ಬಿಎಂಟಿಸಿ ಬಸ್​ ಮೇಲೆ ಬಿತ್ತು ರೈಲ್ವೇ ಬ್ರಿಡ್ಜ್​ಗೆ ಹಾಕಿದ್ದ ಕಬ್ಬಿಣದ ಶೀಟ್​; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಆನಂದ್ ರಾವ್ ಸರ್ಕಲ್ ಹಾಗೂ ಶೇಷದ್ರಿ ಪುರಂಗೆ ಹೋಗುವ ರೈಲ್ವೆ ಅಂಡರ್ ಪಾಸ್ ಬಳಿ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಬಾರಿ ದುರಂತ ತಪ್ಪಿದೆ. ಕಬ್ಬಿಣದ ಶೀಟ್​ಗಳು ಜನರ ಮೇಲೆ ಬಿದ್ದಿದ್ದರೆ, ಯಾರು ಹೊಣೆ ಎಂದು ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿ ಬಸ್​ ಮೇಲೆ ಬಿತ್ತು ರೈಲ್ವೇ ಬ್ರಿಡ್ಜ್​ಗೆ ಹಾಕಿದ್ದ ಕಬ್ಬಿಣದ ಶೀಟ್​; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ಬಸ್ ಮೇಲೆ ಶೀಟ್ ತಪ್ಪಿದ ಬಾರಿ ಅನಾಹುತ
Edited By:

Updated on: Oct 24, 2021 | 2:07 PM

ಬೆಂಗಳೂರು: ರೈಲ್ವೆ ಬ್ರಿಡ್ಜ್​ಗೆ ಹಾಕಿದ್ದ ಕಬ್ಬಿಣದ ಶೀಟ್ ಬಿಎಂಟಿಸಿ ಬಸ್ ಮೇಲೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆನಂದ್ ರಾವ್ ಸರ್ಕಲ್ ಹಾಗೂ ಶೇಷದ್ರಿ ಪುರಂಗೆ ಹೋಗುವ ರೈಲ್ವೆ ಅಂಡರ್ ಪಾಸ್ ಬಳಿ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಬಾರಿ ದುರಂತ ತಪ್ಪಿದೆ. ಕಬ್ಬಿಣದ ಶೀಟ್​ಗಳು ಜನರ ಮೇಲೆ ಬಿದ್ದಿದ್ದರೆ, ಯಾರು ಹೊಣೆ ಎಂದು ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಇಲಾಖೆಯ ಮಹಾ ಯಡವಟ್ಟು
ರೈಲ್ವೆ ಇಲಾಖೆಯ ಯಡವಟ್ಟಿನಿಂದಾಗಿ ಬೆರಳಣಿಕೆಯ ಸಮಯದಲ್ಲಿ ಜನರು ಪಾರಾಗಿದ್ದಾರೆ. ವಾಹನ ಸವಾರರು ಸಾವಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಅಲ್ಲದೇ ಅಂಡರ್ ಪಾಸ್ ರೈಲ್ವೇ ಬ್ರೀಡ್ಜ್​ಗಳು ಅದ್ವಾನದ ಹಾದಿ ಹಿಡಿದಿವೆ. ಸಾಲದಕ್ಕೆ ರೈಲು ಸಂಚರಿಸುವಾಗ ಗಲೀಜು ಬೀಳಬಾರದು ಎನ್ನುವ ಕಾರಣಕ್ಕೆ ರೈಲ್ವೆ ಹಳಿಗೆ ಶೀಟ್​ಗಳನ್ನು ಅಳವಾಡಿಕೆ ಮಾಡಲಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಯಿಂದಾಗಿ ರೈಲ್ವೆ ಟ್ರಾಕ್​ಗೆ ಹಾಕಾಲಾಗಿದ್ದ ಶೀಟ್ ಕೆಳಗೆ ಬಿದ್ದಿದೆ. ಮಲಮೂತ್ರ ರಸ್ತೆಗೆ ಬೀಳದಂತೆ ತಡೆಯಲು ಹಾಕಿದ್ದ ಸೆಕ್ಯುರ್ ಪ್ಲೇಟ್ಸ್ ನೇತಾಡುತ್ತಿದೆ. ಶೇಷಾದ್ರಿಪುರಂ ಬಳಿಯಿರುವ ರೈಲ್ವೆ ಬ್ರಿಡ್ಜ್​ಗೆ ಹಾಕಿದ್ದ ತಗಡಿನ ಶೀಟ್​ಗಳು ಅಪಾಯಕಾರಿಯಾಗಿ ರಸ್ತೆಯಲ್ಲಿ ಜೊತು ಬಿದ್ದಿದೆ. ಸದ್ಯ ಸ್ಥಳಕ್ಕೆ ಆಗಮಿಸಿ ಪರೀಶೀಲಿಸುತ್ತಿರುವ ಪೊಲೀಸ್ ಹಾಗೂ ರೈಲ್ವೆ ಅಧಿಕಾರಿಗಳ ತಂಡ ಬಸ್ ಸಂಚಾರ ಮಾಡುವಾಗ ಶೀಟ್​ಗೆ ತಾಗಿರಬಹುದು ಎಂದು ಹೇಳಿವೆ.

