ಬೆಂಗಳೂರು: ಪೊಲೀಸ್​​ರಿಂದ ಸುಲಿಗೆ ಆರೋಪ; ಟ್ವೀಟ್​​ ಮಾಡಿ ಅಳಲು ತೋಡಿಕೊಂಡ ಸಂತ್ರಸ್ತೆ

TV9 Digital Desk

| Edited By: ವಿವೇಕ ಬಿರಾದಾರ

Updated on:Jan 31, 2023 | 8:48 AM

ಜನವರಿ 29 ರಂದು ವೈಟ್ ಫೀಲ್ಡ್​​ನ ಕುಂದನಹಳ್ಳಿ ಲೇಕ್ ಪಾರ್ಕ್​ನಲ್ಲಿ ಯುವತಿಯಿಂದ ಪೊಲೀಸ್​​​ 1000 ರೂ. ಸಲಿಗೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರು: ಪೊಲೀಸ್​​ರಿಂದ ಸುಲಿಗೆ ಆರೋಪ; ಟ್ವೀಟ್​​ ಮಾಡಿ ಅಳಲು ತೋಡಿಕೊಂಡ ಸಂತ್ರಸ್ತೆ
ಯುವತಿಯ ಟ್ವೀಟ್​​ (ಎಡಚಿತ್ರ) ಪ್ರತಿನಿಧಿಕ ಚಿತ್ರ (ಬಲಗಡೆ)

ಬೆಂಗಳೂರು: ಕಳೆದ ತಿಂಗಳು ಡಿಸೆಂಬರ್​ನಲ್ಲಿ ನಗರದ ಸಂಪಿಗೆಹಳ್ಳಿಯಲ್ಲಿ ದಂಪತಿಗಳಿಂದ ಆಡುಗೋಡಿ ಪೊಲೀಸರು ಹಣ ವಸೂಲಿ ಮಾಡಿದ್ದ ಪ್ರಕರಣ ವರದಿಯಾಗಿತ್ತು. ಇದು ಮಾಸುವ ಮುನ್ನವೇ ಜನವರಿ 29 ರಂದು ವೈಟ್ ಫೀಲ್ಡ್​​ನ ಕುಂದನಹಳ್ಳಿ ಲೇಕ್ ಪಾರ್ಕ್​ನಲ್ಲಿ ಯುವತಿಯಿಂದ ಪೊಲೀಸ್​​​ 1000 ರೂ. ಸುಲಿಗೆ ಮಾಡಿರುವ ಘಟನೆ ನಡೆದಿದೆ.

ನಡೆದ ಘಟನೆ ಬಗ್ಗೆ ಯುವತಿ ಟ್ವೀಟ್​​ ಮಾಡಿದ್ದು “ಜನವರಿ 29 ರವಿವಾರದಂದು ವೈಟ್​ಫೀಲ್ಡ್ ವಿಭಾಗದ ಕುಂದನಹಳ್ಳಿ ಲೇಕ್ ಪಾರ್ಕ್​ನಲ್ಲಿ ಸಂತ್ರಸ್ತ ಯುವತಿ (ಹರ್ಷ ಲತೀಪ್) ಮತ್ತು ನನ್ನ ಗೆಳೆಯ ಕುಳಿತಿದ್ದೇವು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್​​ ನನ್ನ ಮತ್ತು ನನ್ನ ಗೆಳೆಯನ ಪೋಟೋ ಕ್ಲಿಕ್ಕಿಸಿ, ಪಾರ್ಕ್​​ನಲ್ಲಿ ಕುಳಿತುಕೊಳ್ಳಲು ಪರ್ಮಿಷನ್ ಬೇಕೆಂದು ಕಿರುಕುಳ ನೀಡಿದ್ದಾರೆ”.

