AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಫ್ಯಾನ್ಸಿ ನಂಬರ್ ಹರಾಜು: ಒಂದೇ ನಂಬರ್ ಬರೋಬ್ಬರಿ 12.75 ಲಕ್ಷ ರೂ.ಗೆ ಸೇಲ್

ಅನೇಕ ಜನರು ಅದೃಷ್ಟ ಸಂಖ್ಯೆಗಳನ್ನು ಬಲವಾಗಿ ನಂಬುತ್ತಾರೆ. ಅದರ ಪ್ರಕಾರವೇ ಅವರು ತಮ್ಮ ದೈನಂದಿನ ದಿನಚರಿಯನ್ನು ಮಾಡುತ್ತಾರೆ. ಅಂಥವರು ವಾಹನ ಖರೀದಿಸುವಾಗ ನಂಬರ್ ಪ್ಲೇಟ್‌ನಲ್ಲಿ ಕೂಡ ತಮ್ಮ ಅದೃಷ್ಟದ ಸಂಖ್ಯೆಯನ್ನು ಬಯಸುತ್ತಾರೆ. ಇದಕ್ಕೆ ಅವರು ಹಣದ ಮುಖನೇ ನೋಡುವುದಿಲ್ಲ. ಅದರಂತೆ ಬೆಂಗಳೂರಿನಲ್ಲಿಂದು ಫ್ಯಾನ್ಸಿ ನಂಬರ್​ ಹರಾಜು ಪ್ರಕ್ರಿಯೆ ನಡೆದಿದ್ದು, ಇದರಲ್ಲಿ ಒಂದು ನಂಬರ್ ಬರೋಬ್ಬರಿ 12 ಲಕ್ಷದ 75 ಸಾವಿರ ರುಪಾಯಿಗೆ ಸೇಲಾಗಿದೆ. ಅಚ್ಚರಿ ಅನ್ನಿಸಿದರೂ ಸತ್ಯ. ಹಾಗಾದ್ರೆ, ಯಾವುದು ಆ ನಂಬರ್ ಎನ್ನುವ ವಿವರ ಇಲ್ಲಿದೆ ನೋಡಿ.

ಬೆಂಗಳೂರಿನಲ್ಲಿ ಫ್ಯಾನ್ಸಿ ನಂಬರ್ ಹರಾಜು: ಒಂದೇ ನಂಬರ್ ಬರೋಬ್ಬರಿ 12.75 ಲಕ್ಷ ರೂ.ಗೆ ಸೇಲ್
ಫ್ಯಾನ್ಸಿ ನಂಬರ್
Kiran Surya
| Updated By: ರಮೇಶ್ ಬಿ. ಜವಳಗೇರಾ|

Updated on: Aug 22, 2024 | 10:17 PM

Share

ಬೆಂಗಳೂರು, (ಆಗಸ್ಟ್ 22): KA-01 ND ಕೋರಮಂಗಲ ಆರ್​ಟಿಓಗೆ ಸೇರಿದ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ಇಂದು ನಡೆಯಿತು. ನಡೆಯಿತು. ಇದರಲ್ಲಿ ಒಟ್ಟು 62 ಫ್ಯಾನ್ಸಿ ನಂಬರ್ ಗಳನ್ನು ಹರಾಜಿಗಿಡಲಾಗಿತ್ತು. ಈ ಬಾರಿಯ ಫ್ಯಾನ್ಸಿ ‌ನಂಬರ್ ಹರಾಜಿನಲ್ಲಿ ಬರೋಬ್ಬರಿ 12 ಲಕ್ಷದ 75 ಸಾವಿರ ರೂಪಾಯಿಗೆ ಒಂದೇ ಒಂದು ಫ್ಯಾನ್ಸಿ ನಂಬರ್​ ಹರಾಜು ಕೂಗಲಾಯಿತು. ಇದರಿಂದ ರಾಜ್ಯ ಸಾರಿಗೆ ಇಲಾಖೆಗೆ ಬರೋಬ್ಬರಿ ಎಪ್ಪತ್ತೇಳು ಲಕ್ಷ ರುಪಾಯಿಗೂ ಹೆಚ್ಚು ಆದಾಯ ‌ಹರಿದು ಬಂದಿದೆ. ಹೌದು.. KA-01-ND/0001 12 ಲಕ್ಷದ 75 ಸಾವಿರ ರುಪಾಯಿಗೆ ಸೇಲ್ ಆಗಿದ್ದರೆ, KA-01-ND/0009 ನಂಬರ್ 5 ಲಕ್ಷಕ್ಕೆ ಹರಾಜಾಯಿತು.

