Video: ಬೆಂಗಳೂರು, ನಾಗಸಂದ್ರದಿಂದ ಪೀಣ್ಯ ಇಂಡಸ್ಟ್ರಿ ಮಧ್ಯೆ ಮೆಟ್ರೋ ಇಲ್ಲದೆ ಪ್ರಯಾಣಿಕರ ಪರದಾಟ

ಸಿಗ್ನಲಿಂಗ್ ಟೆಸ್ಟ್ ಕಾರಣ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಮಾಹಿತಿ ಕೊರತೆಯಿಂದ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಪರದಾಡುವಂತಾಯಿತು. ಈ ನಿಲ್ದಾಣಗಳ ನಡುವೆ ಯಾವಗಲೆಲ್ಲ ಮೆಟ್ರೋ ಸೇವೆ ಸ್ಥಗಿತವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

Video: ಬೆಂಗಳೂರು, ನಾಗಸಂದ್ರದಿಂದ ಪೀಣ್ಯ ಇಂಡಸ್ಟ್ರಿ ಮಧ್ಯೆ ಮೆಟ್ರೋ ಇಲ್ಲದೆ ಪ್ರಯಾಣಿಕರ ಪರದಾಟ
| Updated By: ಗಣಪತಿ ಶರ್ಮ

Updated on:Aug 23, 2024 | 9:35 AM

ಬೆಂಗಳೂರು, ಆಗಸ್ಟ್​ 23: ನಾಗಸಂದ್ರದಿಂದ ಮಾದಾವರ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಟೆಸ್ಟ್ ನಡೆಯುತ್ತಿರುವ ಕಾರಣ ನಮ್ಮ ಮೆಟ್ರೋ ಹಸಿರು ಮಾರ್ಗದ 3 ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರ ಸ್ಥಗಿತಹೊಂಡಿದೆ. ನಾಗಸಂದ್ರದಿಂದ ಪೀಣ್ಯ ಇಂಡಸ್ಟ್ರಿ ಮಧ್ಯೆ ಸಂಚಾರ ಸ್ಥಗಿತವಾಗಿದೆ. ಹೀಗಾಗಿ ಅನೇಕ ಪ್ರಯಾಣಿಕರು ಮೆಟ್ರೋ ಸ್ಟೇಷನ್​ಗೆ ಬಂದು ವಾಪಸ್​ ಹೋಗುತ್ತಿದ್ದಾರೆ. ಯಾವುದೇ ಮಾಹಿತಿ ಇಲ್ಲದ ಕಾರಣ ಅನೇಕ ಪ್ರಯಾಣಿಕರು ಸ್ಟೇಷನ್​ಗೆ ಬಂದು ವಾಪಸ್ ಹೋಗುತ್ತಿದ್ದಾರೆ.

ಸದ್ಯ ಪ್ರಯಾಣಿಕರು ಆಟೋ, ಕ್ಯಾಬ್​ಗಳ ಮೊರೆ ಹೋಗುತ್ತಿದ್ದು, ನಾಗಸಂದ್ರ ಟು ಪೀಣ್ಯ ಇಂಡಸ್ಟ್ರಿಗೆ ಆಟೋ ಚಾಲಕರು 50 ರೂ. ಕೇಳುತ್ತಿದ್ದಾರೆ.

ಪ್ರಯಾಣಿಕರೇ ಗಮನಿಸಿ

ಮೆಟ್ರೋ ಸಂಚಾರ ಸ್ಥಗಿತದ ಬಗ್ಗೆ ಬಿಎಂಆರ್​ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿತ್ತು. ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಆಗಸ್ಟ್ 20, 23 ಮತ್ತು 30 ಹಾಗೂ ಸೆಪ್ಟೆಂಬರ್ 6 ಮತ್ತು 11 ರಂದು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಎಂಆರ್​ಸಿಎಲ್ ತಿಳಿಸಿತ್ತು.

ಇದನ್ನೂ ಓದಿ: ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ: ಈ ದಿನಗಳಂದು ಸಂಪೂರ್ಣ ಸ್ಥಗಿತ

ಬಿಎಂಆರ್​ಸಿಎಲ್​ನಿಂದ ಬಸ್ ವ್ಯವಸ್ಥೆ

ಆಟೋ ಚಾಲಕರು ದುಪ್ಪಟ್ಟು ದರ ವಸೂಲಿಗೆ ಮುಂದಾದ ಬೆನ್ನಲ್ಲೇ ಮೆಟ್ರೋ ಪ್ರಯಾಣಿಕರಿಗಾಗಿ ಬಿಎಂಟಿಸಿ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಬಿಎಂಆರ್​ಸಿಎಲ್ ಹತ್ತು ಮೆಟ್ರೋ ಫೀಡರ್ ಬಸ್​​ಗಳ ವ್ಯವಸ್ಥೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:25 am, Fri, 23 August 24

Follow us
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್