ಬೆಂಗಳೂರಿನಲ್ಲಿ ಫ್ಯಾನ್ಸಿ ನಂಬರ್ ಹರಾಜು: ಯಾವ ನಂಬರ್ಗೆ ಎಷ್ಟು ಹಣ? ಇಲ್ಲಿದೆ ಪಟ್ಟಿ
ಯುವ ಜನತೆಯಲ್ಲಿ ಫ್ಯಾಷನ್ ಕ್ರೇಜ್ ಹೆಚ್ಚಾಗಿದೆ. ತಾವು ಏನೇ ಮಾಡಿದರೂ ಡಿಫ್ರೆಂಟ್ ಆಗಿ ಇರಬೇಕು ಎಂಬ ಮನಸ್ಥಿತಿ ಬೆಳಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಬಳಿ ಇರುವ ವಸ್ತುಗಳ ಸಹ ಹಾಗೇ ಕೂಡಿರಬೇಕು ಎಂಬುದು ಅವರ ಆಶಯ. ಹೀಗಾಗಿ ಈಗಿನ ಯುವ ಜನ, ತಮ್ಮ ವಾಹನಗಳಿಗೆ ಹೆಚ್ಚಾಗಿ ಫ್ಯಾನ್ಸಿ ನಂಬರ್ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಾರೆ. ಅದರಂತೆ ಬೆಂಗಳೂರಿನಲ್ಲಿ ಇಂದು ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ನಡೆದಿದ್ದು, ನಂಬರ್ಗೆ ಲಕ್ಷ ಲಕ್ಷ ಹಣ ನೀಡಿದ್ದಾರೆ.
ಬೆಂಗಳೂರು, (ಆಗಸ್ಟ್ 07): ಬೆಂಗಳೂರಿನ ಜಯನಗರ ಆರ್ಟಿಓಗೆ ಸೇರಿದ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ಇಂದು(ಆಗಸ್ಟ್ 07) ಮಧ್ಯಾಹ್ನ 12 ಗಂಟೆಗೆ ಶಾಂತಿನಗರ ರಾಜ್ಯ ಸಾರಿಗೆ ಇಲಾಖೆಯ ಕಚೇರಿಯಲ್ಲಿ ನಡೆಯಿತು. ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ಸುಮಾರು ಎರಡ್ಮೂರು ಗಂಟೆಗಳ ಕಾಲ ನಡೆಯಿತು. ಇದರಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ತಮ್ಮ ಲಕ್ಕಿ ನಂಬರ್ ಗಾಗಿ ಬೆಂಗಳೂರಿನ ಕೋಟಿ ಕುಳಗಳು ಲಕ್ಷ ಲಕ್ಷ ಹರಾಜು ಕೂಗಿದರು. KA-05-NM/0001 4 ಲಕ್ಷದ 85 ಸಾವಿರ ರುಪಾಯಿಗೆ ಸೇಲ್ ಆಗಿದ್ದರೆ, KA-05-NM:9999 2 ಲಕ್ಷದ 5 ಸಾವಿರ ರೂ.ಗೆ ಹರಾಜಾಗಿದೆ. ಹೀಗೆ ಸುಮಾರು 62 ಫ್ಯಾನ್ಸಿ ನಂಬರ್ ಗಳನ್ನು ಹರಾಜಿಗಿಡಲಾಗಿದ್ದು, ಇದರಿಂದ ರಾಜ್ಯ ಸಾರಿಗೆ ಇಲಾಖೆಗೆ ಹರಿದು ಬಂತು ಕೋಟ್ಯಾಂತರ ರುಪಾಯಿ ಹರಿದುಬಂದಿದೆ.
ಹರಾಜು ಪ್ರಕ್ರಿಯೆಯಲ್ಲಿದ್ದ ಫ್ಯಾನ್ಸಿ ನಂಬರ್ ಗಳಿವು
0001, 0027, 99, 999, 0555, 0,333 4444, ,6666,1111,777,8888,8055, 4444,2727,3333 5999, 6999, 0099 , 0555, 9999, 9000 ಮತ್ತು 9099, 4599 ಈ ಫ್ಯಾನ್ಸಿ ನಂಬರ್ಗಳ ಪೈಕಿ KA-05-NM/0001 ನಂಬರ್ 4 ಲಕ್ಷದ 85 ಸಾವಿರ ರುಪಾಯಿಗೆ ಸೇಲ್ ಆಗಿದ್ದರೆ, KA-05-NM/9999 2 ಲಕ್ಷದ 5 ಸಾವಿರ ರುಪಾಯಿ ಹರಾಜಾಯಿತು. ಇನ್ನು KA-05-NM-0009 1ಲಕ್ಷ ರೂ., KA-05-NM- 6666 1ಲಕ್ಷದ 70 ಸಾವಿರಕ್ಕೆ ಸೇಲ್ ಆಗಿದೆ.