ಇಂದು (ಆಗಸ್ಟ್ 22) ಮಧ್ಯಾಹ್ನ 12 ಗಂಟೆಗೆ ಶಾಂತಿನಗರ ರಾಜ್ಯ ‌ಸಾರಿಗೆ ಇಲಾಖೆಯ ಕಚೇರಿಯಲ್ಲಿ ಆರಂಭವಾದ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ಸುಮಾರು ಎರಡ್ಮೂರು ಗಂಟೆಗಳ ಕಾಲ ನಡೆಯಿತು. ಈ ಹಾರಾಜಿನಲ್ಲಿ ಹರಾಜಿನಲ್ಲಿ ಸುಮಾರು 50 ಕ್ಕೂ ಹೆಚ್ಚು ಜನರು ‌ಭಾಗಿಯಾಗಿದ್ದು, ಬೆಂಗಳೂರಿನ ಕೋಟಿ ಕುಳಗಳು ತಮ್ಮ ಲಕ್ಕಿ ನಂಬರ್ ಗಾಗಿ ಲಕ್ಷ ಲಕ್ಷ ಹರಾಜು ಕೂಗಿವೆ. ಸುಮಾರು 62 ಫ್ಯಾನ್ಸಿ ನಂಬರ್ ಗಳನ್ನು ಹರಾಜಿಗಿಡಲಾಗಿತ್ತು. ಇದರಿಂದ ರಾಜ್ಯ ಸಾರಿಗೆ ಇಲಾಖೆಗೆ ಲಕ್ಷಾಂತರ ರುಪಾಯಿ ಆದಾಯ ಹರಿದು ಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಫ್ಯಾನ್ಸಿ ನಂಬರ್ ಹರಾಜು: ಯಾವ ನಂಬರ್​ಗೆ ಎಷ್ಟು ಹಣ? ಇಲ್ಲಿದೆ ಪಟ್ಟಿ

ಹಾರಾಜಿನಲ್ಲಿದ್ದ ಫ್ಯಾನ್ಸಿ ನಂಬರ್ಸ್

0001, 1234, 99, 999, 0009,9009 0,333 4444, ,6666,1111,777,8888,8055, 4444, 2727, 3333, 5999, 6999, 0099 , 0555, 9999, 9000 & 9099, 4599 ಈ ನಂಬರ್​ಗಳು ಇಂದಿನ ಹರಾಜಿನಲ್ಲಿದ್ದವು. ಈ ಪೈಕಿ KA-01-ND/0001 ನಂಬರ್ 12 ಲಕ್ಷದ 75 ಸಾವಿರ ರುಪಾಯಿಗೆ ಹರಾಜಾದ್ರೆ KA-01-ND/ 0009 5ಲಕ್ಷಕ್ಕೆ ಸೇಲಾಗಿದೆ. ಉಳಿದಂತೆ KA-01-ND/9999 4 ಲಕ್ಷದ 75 ಸಾವಿರಕ್ಕೆ ಸೇಲ್ ಆದರೆ KA-01-ND- 0999 3 ಲಕ್ಷ ರೂ,ಗೆ ಹರಾಜಾಯಿತು.

