ಬೆಂಗಳೂರು: ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (ADGP Alok kumar) ಟ್ವೀಟ್ ಮಾಡಿದ್ದು, ಇಂದು ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿದ್ದರ ಬಗ್ಗೆ (PFI Ban) ಪ್ರಸ್ತಾಪಿಸುತ್ತಾ ಇದು “ಸೆಪ್ಟೆಂಬರ್ ಕ್ರಾಂತಿ” ಎಂದು (September Revolution) ಬಣ್ಣಿಸಿದ್ದಾರೆ.
SIMI ಅನ್ನು 26.09.01 ರಂದು ನಿಷೇಧಿಸಲಾಗಿದೆ. PFI ಅನ್ನು 28.09.22 ರಂದು ನಿಷೇಧಿಸಲಾಗಿದೆ. ಸಾಮಾನ್ಯ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ನಾವು ಕಾನೂನುಬಾಹಿರ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಜನರ ಪರವಾಗಿ ನಮ್ಮ ಕೆಲಸ ಎಂದು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಶ್ರೀ ಮದ್ಭಗವದ್ಗೀತಾ (Bhagavad Gita)- 4ನೇ ಅಧ್ಯಾಯ 8ನೇ ಶ್ಲೋಕವನ್ನು ಉಲ್ಲೇಖಿಸುತ್ತಾ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| ಎಂದಿದ್ದಾರೆ ಎಡಿಜಿಪಿ ಅಲೋಕ್ ಕುಮಾರ್.
ಈ ಶ್ಲೋಕದ ಭಾವಾರ್ಥ ಹೀಗಿದೆ:
ಧರ್ಮಕ್ಕೆ ಹಾನಿಯಾದಾಗ ನಾನು (ಭಗವಂತನು ಸಜ್ಜನರನ್ನು ಕಾಪಾಡಿ, ದುರ್ಜನರನ್ನು ನಾಶ ಮಾಡಲು, ಧರ್ಮಸಂಸ್ಥಾಪನೆ ಮಾಡಲು ಪ್ರತಿ ಯುಗದಲ್ಲಿ ಭೂಮಿಯಲ್ಲಿ ಅವತರಿಸುವೆನು.
“September Revolution”
# SIMI banned on 26.09.01#PFI banned on 28.09.22
Assure the citizens that we are committed to protect the interests of common citizen ,
we are only against unlawful activities“Paritranaaya saadhunaama, vinaashaaya cha dushkritaama”
— alok kumar (@alokkumar6994) September 28, 2022
Published On - 8:48 pm, Wed, 28 September 22