Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara Mahotsav 2024: ಅರಮನೆಗೆ ಆಗಮಿಸಿದ ಆನೆಗಳಿಗೆ ರಾಜಮರ್ಯಾದೆ ಜೊತೆ ಅದ್ದೂರಿ ಸ್ವಾಗತ

Dasara Mahotsav 2024: ಅರಮನೆಗೆ ಆಗಮಿಸಿದ ಆನೆಗಳಿಗೆ ರಾಜಮರ್ಯಾದೆ ಜೊತೆ ಅದ್ದೂರಿ ಸ್ವಾಗತ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 23, 2024 | 11:58 AM

Dasara Mahotsav 2024: ಪ್ರತಿ ದಸರಾ ಉತ್ಸವದಲ್ಲಿ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಆನೆಗಳಿಗೆ ಇದೇ ತೆರನಾದ ಸ್ವಾಗತ ಸಿಗುತ್ತದೆ. ಇಂದಿನಿಂದ ಅನೆಗಳಿಗೆ ರಾಜಾತಿಥ್ಯ. ಅವುಗಳಿಗೆ ಇಷ್ಟವಾಗುವ, ಕಬ್ಬು, ಕೊಬ್ಬರಿ ಮತ್ತು ವಿಶೇಷವಾಗಿ ತಯಾರಿಸಲಾದ ಭಕ್ಷ್ಯಗಳನ್ನು ನೀಡಲಾಗುತ್ತದೆ. ಆನೆಗಳ ಮಾವುತ ಮತ್ತು ಕಾವಾಡಿಗರಿಗೆ ಅರಮನೆ ಆವರಣದಲ್ಲಿ ಶೆಡ್ ಗಳನ್ನು ನಿರ್ಮಿಸಿ ವಾಸ್ತವ್ಯದ ಏರ್ಪಾಟು ಮಾಡಲಾಗುತ್ತದೆ.

ಮೈಸೂರು: ಒಂದು ಸಂಸ್ಥಾನದ ದೊರೆ ಮತ್ತೊಂದು ಸಂಸ್ಥಾನದ ದೊರೆಯ ಸಾಮ್ರಾಜ್ಯಕ್ಕೆ ಸೌಹಾರ್ದಯುತ ಭೇಟಿ ನೀಡಿದಾಗಲೂ ಆತನಿಗೆ ಇಂಥ ಸ್ವಾಗತ ದೊರೆತಿರಲಿಕ್ಕಿಲ್ಲ ಅನಿಸುತ್ತೆ. ಮೈಸೂರಿನ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ ಗಜಪಡೆಗೆ ಅರಮನೆಯಲ್ಲಿ ಸಿಕ್ಕಿದ್ದು ಭವ್ಯ ಮತ್ತು ಅಭೂತಪೂರ್ವ ಸ್ವಾಗತ. ಆನೆಗಳು ಅರಮನೆಯ ಮುಖ್ಯದ್ವಾರದ ಬಳಿ ಆಗಮಿಸುತ್ತಿದ್ದಂತೆಯೇ ಸಿಬ್ಬಂದಿಯೊಬ್ಬರು ಕಹಳೆ ಊದಿದರು. ಅರಮನೆ ಮುಂಭಾಗದ ಮೇಲ್ಗಡೆ ಸಿಬ್ಬಂದಿಯು ಒಡೆಯರ್ ಸಂಸ್ಥಾನದ ಪೋಷಕಿನಲ್ಲಿ ನಿಂತಿರುವುದನ್ನು ನೋಡಬಹುದು. ಇತ್ತ ಕೆಳಗೆ ಅರಮನೆಯ ಅವರಣದಲ್ಲಿ ಸೈನಿಕರ ಫೋಷಾಕಿನಲ್ಲಿ ಸಿಬ್ಬಂದಿ ಗಜಪಡೆಯ ಸ್ವಾಗತಕ್ಕೆ ನಿಂತಿರುವುದು ದೃಶ್ಯಗಳಲ್ಲಿ ಕಾಣುತ್ತದೆ. ಅವರ ಹಿಂದೆ ಅಶ್ವಪಡೆ, ಅಶ್ವಾರೋಹಿಗಳು ಸಹ ರಾಜಮನೆನದ ಪೋಷಾಕಿನಲ್ಲಿದ್ದಾರೆ. ಅಶ್ವಪಡೆಯ ಹಿಂದೆ ಇಂಗ್ಲಿಷ್ ಬ್ಯಾಂಡ್. ಹೆಸರೇ ಹೇಳುವ ಹಾಗೆ ಈ ಬ್ಯಾಂಡ್​ನವರು ಇಂಗ್ಲಿಷ್ ನವರಂತೆ ಸೂಟು, ಬೂಟು ಮತ್ತು ಹ್ಯಾಟು ಧರಿಸಿದ್ದಾರೆ. ಅವರ ಹಿಂದೆ ನಡೆದು ಬಂದಿದ್ದು ಅಭಿಮನ್ಯು ನೇತೃತ್ವದ ದಸರಾ ಅನೆಗಳು. ಈ ರಾಜ ಮರ್ಯಾದೆ ಮತ್ತು ಅದ್ದೂರಿ ಸ್ವಾಗತಕ್ಕೆ ಗಜಪಡೆ ಅತ್ಯಂತ ಅರ್ಹ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು ದಸರಾ ಗಜಪಡೆಯಲ್ಲಿ ಗಮನ ಸೆಳೆಯುತ್ತಿವೆ ಬಂಡೀಪುರದ ಮೂರು ಆನೆಗಳು! ಏನಿವುಗಳ ವಿಶೇಷ?