ಇನ್ನೂ ಇಂದು ಹರಾಜಿಗಿಟ್ಟದ್ದ 62 ಫ್ಯಾನ್ಸಿ ನಂಬರ್ ಗಳ ಪೈಕಿ ಇಂದು ಹತ್ತು ಫ್ಯಾನ್ಸಿ ‌ನಂಬರ್ ಗಳು ಸೇಲಾದವು. ಇದರಿಂದ ರಾಜ್ಯ ಸಾರಿಗೆ ಇಲಾಖೆಗೆ ಒಟ್ಟು ಎಪ್ಪತ್ತೇಳು ಲಕ್ಷ ರುಪಾಯಿಗೂ ಹೆಚ್ಚು ಆದಾಯ ಬಂದಿದೆ. ಇನ್ನೂ ಇಂದಿನ ಹರಾಜು ಪ್ರಕ್ರಿಯೆಲ್ಲಿ 10 ಫ್ಯಾನ್ಸಿ ನಂಬರ್ ಗಳು ಮಾತ್ರ ಸೇಲ್ ಆಗಿದ್ದು, ಉಳಿದ ಉಳಿದ 52 ಫ್ಯಾನ್ಸಿ ನಂಬರ್ ಗಳನ್ನು ಕೋರಮಂಗಲ ಆರ್​ಟಿಓ ಕಚೇರಿಗೆ ಭೇಟಿ ನೀಡಿ ತಮಗೆ ಬೇಕಾದ ಫ್ಯಾನ್ಸಿ ನಂಬರ್ ತಮ್ಮದಾಗಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.

ಈ ವೇಳೆ ಮಾತಾನಾಡಿದ ಫ್ಯಾನ್ಸಿ ನಂಬರ್ ಪಡೆದ ಕಾರು ಮಾಲೀಕ, ನಾನು ಇಂದಿನ ಹರಾಜಿನಲ್ಲಿ 9009 ನಂಬರ್ ಅನ್ನು 50 ಸಾವಿರಕ್ಕೆ ಪಡೆದುಕೊಂಡೆ. ಇದೆ ನಂಬರ್ ಅನ್ನು ಈ ಹಿಂದೆ ಎರಡೂವರೆ ಲಕ್ಷ ಕೊಟ್ಟು ತೆಗೆದುಕೊಂಡಿದ್ದೆ. ಈ ನಂಬರ್ ಮೇಲೆ ಕ್ರೇಜ್ ಇದೆ. ಹಾಗಾಗಿ ತೆಗೆದುಕೊಂಡಿದ್ದೇನೆ ಎಂದರು.

ಅತಿ ಹೆಚ್ಚು ಹಣಕ್ಕೆ ಹರಾಜಾದ ಫ್ಯಾನ್ಸಿ ‌ನಂಬರ್ ಗಳು

  • KA-01-ND/0001: 12,75,000 ( ಹನ್ನೇರಡು ಲಕ್ಷದ ಎಪ್ಪತೈದು ಸಾವಿರ ರೂಪಾಯಿಗಳು)
  •  KA-01-ND/0009:  5,00,000 (ಐದು ಲಕ್ಷ ರೂಪಾಯಿಗಳು)
  • KA-01-ND/9999: 4,75,000( ನಾಲ್ಕು ಲಕ್ಷದ ಎಪ್ಪತೈದು ಸಾವಿರ ರೂಪಾಯಿಗಳು)
  • KA-01-ND/0999 : 3,00,000(ಮೂರು ಲಕ್ಷ ರೂಪಾಯಿಗಳು)
  • KA-01-ND/1234: 2,95,000(ಎರಡು ಲಕ್ಷದ ತೊಂಬತೈದು ಸಾವಿರ ರೂಪಾಯಿಗಳು)

ಒಟ್ಟಿನಲ್ಲಿ ಕೋಟಿ ಕೋಟಿ ಕುಳಗಳಿಗೆ ತಮ್ಮ ‌ತಮ್ಮ ಕಾರುಗಳಿಗೆ ತಮ್ಮ ಲಕ್ಕಿ ನಂಬರ್ ಗಳನ್ನು ಹಾಕೋದ್ರಲ್ಲಿ ಏನೋ ಒಂದು ಖುಷಿ, ಅದೊಂದು ತರ ಕ್ರೇಜ್. ಅದಕ್ಕಾಗಿ ಹಣ ಎಷ್ಟು ಖರ್ಚಾದರೂ ಸಹ ಸರಿ ಎನ್ನುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.