ನಂತರ ಹೆಸರು, ವೃತ್ತಿ, ಊರು ಮತ್ತು ಇಲ್ಲಿ ಯಾಕೆ ಬಂದಿದ್ದೀರಿ ಎಂದು ವಿಚಾರಸಿದ್ದಾನೆ. ನಂತರ ಅನುಮತಿ ಇಲ್ಲದೆ ಕೂತಿದ್ದಕ್ಕೆ 1000 ರೂ. ದಂಡ ಕಟ್ಟುವಂತೆ ಹೇಳಿದರು. ಆಗ ಹರ್ಷ ಲತೀಪ್ ನಾವೇನು ತಪ್ಪು ಮಾಡಿಲ್ಲ ನಾವೇಕೆ ದಂಡ ಕಟ್ಟಬೇಕು ಎಂದಿದ್ದಾಳೆ. ಅದಕ್ಕೆ ಪೊಲೀಸ್​ ನೀವು ಅನುಮತಿ ಇಲ್ಲದೆ ಇಲ್ಲಿ ಕೂತಿದ್ದೀರಿ ಮತ್ತು ನೀವು ಧೂಮಪಾನ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಹೊಯ್ಸಳ ಪೊಲೀಸರ ವಿರುದ್ಧ ಸುಲಿಗೆ ಆರೋಪ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

ಅದಕ್ಕೆ ಹರ್ಷ ಲತೀಪ್ ನಮ್ಮ ಹತ್ತಿರ ಸಿಗರೇಟ್​​ ಇಲ್ಲ ಮತ್ತು ಹಾಗೆ ಕುಳಿತಿದ್ದೇವೆ ಎಂದು ಉತ್ತರ ನೀಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಪೊಲೀಸ್​​ ತನ್ನ ವಿಚಾರಣೆ ಮುಂದುವರೆಸಿದ್ದಾರೆ. ನೀವು ಅನುಮತಿ ಇಲ್ಲದೆ ಕುಳಿತಿರುವುದು ತಪ್ಪು ಹೀಗಾಗಿ ನೀವು ಪೊಲೀಸ್​ ಠಾಣೆಗೆ ಬನ್ನಿ ಎಂದಿದ್ದಾರೆ. ನಂತರ ಠಾಣೆಗೆ ಬಂದರೇ ಹಿರಿಯ ಅಧಿಕಾರಿಗಳಿಗೆ ಉತ್ತರಿಸಬೇಕಾಗುತ್ತದೆ. ಹೀಗಾಗಿ 1000 ರೂ. ನೀಡಿ ಎಂದು ಪೊಲೀಸ್​ ಕೇಳಿದ್ದಾರೆ.

ಕೊನೆಯದಾಗಿ ಪೊಲೀಸ್​ ಪಾರ್ಕ್​ನಿಂದ ಹೊರ ಹೋಗಬೇಕಾದರೇ 1000ರೂ. ನೀಡಲೇಬೇಕು ಎಂದಿದ್ದಾನೆ. ಅಂತಿಮವಾಗಿ ವಿಧಿ ಇಲ್ಲದೆ 1000 ರೂ. ಕೊಟ್ಟಿದ್ದೇವೆ. ಯಾವುದೇ ತಪ್ಪು ಮಾಡದ ನಾವು ಈ ನೈತಿಕ ಪೊಲೀಸ್‌ಗಿರಿಯನ್ನು ಏಕೆ ಸಹಿಸಿಕೊಳ್ಳಬೇಕಾಗಿತ್ತು?. ನೊಂದ ಯುವತಿ ಹರ್ಷ ಲತೀಪ್ ಪೊಲೀಸರ ಬೈಕ್​ ನಂಬರ್​ ಪ್ಲೇಟ್​​ನ್ನು ಫೋಟೋ ತೆಗೆದು, ಪೊಲೀಸರ ನಡವಳಿಕೆ ಕುರಿತು ಟ್ವಿಟರ್​ನಲ್ಲಿ ಬೆಂಗಳೂರು ಕಮಿಷನರ್​ ಮತ್ತು ಕಮಿಷನರ್​ ಆಫೀಸ್​​ಗೆ ಟ್ಯಾಗ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada