗೆ ಸಂಬಂಧಿಸಿದ ಪ್ರಾಂಚೈಸಿಗಳು ಇದ್ದು, ಅವುಗಳ ಮೇಲೂ ಐಟಿ ದಾಳಿಯಾಗಿದೆ. ತೆರಿಗೆ ವಂಚನೆ ಸಂಬಂಧ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಮೊನ್ನೇ ಅಷ್ಟೇ ಡ್ರೈ ಫ್ರೂಟ್ ಅಂಗಡಿ ಹಾಗೂ ಮಾಲೀಕರ ಮನೆಗಳ ಮೇಲೆ ಐಟಿ ದಾಳಿ ಮಾಡಿತ್ತು. ಕಳೆದ ಒಂದುವರೆ ತಿಂಗಳಿನಿಂದ ಬೆಂಗಳೂರಿನಲ್ಲಿ ಐಟಿ, ಇಡಿ ದಾಳಿಗಳು ಆಗುತ್ತಲೇ ಇವೆ.
Published On - 1:27 pm, Thu, 23 November 23