ಬೆಂಗಳೂರು: ಬೆಳ್ಳಂಬೆಳಗ್ಗೆ ನಗರದ ಚಿನ್ನದ ವ್ಯಾಪಾರಿಗಳಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ತೆರಿಗೆ ವಂಚನೆ ಮಾಡಿ ವ್ಯಾಪಾರ ಮಾಡುತ್ತಿದ್ದ ಸುಮಾರು 25ಕ್ಕೂ ಹೆಚ್ಚು ಚಿನ್ನದ ವ್ಯಾಪಾರಿಗಳ ಅಂಗಡಿ (Jewellery shops) ಮೇಲೆ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜಯನಗರ, ಯಶವಂತಪುರ, ಬಸವನಗುಡಿ, ಚಿಕ್ಕಪೇಟೆ ನಗರದಲ್ಲಿನ ವ್ಯಾಪಾರಿಗಳ ಅಂಗಡಿ ಮೇಲೆ ದಾಳಿ ಮಾಡಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.
ವ್ಯಾಪಾರಿ ಜಯನಗರದ ರಾಜೇಶ್ ಕುಮಾರ್ ಜೈನ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಜೇಶ್ ಕುಮಾರ್ ಜೈನ್ ಜ್ಯುವೆಲ್ಲರ್ಸ್ ಅಂಗಡಿಗಳಲ್ಲಿ ಹೂಡಿಕೆ, ಪಾರ್ಶ್ವ ಫಾರ್ಮಾಸ್ಯುಟಿಕಲ್ನಲ್ಲಿ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಬನಶಂಕರಿಯಲ್ಲಿರುವ ಪಾರ್ಶ್ವ ಫಾರ್ಮಾಸಿಟಿಕಲ್ನಲ್ಲಿ ವ್ಯವಹಾರ ಮಾಡುತ್ತಿದ್ದರು. ನಗರದ ಹಲವು ಸ್ಥಳಗಳಲ್ಲಿ 300 ಕ್ಕು ಹೆಚ್ಚು ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಭದ್ರತೆಗಾಗಿ ಸಿಎಆರ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 am, Tue, 31 January 23