ನಮ್ಮ ಮೆಟ್ರೋ ಕಾಮಗಾರಿ ವೇಳೆ ಎಡವಟ್ಟು; 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್ ಕಟ್
ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ ಸಂಭವಿಸಿದೆ. ನಮ್ಮ ಮೆಟ್ರೋ ಫೇಸ್-2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಹುದೊಡ್ಡ ಮಷೀನ್ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ. ಮೆಟ್ರೋ ಸೆಗ್ಮೆಂಟ್ಸ್ ಜೋಡಿಸುವ ಮಷೀನ್ ಅರ್ಧಕ್ಕೆ ಕಟ್ ಆಗಿದೆ.

ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಜೋಡಣೆ ವೇಳೆ ಈ ಘಟನೆ ಸಂಭವಿಸಿದ್ದು ಬೆಳಗ್ಗೆ 6.30ರ ಸುಮಾರಿಗೆ ಕ್ರೇನ್ ಕೆಳಗೆ ಬಿದ್ದಿದೆ. ಸದ್ಯ ಕರ್ತವ್ಯನಿರತ ನೂರಾರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ಮಾರ್ಗವಾಗಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ವೇಳೆ ಅಸಂಬಲ್ ಜೋಡಿಸುವಾಗ ಲಾಂಚಿಂಗ್ ಗಾರ್ಡ್ ಎಂಬ ಬೃಹತ್ ಮಷೀನ್ ದಿಢೀರ್ ಕುಸಿದು ಕೆಳಗೆಬಿದ್ದಿದೆ. ಮಷೀನ್ ಅರ್ಧಕ್ಕೆ ಕಟ್ ಆಗಿದೆ. ಮಷೀನ್ ಮೇಲೆತ್ತಲು ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ. ಘಟನೆ ನಡೆದು 6 ಗಂಟೆ ಕಳೆದರೂ ಇದುವರೆಗೂ ಸ್ಥಳಕ್ಕೆ ಯಾವೊಬ್ಬ ಮೆಟ್ರೋ ಅಧಿಕಾರಿಯೂ ಭೇಟಿ ನೀಡಿಲ್ಲ.

ಇದನ್ನೂ ಓದಿ:
BMTC Revenue: ಸಾರಿಗೆ ಸಿಬ್ಬಂದಿಗೆ ಬಿಎಂಟಿಸಿಯಿಂದ ಟಾರ್ಗೆಟ್ ಟಾರ್ಚರ್!

ವಾಯ್ಸ್ ರೆಕಾರ್ಡ್ ಕಳಿಸಿ ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ; ನಿಯಂತ್ರಣಾಧಿಕಾರಿಗಳ ವಿರುದ್ಧ ಮಾನಸಿಕ ಕಿರುಕುಳ ಆರೋಪ

Published On - 1:50 pm, Sun, 24 October 21

TV9 Web

TV9 Kannada

Read More
Loading...
Unable to load recommendations.
Follow Us