ಬೆಂಗಳೂರು, ಆಗಸ್ಟ್ 23: ಕ್ಯಾಬ್ ಅಗ್ರಿಗೇಟರ್‌ಗಳು ಮತ್ತು ಎಲೆಕ್ಟ್ರಿಕ್ ವೆಹಿಕಲ್ ಮಾಲೀಕರಿಗಾಗಿ ಇಂಧನ ಇಲಾಖೆಯು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತವು (ಬೆಸ್ಕಾಂ) ವಿದ್ಯುತ್ ಶೇಖರಣೆಗಾಗಿ ಸೆಕೆಂಡ್ ಲೈಫ್ ಕಾರ್ ಬ್ಯಾಟರಿಗಳನ್ನು (ಕಾರುಗಳಲ್ಲಿ ಬಳಸಿ ಹಳೆಯದಾದ) ಸಹ ಬಳಸಲಿದೆ. ಈ ‘ಸೆಕೆಂಡ್ ಲೈಫ್ ಬ್ಯಾಟರಿ ಸ್ಟೋರೇಜ್ ಇವಿ ಚಾರ್ಜಿಂಗ್ ಹಬ್’ ದೇಶದಲ್ಲೇ ಮೊದಲ ಉಪ್ರಕವಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಈಗಿರುವ ಬೆಸ್ಕಾಂನ 224ಕೆವಿ ಪವರ್ ಸ್ಟೇಷನ್ ಜಾಗದಲ್ಲಿ ಚಾರ್ಜಿಂಗ್ ಹಬ್ ಸ್ಥಾಪನೆಯಾಗಲಿದೆ. ಇದು ವಿಮಾನ ನಿಲ್ದಾಣದ ಪಾರ್ಕಿಂಗ್ ವಲಯದಿಂದ 1.5 ಕಿಮೀ ದೂರದಲ್ಲಿದೆ. ಇದರಲ್ಲಿ ಒಂದೇ ಬಾರಿಗೆ 24 ವಾಹನಗಳನ್ನು ಚಾರ್ಜ್ ಮಾಡಬಹುದು. ಮೂರು ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸಹ ಸ್ಥಾಪಿಸಲಾಗುತ್ತಿದೆ.
ಇವಿ ಬಳಸುತ್ತಿರುವ ಕ್ಯಾಬ್ ಚಾಲಕರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಬೆಸ್ಕಾಂ ಇವಿ ಚಾರ್ಜಿಂಗ್ ಹಬ್ ನಿರ್ಮಿಸಲಾಗುತ್ತಿದೆ. ಈ ಇವಿ ಚಾರ್ಜಿಂಗ್ ಹಬ್’ನ ವಿಶೇಷತೆ ಏನು?#Bescom #EVChargingStationHub pic.twitter.com/xGWmWilBhu
— Namma BESCOM | ನಮ್ಮ ಬೆಸ್ಕಾಂ (@NammaBESCOM) August 23, 2024
ಈ ಇವಿ ಚಾರ್ಜಿಂಗ್ ಸ್ಟೇಷನ್ ಅನ್ನು ಜಿಐಜಿ ಮತ್ತು ನೂನಮ್ ಕಂಪನಿಗಳ ಸಮನ್ವಯದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ನಾವು ಬಳಸಿದ ಕಾರ್ ಬ್ಯಾಟರಿಗಳನ್ನು ಆಯ್ಕೆ ಮಾಡುತ್ತಿದ್ದೇವೆ. ವಿದ್ಯುತ್ ಶೇಖರಣೆಗಾಗಿ ಅವುಗಳನ್ನು ಬಳಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಅತಿಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್: ಅಗ್ರ ಸ್ಥಾನದಲ್ಲಿ ಕರ್ನಾಟಕ
ಇವಿಗಳ ಸಂಖ್ಯೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ರಾಜ್ಯದಲ್ಲಿ ಒಟ್ಟು 4.80 ಲಕ್ಷ ಇವಿಗಳಿವೆ. ಆಗಸ್ಟ್ 19 ರಂದು ಬಿಡುಗಡೆಯಾದ ಬ್ಯೂರೋ ಆಫ್ ಎನರ್ಜಿ ದಕ್ಷತೆಯ ವರದಿಯ ಪ್ರಕಾರ, ಕರ್ನಾಟಕವು 5,765 ಸಾರ್ವಜನಿಕ ಇವಿ ಚಾರ್ಜಿಂಗ್ ಸ್ಟೇಷನ್ಗಳನ್ನು ಹೊಂದಿದೆ, ಇದು ದೇಶದಲ್ಲೇ ಅತಿ ಹೆಚ್ಚಾಗಿದೆ. ಈ ಪೈಕಿ ಬೆಂಗಳೂರೊಂದರಲ್ಲೇ 4,462 ಚಾರ್ಜಿಂಗ್ ಸ್ಟೇಷನ್ಗಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