AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಶದಲ್ಲೇ ಮೊದಲ ಸೌರ ವಿದ್ಯುತ್ ಚಾಲಿತ ಇವಿ ಚಾರ್ಜಿಂಗ್ ಹಬ್

ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ದೇಶದಲ್ಲೇ ಮೊದಲ ಸೌರ ವಿದ್ಯುತ್ ಚಾಲಿತ ಇವಿ ಚಾರ್ಜಿಂಗ್ ಹಬ್ ಸ್ಥಾಪನೆಗೆ ಇಂಧನ ಇಲಾಖೆ ಮುಂದಾಗಿದೆ. ಕಾರುಗಳಲ್ಲಿ ಬಳಸಿ ಹಳೆಯದಾದ ಬ್ಯಾಟರಿಗಳನ್ನೇ ಉಪಯೋಗಿಸಿಕೊಂಡು ಸ್ಥಾಪನೆಯಾಗುವ ಇವಿ ಚಾರ್ಜಿಂಗ್ ಹಬ್ ವಿಶೇಷತೆಗಳ ಬಗ್ಗೆ ಬೆಸ್ಕಾಂ ನೀಡಿರುವ ಮಾಹಿತಿ ಇಲ್ಲಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಶದಲ್ಲೇ ಮೊದಲ ಸೌರ ವಿದ್ಯುತ್ ಚಾಲಿತ ಇವಿ ಚಾರ್ಜಿಂಗ್ ಹಬ್
ಸಾಂದರ್ಭಿಕ ಚಿತ್ರ
Ganapathi Sharma
|

Updated on: Aug 23, 2024 | 7:08 AM

Share

ಬೆಂಗಳೂರು, ಆಗಸ್ಟ್ 23: ಕ್ಯಾಬ್ ಅಗ್ರಿಗೇಟರ್‌ಗಳು ಮತ್ತು ಎಲೆಕ್ಟ್ರಿಕ್ ವೆಹಿಕಲ್ ಮಾಲೀಕರಿಗಾಗಿ ಇಂಧನ ಇಲಾಖೆಯು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತವು (ಬೆಸ್ಕಾಂ) ವಿದ್ಯುತ್ ಶೇಖರಣೆಗಾಗಿ ಸೆಕೆಂಡ್ ಲೈಫ್ ಕಾರ್ ಬ್ಯಾಟರಿಗಳನ್ನು (ಕಾರುಗಳಲ್ಲಿ ಬಳಸಿ ಹಳೆಯದಾದ) ಸಹ ಬಳಸಲಿದೆ. ಈ ‘ಸೆಕೆಂಡ್ ಲೈಫ್ ಬ್ಯಾಟರಿ ಸ್ಟೋರೇಜ್ ಇವಿ ಚಾರ್ಜಿಂಗ್ ಹಬ್’ ದೇಶದಲ್ಲೇ ಮೊದಲ ಉಪ್ರಕವಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

ಈಗಿರುವ ಬೆಸ್ಕಾಂನ 224ಕೆವಿ ಪವರ್ ಸ್ಟೇಷನ್ ಜಾಗದಲ್ಲಿ ಚಾರ್ಜಿಂಗ್ ಹಬ್ ಸ್ಥಾಪನೆಯಾಗಲಿದೆ. ಇದು ವಿಮಾನ ನಿಲ್ದಾಣದ ಪಾರ್ಕಿಂಗ್ ವಲಯದಿಂದ 1.5 ಕಿಮೀ ದೂರದಲ್ಲಿದೆ. ಇದರಲ್ಲಿ ಒಂದೇ ಬಾರಿಗೆ 24 ವಾಹನಗಳನ್ನು ಚಾರ್ಜ್ ಮಾಡಬಹುದು. ಮೂರು ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸಹ ಸ್ಥಾಪಿಸಲಾಗುತ್ತಿದೆ.

ಇವಿ ಚಾರ್ಜಿಂಗ್ ಹಬ್ ವಿಶೇಷಗಳು

  • 23 ಇವಿಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಲ್ಲ 400 ಕಿ.ವ್ಯಾ. ಸಾಮರ್ಥ್ಯದ ಬೃಹತ್ ಇವಿ ಚಾರ್ಜಿಂಗ್ ಹಬ್.
  • ಸೌರವಿದ್ಯುತ್‌ ಅನ್ನು ಸಂಗ್ರಹಿಸಿ ದಿನದ 24 ಗಂಟೆಗಳ ಕಾಲವೂ ಚಾರ್ಜಿಂಗ್ ಸೌಲಭ್ಯ ನೀಡುವ ದೇಶದ ಮೊದಲ ಇವಿ ಚಾರ್ಜಿಂಗ್ ಕೇಂದ್ರ.
  • 20 ಫಾಸ್ಟ್ ಚಾರ್ಜಿಂಗ್ ಪಾಯಿಂಟ್​​ಗಳ ಸ್ಥಾಪನೆ.
  • ಸೋಲಾ‌ರ್ ಇಂಟಿಗ್ರೇಟೆಡ್ ಹೊಂದಿದ್ದು, ತಲಾ ಎರಡು 45 ಕೆ.ವಿ ಸಾಮರ್ಥ್ಯದ 2nd ಲೈಫ್ ಬ್ಯಾಟರಿಗಳನ್ನು ಒಳಗೊಂಡಿರಲಿದೆ.

ಎಕ್ಸ್​​ನಲ್ಲಿ ಬೆಸ್ಕಾಂ ನೀಡಿರುವ ಸಂದೇಶ

ಈ ಇವಿ ಚಾರ್ಜಿಂಗ್ ಸ್ಟೇಷನ್​ ಅನ್ನು ಜಿಐಜಿ ಮತ್ತು ನೂನಮ್ ಕಂಪನಿಗಳ ಸಮನ್ವಯದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ನಾವು ಬಳಸಿದ ಕಾರ್ ಬ್ಯಾಟರಿಗಳನ್ನು ಆಯ್ಕೆ ಮಾಡುತ್ತಿದ್ದೇವೆ. ವಿದ್ಯುತ್ ಶೇಖರಣೆಗಾಗಿ ಅವುಗಳನ್ನು ಬಳಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಅತಿಹೆಚ್ಚು ಇವಿ ಚಾರ್ಜಿಂಗ್​ ಸ್ಟೇಷನ್: ಅಗ್ರ ಸ್ಥಾನದಲ್ಲಿ ಕರ್ನಾಟಕ

ಇವಿಗಳ ಸಂಖ್ಯೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ರಾಜ್ಯದಲ್ಲಿ ಒಟ್ಟು 4.80 ಲಕ್ಷ ಇವಿಗಳಿವೆ. ಆಗಸ್ಟ್ 19 ರಂದು ಬಿಡುಗಡೆಯಾದ ಬ್ಯೂರೋ ಆಫ್ ಎನರ್ಜಿ ದಕ್ಷತೆಯ ವರದಿಯ ಪ್ರಕಾರ, ಕರ್ನಾಟಕವು 5,765 ಸಾರ್ವಜನಿಕ ಇವಿ ಚಾರ್ಜಿಂಗ್ ಸ್ಟೇಷನ್​ಗಳನ್ನು ಹೊಂದಿದೆ, ಇದು ದೇಶದಲ್ಲೇ ಅತಿ ಹೆಚ್ಚಾಗಿದೆ. ಈ ಪೈಕಿ ಬೆಂಗಳೂರೊಂದರಲ್ಲೇ 4,462 ಚಾರ್ಜಿಂಗ್ ಸ್ಟೇಷನ್​ಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