ಇದನ್ನೂ ಓದಿ: ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ದರ ನಿಗದಿಪಡಿಸಿದ ಸರ್ಕಾರ
ಅತಿ ಹೆಚ್ಚು ಹಣಕ್ಕೆ ಸೇಲ್ ಆದ ಫ್ಯಾನ್ಸಿ ನಂಬರ್ಗಳು
- KA-05-NM/0001: 4,85,000 ರೂ. ( ನಾಲ್ಕು ಲಕ್ಷದ ಎಂಬತೈದು ಸಾವಿರ ರೂಪಾಯಿಗಳು)
- KA-05-NM/9999: 2,5,000 (ಎರಡು ಲಕ್ಷದ ಐದು ಸಾವಿರ ರೂಪಾಯಿಗಳು)
- KA-05-NM/0009: 1,75,000( ಒಂದು ಲಕ್ಷದ ಎಪ್ಪತೈದು ಸಾವಿರ ರೂಪಾಯಿಗಳು)
- KA-05-NM/6666: 1,70,000(ಒಂದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿಗಳು)
- KA-05-NM/8888: 1,50,000(ಒಂದು ಲಕ್ಷದ ಐವತ್ತು ಸಾವಿರ ರೂಪಾಯಿಗಳು)
ಇನ್ನೂ ಇಂದು ಹರಾಜಿಗಿಟ್ಟದ್ದ 62 ಫ್ಯಾನ್ಸಿ ನಂಬರ್ ಗಳ ಪೈಕಿ ಇಂದು ಮೂವತ್ತಕ್ಕೂ ಹೆಚ್ಚು ಫ್ಯಾನ್ಸಿ ನಂಬರ್ ಗಳು ಹರಾಜಾಯಿತು, ಇದರಿಂದ ರಾಜ್ಯ ಸಾರಿಗೆ ಇಲಾಖೆಗೆ ಒಟ್ಟು ಒಂದೂ ಕೋಟಿ ರುಪಾಯಿಗೂ ಹೆಚ್ಚು ಆದಾಯ ಬಂದಿದೆ. ಇಂದಿನ ಹರಾಜು ಪ್ರಕ್ರಿಯೆಲ್ಲಿ 30 ಫ್ಯಾನ್ಸಿ ನಂಬರ್ ಗಳು ಮಾತ್ರ ಸೇಲ್ ಆಗಿದ್ದು, ಉಳಿದ 32 ಫ್ಯಾನ್ಸಿ ನಂಬರ್ ಗಳನ್ನು ಜಯನಗರ ಆರ್ಟಿಓ ಕಚೇರಿಗೆ ಭೇಟಿ ನೀಡಿ ತಮಗೆ ಬೇಕಾದ ಫ್ಯಾನ್ಸಿ ನಂಬರ್ ತಮ್ಮದಾಗಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.
ಈ ವೇಳೆ ಮಾತಾನಾಡಿದ ಫ್ಯಾನ್ಸಿ ನಂಬರ್ ಪಡೆದ ಕಾರು ಮಾಲೀಕ ಸಾಗರ್, 0001 ನಂಬರ್ ಅನ್ನು ಹರಾಜಿನಲ್ಲಿ ತೆಗೆದುಕೊಳ್ಳಲು ನಾನು 4 ಲಕ್ಷದ 85 ಸಾವಿರ ನೀಡಿದ್ದೇನೆ. ನನ್ನ ಬಳಿಯಿರುವ BMW, ಆಡಿ ಸೇರಿದಂತೆ ಎಲ್ಲಾ ಕಾರುಗಳಿಗೂ 0001 ನಂಬರ್ ಅನ್ನು ಹರಾಜಿನಲ್ಲಿ ತೆಗೆದುಕೊಂಡಿದ್ದೇನೆ. ಈ ನಂಬರ್ ಅಂದರೆ ನನಗೆ ಖುಷಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Published On - 10:50 pm, Wed, 7 August 24